ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗಲೆಲ್ಲ ಅಶಾಂತಿ ಗ್ಯಾರಂಟಿ!

ಬೆಂಗಳೂರು, ಸೆಪ್ಟೆಂಬರ್‌ 23: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯ ಮುಂದಿನ ಹೋರಾಟದ‌ ಕುರಿತು ಪಕ್ಷದ ಕಚೇರಿಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿದ್ದು, ಹೋರಾಟಕ್ಕೆ ಸಿದ್ದವಾಗಿದೆ.

ಈ ಕುರಿತು ಶನಿವಾರ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿಯೂ ರಾಜ್ಯ ಕಾಂಗ್ರೆಸ್‌ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಲೆಲ್ಲ ಅರಾಜಕತೆ, ಅಶಾಂತಿ ಗ್ಯಾರಂಟಿ ಎಂದು ಹೇಳಿದೆ.

Unrest is guaranteed when the Congress government is in power in the state BJP Said

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಲೆಲ್ಲ. ಕಾವೇರಿ ನೀರು ಹಂಚಿಕೆಯಲ್ಲಿ ವಂಚನೆ, ಬರಗಾಲ ನಿರ್ವಹಿಸುವಲ್ಲಿ ವಿಫಲ. ಅಧಿಕಾರಕ್ಕಾಗಿ ಆಂತರಿಕ ಕಲಹ, ಒಳಜಗಳ, ಜಂಗಿಕುಸ್ತಿ ಹಾಗೂ
ರೈತವಿರೋಧಿ ಆಡಳಿತಕ್ಕೆ ಬೇಸತ್ತು ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿರುತ್ತದೆ ಎಂದು ಬಿಜೆಪಿ ರಾಜ್ಯ ಕಾಂಗ್ರೆಸ್‌ ವಿರುದ್ದ ಕುಟುಕಿದೆ.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ. ಕಾನೂನು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ಸೃಷ್ಟಿ, ಒಂದೇ ಸಮುದಾಯದ ತುಷ್ಟೀಕರಣ ಹಾಗೂ ಪಿಎಫ್‌ಐ ಗೂಂಡಾಗಳನ್ನು ಬಿಟ್ಟು ಕೋಮುಗಲಭೆ ಸೃಷ್ಟಿ, ಅಲ್ಲದೇ ಭಯೋತ್ಪಾದಕರಿಗೆ ರಕ್ಷಣೆ, ಹೀಗೆ ಹತ್ತು ಹಲವು ಎಂದು ಬಿಜೆಪಿ ಹೇಳಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಲೆಲ್ಲ ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕದಲ್ಲಿ ನೆಮ್ಮದಿ ಮಾಯವಾಗಿ ಅರಾಜಕತೆ, ಅಶಾಂತಿ ಗ್ಯಾರಂಟಿ ಎಂದು ರಾಜ್ಯ ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದೆ.

ನೀರಿನ‌ ಗ್ಯಾರೆಂಟಿ ಬೇಕು: ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರ ಆರಂಭದಿಂದಲೂ ಗ್ಯಾರೆಂಟಿ ಹೆಸರು ಹೇಳಿ ಈಗ ಕಂಡಿಷನ್ ಹಾಕಿ ಅರ್ಧಂಬರ್ಧ ಜಾರಿ ಮಾಡುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ನಗರ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತೆತ್ತಿದರೆ ಬ್ರಾಂಡ್ ಬೆಂಗಳೂರು ಅಂತ ಹೇಳುತ್ತಾರೆ. ಆದರೆ, ಬೆಂಗಳೂರಿನ ಕುಡಿಯುವ ನೀರಿನ ಬಗ್ಗೆ ಮಾತನಾಡುವುದಿಲ್ಲ. ನಮಗೆ ಬೇಕಿರುವುದು ನೀರಿನ‌ ಗ್ಯಾರೆಂಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿಗೆ ಪ್ರತ್ಯೆಕವಾಗಿ 4.5 ಟಿಎಂಸಿ ನೀರು ಕೊಡಲು ಟ್ರಿಬುನಲ್ ಹೇಳಿದೆ. ಈ ಬಗ್ಗೆ ರಾಜ್ಯ ಸರ್ಕಾರ ಎಲ್ಲಿಯೂ ಪ್ರಸ್ತಾಪ ಮಾಡುತ್ತಿಲ್ಲ. ತಮಿಳಿನಾಡು ಹೆಚ್ಚುವರಿ ನೀರು ಬಳಕೆ ಮಾಡಿ ಅಕ್ರಮವಾಗಿ ಬೆಳೆ ಬೆಳೆದಿದ್ದು, ಅದರ ಬಗ್ಗೆ ರಾಜ್ಯ ಸರ್ಕಾರ ಮಾತನಾಡಿಲ್ಲ. ನಮಗೆ ಮುಂಗಾರು ಮುಕ್ತಾಯವಾಗಿದೆ, ತಮಿಳುನಾಡಿಗೆ ಮುಂದಿನ ದಿನಗಳಲ್ಲಿ ಮಳೆ ಬರಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು.

ಈ ವಿಷಯ ಹೇಳಿದರೆ ನಾವು ರಾಜಕಾರಣ ಮಾಡುತ್ತೇವೆ ಎನ್ನುತ್ತಾರೆ. ಇದರ ಮೇಲೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜಕಾರಣ ಮಾಡುತ್ತಾರೆ. ತಮಿಳುನಾಡು ಸಿಎಂ ಜೊತೆ ಮಾತನಾಡಿ ಅಂದರೆ ಮಾತನಾಡುವುದಿಲ್ಲ. ಅದರ ಬದಲು ಕೇಂದ್ರದ ಕಡೆ ಬೊಟ್ಟು ಮಾಡುತ್ತಾರೆ. ಅದರಲ್ಲಿ ಸಿದ್ದರಾಮಯ್ಯ ಪರಿಣಿತರು ಎಂದು ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+