ಕೇಂದ್ರ ಬಜೆಟ್ 2026ನಲ್ಲಿ ದಕ್ಷಿಣದ ರಾಜ್ಯಗಳ ನಿರ್ಲಕ್ಷ್ಯ ಬೇಡ: ನೀರಾವರಿ, ಮೆಟ್ರೋ ಯೋಜನೆಗಳಿಗೆ ಆರ್ಥಿಕ ಬೆಂಬಲ ಕೊಡಿ
ಬೆಂಗಳೂರು: ಕೇಂದ್ರ ಸರ್ಕಾರಕ್ಕೆ ತೆರಿಗೆ ಸಂಗ್ರಹಿಸುವ ಕೊಡುವ ರಾಜ್ಯಗಳ ಪೈಕಿ ಎರಡನೇ ಅತೀ ದೊಡ್ಡ ರಾಜ್ಯ ಕರ್ನಾಟಕ. ಆದರೆ ರಾಜ್ಯಕ್ಕೆ ಕೇಂದ್ರದಿಂದ ತೆರಿಗೆ ಹಂಚಿಕೆ ಪಾಲು ತೀರಾ ಕಡಿಮೆ ಎಂದು ಹಿಂದಿನಿಂದಲೂ ಕರ್ನಾಟಕ ಕಾಂಗ್ರಸ್ ನಾಯಕರು ದೂರುತ್ತಲೇ ಬಂದಿದ್ದಾರೆ. ಇದೀಗ ಕೇಂದ್ರ ಬಜೆಟ್ 2026 ಮಂಡನೆಗೂ ಮುನ್ನ ನಮ್ಮ ತೆರಿಗೆ ಪಾಲು ನಮಗೆ ಕೊಡಿ ಎಂದು ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಸೇರಿದಂತೆ ಕೈ ನಾಯಕರು ಆಗ್ರಹಿಸುತ್ತಿದ್ದಾರೆ.
ಈ ಬಾರಿ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನ್ಯಾಯಯುತ ಪಾಲು ಕೊಡಬೇಕು ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಆಗ್ರಹಿಸಿದ್ದಾರೆ. ಸಚಿವರು ಮತ್ತು ಕರ್ನಾಟಕ ಕಾಂಗ್ರೆಸ್ ಎಕ್ಸ್ ಪೋಸ್ಟ್ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪಾಲು ಕೇಳಿದ್ದಾರೆ. '15ನೇ ಹಣಕಾಸು ಆಯೋಗದಿಂದ ಕರ್ನಾಟಕ ಸೇರಿದಂತೆ ಅಭಿವೃದ್ಧಿ ಹೊಂದಿರುವ ರಾಜ್ಯಗಳಿಗೆ ಆದ ತೀವ್ರ ಸ್ವರೂಪದ ಅನ್ಯಾಯವನ್ನು ಸರಿಪಡಿಸಿ, 16ನೇ ಹಣಕಾಸು ಆಯೋಗದ ಮೂಲಕ ಕನ್ನಡಿಗರಿಗೆ ನ್ಯಾಯಯುತ ಪಾಲನ್ನು ನೀಡುವಂತೆ ಒತ್ತಾಯಿಸುತ್ತಿದ್ದೇವೆ' ಎಂದು ಸಿಎಂ ಹೇಳಿದರು.

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಎಸಗುತ್ತಿದೆ. 14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಶೇಕಡಾ 4.71ರಷ್ಟು ತೆರಿಗೆ ಪಾಲು ನೀಡಲಾಗಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ಇದನ್ನು ಶೇಕಡಾ 3.64 ರಷ್ಟಕ್ಕೆ ಇಳಿಕೆ ಮಾಡಿತು. ಇದರ ಪರಿಣಾಮವಾಗಿ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ 80 ಸಾವಿರ ಕೋಟಿ ನಷ್ಟವಾಗಿದೆ.
ಹೀಗಾಗಿ 16ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ 4.71% ಕ್ಕಿಂತ ಹೆಚ್ಚಿನ ತೆರಿಗೆ ಪಾಲು ನೀಡಬೇಕು ಎಂದು ಕರ್ನಾಟಕ ರಾಜ್ಯದ ಒತ್ತಾಯವಾಗಿದೆ ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ. 'ಕರ್ನಾಟಕವು ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ನೀಡುವ ಪ್ರತೀ 100 ರೂಪಾಯಿಗೆ ಮರಳಿ ಸಿಗುತ್ತಿರುವುದು ಕೇವಲ 15 ರೂಪಾಯಿಗೂ ಕಡಿಮೆ. ಇದು ದೀರ್ಘಕಾಲ ಸಾಗುವ ವ್ಯವಸ್ಥೆಯಲ್ಲ. ಕೇಂದ್ರ ಬಜೆಟ್ ನಲ್ಲಿ ನಾವು ಹಣಕಾಸಿನ ನ್ಯಾಯವನ್ನು ಒತ್ತಾಯಿಸುತ್ತಿದ್ದೇವೆ. ರಾಜ್ಯಗಳು ನಿಜವಾಗಿಯೂ ಅಭಿವೃದ್ಧಿ ಸಾಧಿಸಬೇಕಾದರೆ ತೆರಿಗೆ ಹಂಚಿಕೆಯನ್ನು ಕನಿಷ್ಠ 40 ರಿಂದ 50ರೂಪಾಯಿಗೆ ಹೆಚ್ಚಿಸಲೇಬೇಕು. ನಾವು ದಾನ ಕೇಳುತ್ತಿಲ್ಲ - ನಮ್ಮ ನ್ಯಾಯಸಮ್ಮತ ಪಾಲನ್ನೇ ಕೇಳುತ್ತಿದ್ದೇವೆ ಎಂದು ಸಚಿವ ಎಂಬಿ ಪಾಟೀಲ್ ಅವರು ಹೇಳಿದರು.
ದಕ್ಷಿಣ ರಾಜ್ಯಗಳ ಮೇಲಿನ ಕೇಂದ್ರ ನಿರ್ಲಕ್ಷ್ಯ ನಿಲ್ಲಲಿ
ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳ ಮೇಲಿನ ನಿರ್ಲಕ್ಷ್ಯ ಧೋರಣೆಯನ್ನು ತಕ್ಷಣ ನಿಲ್ಲಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಭರವಸೆ ನೀಡಿದ್ದ 5,600 ಕೋಟಿ ರೂಪಾಯಿ ಅನುದಾನವನ್ನು ಪೂರೈಸಬೇಕು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 50,000 ಕೋಟಿ ರೂಪಾಯಿ ಅನುದಾನವನ್ನು ಖಚಿತಗೊಳಿಸಬೇಕು. ಜೊತೆಗೆ ಬೆಂಗಳೂರು ಮೆಟ್ರೋ, ಉಪನಗರ ರೈಲು ಸೇರಿದಂತೆ ಕರ್ನಾಟಕದ ಅಗತ್ಯ ನೀರಾವರಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ತುರ್ತು ಬೆಂಬಲ ನೀಡುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಎಸಗುತ್ತಿದೆ. 14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ 4.71% ತೆರಿಗೆ ಪಾಲು ನೀಡಲಾಗಿತ್ತು, ಆದರೆ 15ನೇ ಹಣಕಾಸು ಆಯೋಗದಲ್ಲಿ ಇದನ್ನು 3.64%ಗೆ ಇಳಿಸಲಾಗಿತ್ತು. ಇದರ ಪರಿಣಾಮವಾಗಿ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ 80 ಸಾವಿರ ಕೋಟಿ ನಷ್ಟವಾಗಿದೆ.
— Karnataka Congress (@INCKarnataka) January 29, 2026
ಹೀಗಾಗಿ 16ನೇ ಹಣಕಾಸು ಆಯೋಗದಲ್ಲಿ… pic.twitter.com/PmlOtSwUAs
14 ಮತ್ತು 15ನೇ ಹಣಕಾಸು ಆಯೋಗಗಳ ನಡುವೆ ಕರ್ನಾಟಕವು ಸುಮಾರು 75,000 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ. ಇದರೊಂದಿಗೆ, ಕೇಂದ್ರ ಸರ್ಕಾರದ ಪ್ರೋತ್ಸಾಹಧನ ನೀತಿಗಳ ಮೂಲಕ ಸೆಮಿಕಂಡಕ್ಟರ್ ಕೈಗಾರಿಕೆಗಳನ್ನು ಕರ್ನಾಟಕದಿಂದ ದೂರ ಸರಿಸುವ ಪ್ರಯತ್ನವು, ದೇಶದ ತಾಂತ್ರಿಕ ಪರಿಸರ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಿದೆ. ರಾಜ್ಯಗಳನ್ನು ವಿಭಜಿಸುವ ಬಜೆಟ್ ಬೇಡ. ರಾಜ್ಯಗಳನ್ನು ಬಲಪಡಿಸುವ, ನ್ಯಾಯದ ಮೇಲೆ ನಿಂತ ಬಜೆಟ್ ಬೇಕು ಎಂದು ಅವರು ಆಗ್ರಹಿಸಿದರು.












Click it and Unblock the Notifications