ಅರುಣ್ ಜೇಟ್ಲಿ ಬಜೆಟ್ : ಯಾವ ಪತ್ರಿಕೆ ಶೀರ್ಷಿಕೆ ಚೆನ್ನಾಗಿದೆ?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 01 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2016-17ನೇ ಸಾಲಿನ ಬಜೆಟ್‌ ಮಂಡನೆಯಾಗಿದೆ. ಸೋಮವಾರ ಸಂಸತ್ತಿನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಮಂಡನೆ ಮಾಡಿದ್ದಾರೆ.

ಅರುಣ್ ಜೇಟ್ಲಿ ಅವರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದ ಜೇಟ್ಲಿ ಅವರು, ಐಷಾರಾಮಿ ಕಾರುಗಳು, ಬ್ರಾಂಡೆಡ್ ಬಟ್ಟೆಗಳು ಮತ್ತು ಚಿನ್ನಾಭರಣ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ್ದಾರೆ. [ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]

ಕನ್ನಡ ದಿನ ಪತ್ರಿಕೆಗಳಲ್ಲಿ ಬಜೆಟ್ ಸುದ್ದಿಗಳನ್ನು ವಿಶ್ಲೇಷಣಾತ್ಮಕವಾಗಿ, ಸುಂದರ ಚಿತ್ರಗಳ ಸಮೇತ ಅಂಕಿ-ಅಂಶಗಳನ್ನು ನೀಡಲಾಗಿದೆ. ಒಂದೊಂದು ಪತ್ರಿಕೆಯು ವಿಭಿನ್ನ ನಿರೂಪಣೆ ಮತ್ತು ಆಕರ್ಷಕ ಹೆಡ್ ಲೈನ್‌ಗಳ ಮೂಲಕ ಓದುಗರನ್ನು ಸೆಳೆಯುವ ಪ್ರಯತ್ನ ಮಾಡಿವೆ. [ಕೇಂದ್ರ ಬಜೆಟ್ 2016 : ಕ್ಷಣ-ಕ್ಷಣದ ಮಾಹಿತಿ]

ವಿಜಯವಾಣಿ 'ಅನ್ನದಾತನಿಗೆ ಅರುಣರಾಗ' ಎಂದು ಶೀರ್ಷಿಕೆ ನೀಡಿದೆ. ವಿಜಯ ಕರ್ನಾಟಕ 'ಹಳ್ಳಿ ಕಡೆ ಮೋದಿ ನಡೆ' ಎಂದು ಶೀರ್ಷಿಕೆ ಕೊಟ್ಟು ಬಜೆಟ್ ಸುದ್ದಿಗಳನ್ನು ಪ್ರಕಟಿಸಿದೆ. ಕನ್ನಡಪ್ರಭದ ಮುಖಪುಟದಲ್ಲಿ ನೇಗಿಲು ಹೊತ್ತ ಜೇಟ್ಲಿ ಚಿತ್ರವಿದ್ದು, 'ಉಳುವಾ ಯೋಗಿಯ ಮೂಡಲ್ಲಿ' ಎಂದು ಶೀರ್ಷಿಕೆ ನೀಡಲಾಗಿದೆ. ಯಾವ ಪತ್ರಿಕೆಯ ಶೀರ್ಷಿಕೆ ಹೇಗಿದೆ? ಚಿತ್ರಗಳಲ್ಲಿ ನೋಡಿ.... [ತೆರಿಗೆ ಉಳಿಸಲು HDFC ಯುಲಿಪ್ ನಲ್ಲಿ ಹೂಡಿಕೆ ಮಾಡಿ]

'ಮಧ್ಯಮ ವರ್ಗಕ್ಕೆ ನಿರಾಸೆ'ಈ ಪೇಪರ್ ಲಿಂಕ್

'ಮಧ್ಯಮ ವರ್ಗಕ್ಕೆ ನಿರಾಸೆ'ಈ ಪೇಪರ್ ಲಿಂಕ್

ಪ್ರಜಾವಾಣಿ 'ಬಡವರಿಗೆ ಭರವಸೆ, ಮಧ್ಯಮ ವರ್ಗಕ್ಕೆ ನಿರಾಸೆ' ಎಂಬ ಶೀರ್ಷಿಕೆಯಡಿ ಕೇಂದ್ರ ಬಜೆಟ್ ಸುದ್ದಿಗಳನ್ನು ಪ್ರಕಟಿಸಿದೆ. ಬಜೆಟ್ ಗಾತ್ರ, ಹೊಸ ಘೋಷಣೆಗಳನ್ನು ಬಾಕ್ಸ್‌ನಲ್ಲಿ ನೀಡಿದೆ. ಮುಖಪುಟದಲ್ಲಿ 5 ವ್ಯಂಗ್ಯಚಿತ್ರಗಳು ಗಮನ ಸೆಳೆಯುತ್ತಿವೆ. [ಈ ಪೇಪರ್ ಲಿಂಕ್]

ರೈತರಿಗೆ ಜೈಟ್ಲಿ'

ರೈತರಿಗೆ ಜೈಟ್ಲಿ'

2016-17ನೇ ಸಾಲಿನ ಕೇಂದ್ರ ಬಜೆಟ್ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿಗೆ ಹೆಚ್ಚು ಆದ್ಯತೆ ನೀಡಿದೆ. ಅದರಂತೆ ಕೆಲವು ತಿಂಗಳುಗಳ ಹಿಂದೆ ಆರಂಭವಾದ ವಿಶ್ವವಾಣಿ ಪತ್ರಿಕೆ 'ರೈತರಿಗೆ ಜೈಟ್ಲಿ' ಎಂಬ ಶೀರ್ಷಿಕೆ ನೀಡಿದೆ. [ಪೇಪರ್ ಓದಲು ಲಿಂಕ್]

'ಅರುಣರಾಗ'

'ಅರುಣರಾಗ'

'ಅನ್ನದಾತನಿಗೆ ಅರುಣರಾಗ' ಎಂಬ ಶೀರ್ಷಿಕೆಯಡಿ ವಿಜಯವಾಣಿ ಬಜೆಟ್ ಸುದ್ದಿಗಳನ್ನು ಪ್ರಕಟಿಸಿದೆ. ಮುಖಪುಟದಲ್ಲಿರುವ ಮೇಕ್ ಇನ್ ಇಂಡಿಯಾದ ಸಿಂಹದ ಚಿತ್ರ ಗಮನ ಸೆಳೆಯುತ್ತಿದೆ. [ಪತ್ರಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ]

'ಬಡವರ ಬಜೇಟ್ಲಿ'

'ಬಡವರ ಬಜೇಟ್ಲಿ'

ಉದಯವಾಣಿ 'ಬಡವರ ಬಜೇಟ್ಲಿ' ಎಂಬ ಶೀರ್ಷಿಕೆಯಡಿ ಬಜೆಟ್ ಸುದ್ದಿಗಳನ್ನು ಪ್ರಕಟಿಸಿದೆ. ಜೇಟ್ಲಿ ಚಿತ್ರವಿರುವ ಮುಖಪುಟದ ವಿನ್ಯಾಸ ವಿಭಿನ್ನವಾಗಿದೆ. [ಪೇಪರ್ ಓದಲು ಇಲ್ಲಿ ಕ್ಲಿಕ್ ಮಾಡಿ]

'ಹಳ್ಳಿ ಕಡೆ ಮೋದಿ ನಡೆ'

'ಹಳ್ಳಿ ಕಡೆ ಮೋದಿ ನಡೆ'

ವಿಜಯ ಕರ್ನಾಟಕ 'ಹಳ್ಳಿ ಕಡೆ ಮೋದಿ ನಡೆ' ಎಂಬ ಶೀರ್ಷಿಕೆಯಡಿ ಕೇಂದ್ರ ಬಜೆಟ್ ಸುದ್ದಿಗಳನ್ನು ಪ್ರಕಟಿಸಿದೆ. ಮುಖಪುದಲ್ಲಿರುವ ಜೇಟ್ಲಿ ಮತ್ತು ಮೋದಿ ಚಿತ್ರ ಗಮನ ಸೆಳೆಯುತ್ತಿದೆ. [ಪತ್ರಿಕೆ ಓದಲು ಲಿಂಕ್ ಇಲ್ಲಿದೆ]

'ಉಳುವಾ ಯೋಗಿಯ ಮೂಡಲ್ಲಿ'

'ಉಳುವಾ ಯೋಗಿಯ ಮೂಡಲ್ಲಿ'

ಕನ್ನಡಪ್ರಭ ಕೇಂದ್ರ ಬಜೆಟ್ ಸುದ್ದಿಗಳನ್ನು 'ಉಳುವಾ ಯೋಗಿಯ ಮೂಡಲ್ಲಿ' ಎಂಬ ಶೀರ್ಷಿಕೆಯಡಿ ಪ್ರಕಟಿಸಿದೆ. ಮುಖಪುಟದಲ್ಲಿ ನೇಗಿಲು ಹೊತ್ತ ಜೇಟ್ಲಿ ಚಿತ್ರವಿದ್ದು, ಗಮನ ಸೆಳೆಯುತ್ತಿದೆ. [ಪೇಪರ್ ಓದಿ]

'ಓಲೈಕೆಯ ಬಜೆಟ್'

'ಓಲೈಕೆಯ ಬಜೆಟ್'

'ಓಲೈಕೆಯ ಬಜೆಟ್' ಎಂಬ ಶೀರ್ಷಿಕೆಯಡಿ ವಾರ್ತಾ ಭಾರತಿ 2016-17ನೇ ಸಾಲಿನ ಬಜೆಟ್ ಸುದ್ದಿಗಳನ್ನು ಪ್ರಕಟಿಸಿದೆ. [ಪೇಪರ್ ಓದಲು ಇಲ್ಲಿ ಕ್ಲಿಕ್ ಮಾಡಿ]

'ಅರುಣ ರೇಖೆ'

'ಅರುಣ ರೇಖೆ'

ಹೊಸ ದಿಗಂತ ಪತ್ರಿಕೆ 'ಅರುಣ ರೇಖೆ' ಎಂಬ ಶೀರ್ಷಿಕೆಯಡಿ ಬಜೆಟ್ ಸುದ್ದಿಗಳನ್ನು ಪ್ರಕಟಿಸಿದೆ. [ಪೇಪರ್ ಓದಲು ಲಿಂಕ್ ಇಲ್ಲಿದೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Finance Minister Arun Jaitley presented the Union Budget 2016-17 in parliament on Monday, February 29, 2016. Kannada news papers carried the news as their banner headlines. See Kannada titles for 8 news papers for edition 1st March.
Please Wait while comments are loading...