MUDA Scam: ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ವಾರಾಂತ್ಯಕ್ಕೆ ಗೊತ್ತಾಗಲಿದೆ: ವಿ.ಸೋಮಣ್ಣ
ಬೆಂಗಳೂರು, ಸೆಪ್ಟಂಬರ್ 25: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ಹಾಗೂ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಅವರು ತೆರೆದ ಪುಸ್ತಕವಾದರೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಅವರು ಈ ವಾರಾಂತ್ಯಕ್ಕೆ ಒಂದಷ್ಟು ಬದಲಾವಣೆಗಳು ಆಗುತ್ತವೆ ಕಾಯುತ್ತಿರಿ ಎಂದರು.
ಹುಬ್ಬಳ್ಳಿಗೆ ಬುಧವಾರ ಆಗಮಿಸಿದ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಮುಡಾ ಹಗರಣ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ FIR ದಾಖಲಾಗಲಿದೆ ಎಂಬ ಪ್ರಶ್ನೆ ಉತ್ತಿಸಿದ ಅವರು, ಕಾನೂನಿಗಿಂತ ಸಿದ್ದರಾಮಯ್ಯ ಅವರಾಗಲಿ, ಯಾರೇ ಆಗಲಿ ದೊಡ್ಡವರಲ್ಲ. ಇದನ್ನು ಎರಡು ನ್ಯಾಯಾಲಯಗಳು ಎತ್ತಿ ತೋರಿಸಿವೆ ಎಂದು ಹೇಳಿದರು.

ಎರಡ್ಮೂರು ದಿನಗಳಲ್ಲಿ ರಾಜೀನಾಮೆ ಬಗ್ಗೆ ಗೊತ್ತಾಗಲಿದೆ!
ಜವಾಬ್ದಾರಿ ಹೊತ್ತುಕೊಂಡಾಗ ಒಂದು ಕಹಿ ಘಟನೆ ಆಗತ್ತಿರುತ್ತವೆ. ಇಂತಹ ಘಟನೆಗಳನ್ನು ಬಹಳ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಸಿದ್ದರಾಮಯ್ಯನವರೇ ಹೇಳಿರುವಂತೆ ಅವರು ತೆರೆದ ಪುಸ್ತಕವಾಗಿದ್ದರೆ ಕೂಡಲೇ ರಾಜೀನಾಮೆ ಕೊಡಬೇಕು. ಮುಂದಿನ ಎರಡು ಮೂರು ದಿನಗಳಲ್ಲಿ ಎಲ್ಲವು ಗೊತ್ತಾಗಲಿದೆ ಎಂದು ತಿಳಿಸಿದರು.
ಕಾನೂನು ವಿರುದ್ಧ ಯಾರು ದೊಡ್ಡವರಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಶಾಸಕಾಂಗ ಹಾಗೂ ಕಾರ್ಯಾಂಗ ಮುಂದೆ ನ್ಯಾಯಾಂಗ ತನ್ನದೇ ಆದ ಮಹತ್ವವನ್ನು ಹೊಂದಿದೆ. ಎರಡು ಆದೇಶಗಳನ್ನು ನಾನು ಸ್ವಾಗತಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಮಾಡುವವರ ವಿರುದ್ಧವೋ ತಮ್ಮ ಹೋರಾಟ ವಿಚಾರ ಬಗ್ಗೆ ಮಾತನಾಡಿದರು. ಈ ದೇಶಕ್ಕೆ ದೊಡ್ಡ ಭವಿಷ್ಯ ಇದೆ, ಎಂತಹ ಸಂದರ್ಭಗಳಲ್ಲಿ ಯಾರೆಲ್ಲ ಹೇಗೆ ನಡೆದುಕೊಂಡಿದ್ದಾರೆ ಎಂದು ಗೊತ್ತಿದೆ ಎಂದು ಮಾರ್ಮಿಕವಾಗಿ ತಿಳಿಸಿದರು.
ಸಿದ್ದರಾಮಯ್ಯ ಅವರು ಈ ದೇಶದ ನ್ಯಾಯಾಂಗ ವ್ಯವಸ್ಥೆ ನೀಡಿರುವ ಆದೇಶಗಳಿಗೆ ತಲೆ ಬಾಗುತ್ತಾರೆ ಎಂಬ ವಿಶ್ವಾಸ ಇದೆ. ಅವರು ಕಾನೂನಿಗೆ ಗೌರವ ಕೊಡುತ್ತಾರೆ. ಎಲ್ಲವು ಇನ್ನು ಎರಡು ಮೂರು ದಿನಗಳಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.ಸಿಎಂ
ರಾಜೀನಾಮೆಗೆ ಆಗ್ರಹಿಸಿ ಕರ್ನಾಟಕ ಬಿಜೆಪಿ ಪ್ರತಿಭಟನೆ
ಇನ್ನೂ ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಬಿಜೆಪಿಯು ಗುರುವಾರ ಬೆಳಗ್ಗೆ ವಿಧಾನಸೌಧ ಗಾಂಧಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸಲಿದೆ. ಶಾಸಕರು, ಮುಖಂಡರು, ಕಾರ್ಯಕರ್ತರು ಈ ಪ್ರತಿಬಟನೆಯಲ್ಲಿ ಪಾಲ್ಗೊಂಡು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಲಿದ್ದಾರೆ.
ಹೈಕೋರ್ಟ್ ಮಾತ್ರವಲ್ಲದೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಹ ನಿಮ್ಮ ವಿರುದ್ಧ ತನಿಖೆಗೆ ಆದೇಶ ನೀಡಿ ತೀರ್ಪು ಪ್ರಕಟಿಸಿದೆ. ನ್ಯಾಯಾಲಯದ ಆದೇಶ ಪ್ರಕಾರ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಸೂಕ್ತ ತನಿಖೆ ನಡೆಸಬೇಕು. ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಏಕೆಂದರೆ ಅವರು ಅಧಿಕಾರದಲ್ಲಿದ್ದರೆ, ನ್ಯಾಯಸಮ್ಮತ ತನಿಖೆ ಅಸಾಧ್ಯ, ಹೀಗಾಗಿ ರಾಜೀನಾಮೆಗೆ ರಾಜ್ಯ ಬಿಜೆಪಿ ಆಗ್ರಹಿಸಿ ಟ್ವೀಟ್ ಮಾಡಿದೆ.












Click it and Unblock the Notifications