Get Updates
Get notified of breaking news, exclusive insights, and must-see stories!

ತರಕಾರಿ ಮಾರಾಟ ಮಾಡುವಾಗ ಅಸಭ್ಯ ವರ್ತನೆ, ಮಾರಾಟಗಾರನ ವರ್ತನೆಗೆ ವಿರೋಧ

ಕಾರವಾರದ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವಾಗವ್ಯಕ್ತಿಯೊಬ್ಬ ತರಕಾರಿಗಳ ಮೇಲೆ ಉಗುಳಿದ್ದಾನೆ ಎನ್ನುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ತರಕಾರಿ ವ್ಯಾಪಾರಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವಿಷಯದ ಬಗ್ಗೆ ಇದೀಗ ಪರ - ವಿರೋಧ ಚರ್ಚೆಯಾಗುತ್ತಿದೆ. ಹಾಗಾದರೆ, ವೈರಲ್‌ ವಿಡಿಯೋದಲ್ಲಿ ಇರುವುದು ಏನು ಈ ಚರ್ಚೆಯಾಕೆ ಎನ್ನುವ ವಿವರ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿರುವ ವ್ಯಕ್ತಿಯ ವಿಡಿಯೋ ಸಹ ಒಂದು. ಕಾರವಾರದಲ್ಲಿ ತರಕಾರಿ ಮಾರಾಟ ಮಾಡುವ ವ್ಯಕ್ತಿ ತರಕಾರಿಗಳಿಗೆ ನೀರು ಸಿಂಪಡಣೆ ಮಾಡುವಾಗ ಉಗುಳಿದ್ದಾನೆ. ಅಲ್ಲದೇ ನೀರಿನೊಂದಿಗೆ ಮೂತ್ರವನ್ನೂ ಸೇರಿಸಿದ್ದಾನೆ ಎಂದೂ ಆರೋಪಿಸಲಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ.

Urine sprayed by a Muslim man while selling vegetables in a Karwar

ಕಾರವಾರದಲ್ಲಿ ವಿವಿಧ ಜಿಲ್ಲೆಗಳಿಂದ ತರಕಾರಿ ಮಾರಾಟ ಮಾಡುವವರು ತರಕಾರಿಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಾರೆ. ಈ ವ್ಯಕ್ತಿಯೂ ಸಹ ಹಾವೇರಿಯಿಂದ ತರಕಾರಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ತರಕಾರಿಯ ಮೇಲೆ ಎಂಜಲು ಉಗುಳಿದ ಆರೋಪದ ಮೇಲೆ ಆತನನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಆದರೆ, ಇದಕ್ಕೆ ಪರ - ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ವ್ಯಕ್ತಿ ಹಾವೇರಿಯಲ್ಲಿ ಎಂದಿನಂತೆ ತರಕಾರಿ ಮಾರಾಟವನ್ನು ಮಾಡುವಾಗ ತರಕಾರಿಯ ಮೇಲೆ ಎಂಜಲು ಉಗುಳಿದ್ದಾನೆ ಎನ್ನಲಾಗಿದೆ. ಇದನ್ನು ದಾರಿಯಲ್ಲಿ ಹೋಗುತ್ತಿದ್ದ ಒಬ್ಬರು ವಿಡಿಯೋ ಮಾಡಿಕೊಂಡು ಆ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾನೆ ಎನ್ನಲಾಗಿದೆ.

ತರಕಾರಿಯ ಮೇಲೆ ಎಂಜಲು ಉಗುಳಿದ್ದಾನೆ ಎನ್ನುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಆತನ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ಸಹ ಹೇಳಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತವಾಗಿ ವರದಿಯಾಗಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಈ ಬಗ್ಗೆ ಹಲವು ವಿಡಿಯೋಗಳು ಹರಿದಾಡುತ್ತಿದ್ದು. ಇದರಲ್ಲಿ ಹಲವು ವಿಡಿಯೋಗಳು ಸುಳ್ಳು ಎನ್ನುವುದು ನೋಡಿದರೆ ಅರ್ಥವಾಗುತ್ತದೆ.

ಈ ವಿಡಿಯೋದ ಬಗ್ಗೆ ಜನರು ಪರ ವಿರೋಧ ಚರ್ಚೆಯಾಗ್ತಿದೆ.

ಸತ್ಯಾಸತ್ಯೆಯ ಬಗ್ಗೆ ಅನುಮಾನ: ಈ ವಿಡಿಯೋದ ಸತ್ಯಾ ಸತ್ಯತೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತರಕಾರಿಗೆ ನೀರು ಸಿಂಪಡಣೆ ಮಾಡುತ್ತಿರುವುದು ರೆಕಾರ್ಡ್‌ ಆಗಿದೆಯಾದರೂ, ಏನು ಮಾಡಿದ್ದಾನೆ ಎನ್ನುವ ಬಗ್ಗೆ ಯಾವುದೇ ಸಾಕ್ಷ್ಯ ಇದ್ದಂತೆ ಇಲ್ಲ. ಅಲ್ಲದೇ ಈ ರೀತಿ ಸುದ್ದಿ ಹಬ್ಬಿಸುತ್ತಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಆ ವಿಡಿಯೋದಲ್ಲಿ ಎಲ್ಲಿಯೂ ಆತ ಅಸಭ್ಯವಾಗಿ ಮಾಡಿರುವಂತೆ ಕಾಣಿಸುತ್ತಿಲ್ಲ. ಅಲ್ಲದೇ ಕೆಲವರು ಇದು ಉದ್ದೇಶಪೂರ್ವಕವಾಗಿ ಹರಡಿಸಲಾಗಿರುವ ವಿಡಿಯೋದಂತೆ ಇದೆ ಎಂದಿದ್ದರೆ. ಇನ್ನೂ ಕೆಲವರು ಯಾವುದೇ ಕಾರಣಕ್ಕೂ ಇನ್ನು ಮುಂದೆ ಈ ರೀತಿಯ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+