ಅನಗತ್ಯ ಪಿಐಎಲ್, ಟಿಜೆ ಅಬ್ರಹಾಂಗೆ ಸುಪ್ರಿಂನಿಂದ 25 ಲಕ್ಷ ದಂಡ
ನವದೆಹಲಿ, ಜೂನ್ 3: ಅನಗತ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥಪಡಿಸಿದ ಸಾಮಾಜಿಕ ಕಾರ್ಯಕರ್ತ ಟಿ. ಜೆ ಅಬ್ರಹಾಂಗೆ ಸುಪ್ರಿಂ ಕೋರ್ಟ್ 25 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಕಲಬುರಗಿ ಆಳಂದದಲ್ಲಿ ಮಿನಿ ವಿಧಾನಸೌಧ ನಿರ್ಮಾಣದಲ್ಲಿ ಅಕ್ರಮ ನಡೆದಿದೆ. ಆಳಂದ ಶಾಸಕ ಬಿ ಆರ್ ಪಾಟೀಲ್ ಒತ್ತಡದ ಹಿನ್ನಲೆಯಲ್ಲಿ ಈ ಅಕ್ರಮ ನಡೆದಿದೆ ಎಂದು ಹೇಳಿ ಮಿನಿ ವಿಧಾನಸೌಧದ ಕಾಮಗಾರಿ ಪ್ರಶ್ನಿಸಿ ಅಬ್ರಹಾಂ ಪಿಐಎಲ್ ಸಲ್ಲಿಸಿದ್ದರು.

ಇದೀಗ ಅನಗತ್ಯ ಪಿಐಎಲ್ ಸಲ್ಲಿಸಿದ್ದಕ್ಕೆ ಸುಪ್ರಿಂ ಕೋರ್ಟ್ ಅಬ್ರಹಾಂಗೆ 25 ಲಕ್ಷ ದಂಡ ವಿಧಿಸಿದ್ದಲ್ಲದೆ ಎರಡು ವಾರಗಳ ಒಳಗೆ ದಂಡ ತುಂಬುವಂತೆ ಆದೇಶ ನೀಡಿದೆ.
ಸರಕಾರದ ಪರ ಹಿರಿಯ ವಕೀಲ ಮಧುಸೂದನ್ ನಾಯಕ್ ವಾದ ಮಂಡಿಸಿದ್ದರು.












Click it and Unblock the Notifications