ಮಳೆ ಬಂದ್ರೆ ಬರಲಿ ಬಿಡಿ, ಮುನ್ನೆಚ್ಚರಿಕೆ ಮರೀಬೇಡಿ

ಬೆಂಗಳೂರು, ಮೇ. 16: ಮಳೆ ಬಂದರೆ ಬೆಂಗಳೂರಲ್ಲಿ ಏನಾಗುತ್ತದೆ ಎಂದು ಹೊಸದಾಗಿ ಹೇಳಬೇಕಾಗಿಲ್ಲ ಬಿಡಿ. ವೀಕೆಂಡ್ ಮೂಡಿನಲ್ಲಿದ್ದ ಜನರು ಮನೆಯಲ್ಲೇ ಕುಳೀತು ಐಪಿಎಲ್ ನೋಡುವಂತೆ ಆಗಿದೆ.

ಶನಿವಾರ ಮಧ್ಯಾಹ್ನದಿಂದ ನಗರದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಮೆಜೆಸ್ಟಿಕ್, ಗಾಂಧಿನಗರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ವಾಹನ ಸವಾರರು ಮನೆ ತಲುಪಲು ಪರದಾಡುತ್ತಿದ್ದಾರೆ.[ಬೆಂಗಳೂರಲ್ಲಿ ಗಾಳಿ ಮಳೆ ಬಂದ್ರೆ ಏನಾಗುತ್ತದೆ]

 rain

ಅಲ್ಲದೇ ಶಾಂತಿನಗರ, ಶೇಷಾದ್ರಿಪುರ, ಬಾಪೂಜಿನಗರ, ಈಜಿಪುರ, ಮಾಗಡಿರಸ್ತೆ, ಇಂದಿರಾನಗರ, ಚಾಮರಾಜಪೇಟೆ, ರಾಜಾಜಿನಗರ, ಕೆ.ಆರ್,ವೃತ್ತ, ಬಸವೇಶ್ವರ ನಗರ, ಜಯನಗರದಲ್ಲೂ ವ್ಯಾಪಕ ಮಳೆಯಾಗಿದ್ದು ಮರಗಳು ಧರೆಗುರುಳಿವೆ.

ನಗರದ ಫ್ರೀಡಂ ಪಾರ್ಕ್ ನಲ್ಲಿ ಜೆಡಿಎಸ್ ಕೆರೆ ಒತ್ತುವರಿ ವಿರುದ್ಧ ಹೋರಾಟ ನಡೆಸಲು ಪೆಂಡಾಲ್ ಹಾಕಿತ್ತು. ಆದರೆ ಧಾರಾಕಾರ ಮಳೆಗೆ ಸಿಕ್ಕು ಪೆಂಡಾಲ್ ಕುಸಿದು ಬಿದ್ದಿದೆ.

 rain 1

ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಶುಕ್ರವಾರ ಕಡೂರು, ಬೀರೂರು, ಚಿಕ್ಕಮಗಳೂರು, ಶಿವಮೊಗ್ಗ, ಶಿರಸಿ, ತಮಕೂರು ವರುಣನ ಆರ್ಭಟ ಅನುಭವಿಸಿವೆ. ಶನಿವಾರ ಹಾವೇರಿ ಭಾಗದಲ್ಲೂ ಮಳೆ ಕಾಣಿಸಿಕೊಂಡಿದೆ.[ಶುರುವಾಯಿತು ಮಳೆ, ಬೆಂಗಳೂರಲ್ಲಿ ಆತಂಕದ ಹೊಳೆ]

ಕೆಲ ಮುನ್ನೆಚ್ಚರಿಕೆ ಬಗ್ಗೆ ಗಮನವಿರಲಿ
* ಮಳೆ ಬಂದಾಗ ಅಂಗಡಿಗಳಲ್ಲಿ ರಕ್ಷಣೆ ಪಡೆದು ಸ್ವಲ್ಪ ಕಡಿಮೆಯಾದ ತಕ್ಷಣ ಏಕಾಏಕಿ ಹೊರಡುವಾಗ ಹಿಂದೆ ಮುಂದೆ ನೋಡಿಕೊಂಡಿ ಸಾಗಿ
* ಅಕಾಲಿಕ ಮಳೆ ಮತ್ತೆ ಮುಂದುವರಿಯಲಿದ್ದು ಮನೆಯಿಂದ ಹೊರಡುವಾಗ ಛತ್ರಿ ಜರ್ಕಿನ್ ಉಟ್ಟುಕೊಳ್ಳುವುದು ಒಳಿತು
* ಎಫ್ ಎಂ ಗಳ ಮಾಹಿತಿ ಆಲಿಸುತ್ತ ಇರಿ. ಟ್ರಾಫಿಕ್ ಸಮಸ್ಯೆ ಇರುವ ರಸ್ತೆ ಆದಷ್ಟೂ ತಪ್ಪಿಸಿ.
* ಅತೀ ಅಗತ್ಯ ಎಂದಾದರೆ ಮಾತ್ರ ವೇಗದ ಚಾಲನೆ ಮಾಡಲು ಮುಂದಾಗಿ
* ದಿನಾ ಸಂವರಿಸುವ ರಸ್ತೆಯಲ್ಲಿಯೇ ವಾಪಸ್ ಬರುವುದು ಒಳಿತು. ಯಾಕೆಂದರೆ ರಸ್ತೆ ಬಗ್ಗೆ ಸಾಮಾನ್ಯ ಜ್ಞಾನ ನಮಗಿರುತ್ತದೆ.
* ಮಕ್ಕಳನ್ನು ಕರೆದುಕೊಂಡು ನೈಟ್ ವಾಕ್ ನಂಥ ಸಾಹಸ ಬೇಡ

rain

* ಅಪಾಯ ಸಂಭವಿಸಿದ್ದರೆ, ಅಥವಾ ಮರ ಬಿದ್ದಿದ್ದರೆ ತಕ್ಷಣ ಸಂಬಂಧಿಸಿದವರಿಗೆ ಮಾಹಿತಿ ನೀಡಿ[ಎಲ್ಲಿಗೆ ಕರೆ ಮಾಡಬೇಕು]
* ಸಾಧ್ಯವಾದರೆ ಸಾಮಾಜಿಕ ಜಾಲತಾಣದಲ್ಲಿ ಒಂದು ಅಪ್ ಡೇಟ್ ದಾಖಲಿಸಿ
* ಮನೆಯಿಂದ ದೂರ ತೆರಳಿದ್ದರೆ ಆಗಾಗ ಹೆಂಡತಿ ಅಥವಾ ಕುಟುಂಬದವರಿಗೆ ಎಲ್ಲಿದ್ದೀರಿ ಎಂದು ತಿಳಿಸುವುದು ಉತ್ತಮ
* ಡ್ರ್ಯಾಗ್ ರೇಸ್ ನಂಥ ಸಾಹಸ ಮಾಡುವವರು ಒಂದು ಕ್ಷಣ ಪ್ರಾಣದ ಬಗ್ಗೆ ಯೋಚನೆ ಮಾಡಿ
* ಮರದ ಅಡಿ, ತೊಯ್ಯುತ್ತಿರುವ ಗೋಡೆ ಅಡಿ ನಿಲ್ಲಲು ಅಥವಾ ಗಾಡಿ ಪಾರ್ಕ್ ಮಾಡಲು ಹೋಗಬೇಡಿ
* ಮಳೆಯಲ್ಲಿ ನೆನೆಯುತ್ತಿದ್ದೇವೆ ಎಂದು ಸಿಗ್ನಲ್ ಜಂಪ್ ಮಾಡಿದರೆ ಅಪಾಯ ಎಳೆದುಕೊಂಡಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+