• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭಾ ಚುನಾವಣೆಗೆ ಮುನ್ನ ಕೋಡಿಶ್ರೀ ಭವಿಷ್ಯ: ಬಿಜೆಪಿ ಹೊಡೀರೀ ಹಲಗೀ...

|
   Lok Sabha Elections 2019 :ಲೋಕಸಭಾ ಚುನಾವಣೆಗೆ ಮುನ್ನ ಕೋಡಿಶ್ರೀ ಭವಿಷ್ಯ | Oneindia Kannada

   ಲೋಕಸಭಾ ಚುನಾವಣೆಗೂ ಮುನ್ನ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿಯವರು ಯಾದಗಿರಿಯಲ್ಲಿ ಭವಿಷ್ಯವನ್ನು ನುಡಿದಿದ್ದಾರೆ.

   ಕಳೆದ ಅಸೆಂಬ್ಲಿ ಚುನಾವಣೆಯ ವೇಳೆಯೂ ಎರಡು ಪ್ರಮುಖ ಪಕ್ಷಗಳಿಗೆ ಹಿನ್ನಡೆಯಾಗಿ, ಅನಿರೀಕ್ಷಿತ ವ್ಯಕ್ತಿ ಅರಸನಾಗಲಿದ್ದಾನೆ ಎಂದು ಕೋಡಿಶ್ರೀಗಳು ನುಡಿದಿದ್ದರು. ಅನಿರೀಕ್ಷಿತ ವ್ಯಕ್ತಿ ಎಂದರೆ ಅದು ಕುಮಾರಸ್ವಾಮಿ ಎಂದೇ ವ್ಯಾಖ್ಯಾನಿಸಲಾಗಿತ್ತು.

   ಕಾಲಜ್ಞಾನ ಬ್ರಹ್ಮ ಸದ್ಗುರು ಸ್ವಾಮೀಜಿ ನುಡಿದ ಪ್ರಧಾನಿ ಮೋದಿಯ ಭವಿಷ್ಯ

   ತಾಳೇಗರಿ ಆಧಾರಿತ ಭವಿಷ್ಯ ನುಡಿಯುವ ಕೋಡಿಶ್ರೀಗಳು, ಹೋದ ವರ್ಷ ಚಂದ್ರಗ್ರಹಣದ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಏರುಪೇರಾಗಲಿದೆ ಎಂದು ಹೇಳಿದ್ದರು. ಬಿಜೆಪಿ ಸತತವಾಗಿ ಆಪರೇಶನ್ ಕಮಲದ ಮೂಲಕ ಕುಮಾರಸ್ವಾಮಿ ಸರಕಾರವನ್ನು ಕೆಡವಲು ಪ್ರಯತ್ನಿಸಿದ್ದರೂ, ಅದು ವಿಫಲವಾಗಿತ್ತು.

   ದೇವರ ದಯೆಯಿಂದ ಸುಸೂತ್ರವಾಗಿ ಚುನಾವಣೆ ನಡೆಯಲಿ: ಅಮ್ಮಣ್ಣಾಯ

   ಯಾದಗಿರಿಯಲ್ಲಿ ಕೋಡಿಶ್ರೀಗಳು, ಸೋಮವಾರ (ಮಾ 11) ನುಡಿದ ಭವಿಷ್ಯ, ಪರೋಕ್ಷವಾಗಿ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎನ್ನುವುದನ್ನು ಸೂಚಿಸುತ್ತದೆ. ಶ್ರೀಗಳು ನುಡಿದ ಒಂದು ವ್ಯಾಕ್ಯದ ಭವಿಷ್ಯ ಏನು? ಮುಂದೆ ಓದಿ..

   ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಸ್ವಾಮೀಜಿಯವರ ಭವಿಷ್ಯ

   ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಸ್ವಾಮೀಜಿಯವರ ಭವಿಷ್ಯ

   ಕಳೆದ ಫೆಬ್ರವರಿ ತಿಂಗಳಲ್ಲಿ ಗದಗ ಜಿಲ್ಲೆ ಗಜೇಂದ್ರಗಡದಲ್ಲಿರುವ ಕಾಲಜ್ಞಾನ ಮಠದ, ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಸ್ವಾಮೀಜಿಯವರು ಮೋದಿಯವರ ಬಗ್ಗೆ ಮತ್ತು ದೇಶದ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿದಿದ್ದರು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲಿದ್ದಾರೆನ್ನುವ ಭವಿಷ್ಯವನ್ನು ಸ್ವಾಮೀಜಿ ನುಡಿದಿದ್ದರು.

   ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ನಡೆಯುವ ಸಾಧ್ಯತೆ

   ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ನಡೆಯುವ ಸಾಧ್ಯತೆ

   ಸಿದ್ದಾರೂಢ ಮಠದ ಶಂಭುಲಿಂಗಾಶ್ರಮದಲ್ಲಿ ನಡೆದ ಶಂಭುಲಿಂಗಸ್ವಾಮಿಗಳ ಹನ್ನೊಂದನೇ ಪುಣ್ಯಾರಾಧನೆಯಲ್ಲಿ ಭಾಗವಹಿಸಿ ಶರಣಬಸವ ಸ್ವಾಮೀಜಿ, ಈಗಿರುವ ದ್ವಿರಾಷ್ಟಗಳ ನಡುವಣ ಬಿಗಿ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸಲಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ನಡೆಯುವ ಸಾಧ್ಯತೆಯಿದೆ ಎಂದೂ ಹೇಳಿದ್ದರು.

   2018ರಲ್ಲಿ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯದ ಸತ್ಯಾಸತ್ಯತೆಯ ಅವಲೋಕನ

   ರತ್ನಖಚಿತ ಸುವರ್ಣ ಕಿರೀಟ ಸ್ಥಿರವಾಗಿರುತ್ತದೆ

   ರತ್ನಖಚಿತ ಸುವರ್ಣ ಕಿರೀಟ ಸ್ಥಿರವಾಗಿರುತ್ತದೆ

   ಯಾದಗಿರಿಯಲ್ಲಿ ಶ್ರೀ ವಿಶ್ವಾರಾಧ್ಯರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಕೋಡಿಶ್ರೀಗಳು, "ಪಾಂಡವರು ಮತ್ತು ಕೌರವರು ಬಡಿದಾಡುವರು, ರತ್ನಖಚಿತ ಸುವರ್ಣ ಕಿರೀಟ ಸ್ಥಿರವಾಗಿರುತ್ತದೆ. ಬೇವು ಬೆಲ್ಲವಾದೀತು, ಸತ್ಯ ವಿಷದಂತೆ ಇರುತ್ತದೆ" ಎನ್ನುವ ಭವಿಷ್ಯವನ್ನು ಕೋಡಿಶ್ರೀಗಳು ನುಡಿದಿದ್ದಾರೆ.

   ನರೇಂದ್ರ ಮೋದಿಯವರೇ ಪ್ರಧಾನಿ ಎಂದು ಕೋಡಿಶ್ರೀಗಳ ಭವಿಷ್ಯ

   ನರೇಂದ್ರ ಮೋದಿಯವರೇ ಪ್ರಧಾನಿ ಎಂದು ಕೋಡಿಶ್ರೀಗಳ ಭವಿಷ್ಯ

   ರತ್ನಖಚಿತ ಸುವರ್ಣ ಕಿರೀಟ ಎನ್ನುವುದು ಪ್ರಧಾನಮಂತ್ರಿ ಹುದ್ದೆ, ಸ್ಥಿರವಾಗಿರುತ್ತದೆ ಎಂದರೆ, ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿ ಎಂದು ಕೋಡಿಶ್ರೀಗಳ ಭವಿಷ್ಯವನ್ನು ವ್ಯಾಖ್ಯಾನಿಸಲಾಗುತ್ತಿದೆ. ಹಾರನಹಳ್ಳಿಯ ಕೋಡಿಮಠದ ಶ್ರೀಗಳ ಒಗಟಿನ ರೂಪದಲ್ಲಿ ನುಡಿದ ಈ ಭವಿಷ್ಯವನ್ನು ಹೀಗೆ ಅರ್ಥೈಸಿಕೊಳ್ಳಲಾಗುತ್ತಿದೆ.

   ಜೆಡಿಎಸ್ -ಕಾಂಗ್ರೆಸ್ ಸರ್ಕಾರ ಪತನದ ಬಗ್ಗೆ ಕೋಡಿಮಠ ಶ್ರೀ ಭವಿಷ್ಯ

   ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ ಭವಿಷ್ಯ

   ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ ಭವಿಷ್ಯ

   ಯಾವ ಜಾಗ ಒಳ್ಳೆಯದಲ್ಲವೋ ಅಲ್ಲಿ ಮುಳ್ಳೂ ಚುಚ್ಚುತ್ತೇ, ಕಲ್ಲಿನ ಏಟೂ ಬೀಳುತ್ತೆ, ನಡೆಯುವವರು ಎಡವುತ್ತಾರೆ, ಹಾಗಾಗಿ ಎಚ್ಚರಿಕೆಯಿಂದ ನಡೆಯಬೇಕು. ಡಿಸೆಂಬರ್ 19ರ ನಂತರ ಪ್ರಧಾನಿ ಮೋದಿಯವರಿಗೂ ಕೆಟ್ಟಕಾಲ ಬರುವ ಸಂಭವವಿದೆ. ರಾಷ್ಟ್ರ ರಾಜಕಾರಣದಲ್ಲೂ ಬಹಳ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ ಕಳೆದ ಡಿಸೆಂಬರ್ ತಿಂಗಳಲ್ಲಿ ಭವಿಷ್ಯ ನುಡಿದಿದ್ದರು.

   English summary
   Upcoming Loksabha elections: Arasikere Haranahalli Kodi Mutt Dr. Shivananda Shivayogi Rajendra Seer prediction. As per Seer prediction Narendra Modi will retain the PM post.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X