V.Somanna: ಕೇಂದ್ರ ಸಚಿವ ವಿ.ಸೋಮಣ್ಣ ಚುನಾವಾಣಾ ರಾಜಕೀಯಕ್ಕೆ ನಿವೃತ್ತಿ ಕುರಿತು ಮಹತ್ವದ ಘೋಷಣೆ
V.Somanna: ರೈಲ್ವೆ ಖಾತೆ ಜವಾಬ್ದಾರಿ ಹೊತ್ತಾಗಿನಿಂದಲೂ ವಿ.ಸೋಮಣ್ಣ ಅವರು ರಾಜ್ಯದ ರೈಲ್ವೆ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಆದರೆ, ಇದೀಗ ಅವರೇ ಸ್ವತಃ ಅವರೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಕುರಿತು ಮಹತ್ವದ ಘೋಷಣೆಯೊಂದನ್ನು ಮಾಡಿ ಅಚ್ಚರಿ ಮೂಡಿಸಿದ್ದಾರೆ. ಹಾಗಾದ್ರೆ ಏನೆಲ್ಲಾ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಆ ದೇವರು ಬಂದು ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿದರೂ ನಾನು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನ್ನ ಭಾವನೆ ಅದೇ ರೀತಿಯಲ್ಲಿ ಇದೆ ಎಂದು ಹೇಳುವ ಮೂಲಕ ಗಮನ ಸೆಳೆದರು.

ಅಧಿಕಾರ ಇದ್ದಾಗ ಹೆಜ್ಜೆ ಗುರುತು ಬಿಟ್ಟು ಹೋಗಬೇಕು ಎಂಬುದು ನನ್ನ ಆಸೆ ಆಗಿದೆ. ಅಲ್ಲದೆ, ಜಿಲ್ಲೆಗೆ ರೈಲ್ವೆ ಯೋಜನೆಗಳನ್ನು ತರುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳು ಬರಲಿದೆ. ನಾನು ರಾಜಕೀಯ ಮಾಡಿಕೊಂಡು, ಯಾರನ್ನೋ ಹೊಗಳಿಕೊಂಡು ಹೋಗಲು ರಾಜಕೀಯಕ್ಕೆ ಬಂದಿಲ್ಲ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಮತ್ತು ತುಮಕೂರು ಜಿಲ್ಲೆ ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಿದ್ದು, ತುಮಕೂರು-ಬೆಂಗಳೂರು ನಾಲ್ಕು ಪಥದ ರೈಲ್ವೆ ಸರ್ವೆ ಆಯ್ತು. ಡಿಪಿಆರ್ ಆರಂಭ ಮಾಡಿಸಿದ್ದೇವೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ 4ರ ತಿಮ್ಮರಾಜನಹಳ್ಳಿ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.
ಹೊಸ ರೈಲ್ವೆ ಲೈನ್ ಬಗ್ಗೆ ಮಾಹಿತಿ: ರಾಜ್ಯದಲ್ಲಿ ರೈಲ್ವೆ ಲೈನ್ ಕಾಮಗಾರಿ ವಿಚಾರದಲ್ಲಿ ದೊಡ್ಡ ಮಟ್ಟದ ಕ್ರಾಂತಿ ಆಗುತ್ತಿದೆ. ಅದರಲ್ಲೂ, ವಿ.ಸೋಮಣ್ಣ ಅವರು ರಾಜ್ಯ ರೈಲ್ವೆ ಖಾತೆ ಸಚಿವರಾಗಿನಿಂದಲೂ ರೈಲ್ವೆ ಜಾಲವನ್ನು ವಿಸ್ತರಣೆ ಮಾಡುವ ಕೆಲಸ ಮಾಡುತ್ತಲಿದ್ದಾರೆ. ಇದೀಗ ಬಹುನಿರೀಕ್ಷಿತ ತುಮಕೂರು-ದಾವಣಗೆರೆ ರೈಲು ಮಾರ್ಗ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್‌ವೊಂದನ್ನು ನೀಡಿದ್ದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದಿಂದ ತುಂಬಾ ಪ್ರಯೋಜನೆಗಳಿವೆ. ಪ್ರಯಾಣದ ಅವಧಿ ಕಡಿಮೆ ಆಗಲಿದ್ದು, ಇದರಿಂದ ಪ್ರಯಾಣಿಕರಿಗೆ ಸಮಯ ಉಳಿತಾಯ ಆದಂತಾಗಲಿದೆ. ಆದ್ದರಿಂದ ಈ ರೈಲು ಮಾರ್ಗ ಯಾವಾಗ ಪೂರ್ಣಗೊಂಡು ಪ್ರಯಾಣಕ್ಕೆ ಮುಕ್ತವಾಗಲಿದೆಯೋ ಎಂದು ಪ್ರಯಾಣಿಕರು ಕಾತರದಲ್ಲಿದ್ದಾರೆ. ಈ ಸಂಬಂಧ ಇದೀಗ ಸಚಿವ ವಿ.ಸೋಮಣ್ಣ ಅವರು ಮಹತ್ವದ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
18 ವರ್ಷಗಳಿಂದ ಬಾಕಿ ಉಳಿದಿದ್ದ ಬಹುನಿರೀಕ್ಷಿತ ತುಮಕೂರು-ದಾವಣಗೆರೆ ರೈಲು ಮಾರ್ಗ ಯೋಜನೆ ಕಾಮಗಾರಿಗೆ ಇದೀಗ ವೇಗ ಸಿಕ್ಕಿದೆ. ಸುಮಾರು 2,500 ಹೆಕ್ಟೇರ್ ಭೂಮಿ ಸ್ವಾಧೀನ ಪ್ರಕ್ರಿಯೆ ಮುಗಿಯುತ್ತಾ ಬಂದಿದೆ ಎಂದು ಹೇಳಿದ್ದಾರೆ.












Click it and Unblock the Notifications