KEA: ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಫಲಿತಾಂಶ ಪ್ರಕಟ, ಅರ್ಜಿ ಸಲ್ಲಿಕೆಗೆ. ಸೆ.29 ಕೊನೆ ದಿನ

ಬೆಂಗಳೂರು, ಸೆಪ್ಟಂಬರ್ 21: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ -ಪದವಿ ಪೂರ್ವ (UGNEET 2025)ಗೆ ಸಂಬಂಧಿಸಿದ ವೈದ್ಯಕೀಯ ಕೋರ್ಸ್‌ಗಳ ಮೂರನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ. ಅಷ್ಟು ಮಾತ್ರವಲ್ಲದೇ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದ್ದು, ಪ್ರಮುಖ ದಿನಾಂಕಗಳನ್ನು ಪ್ರಕಟಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಎರಡನೇ ಸುತ್ತು ಹಾಗೂ ಆಯುಷ್ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕವನ್ನು ಶನಿವಾರ ತನ್ನ ಅಧಿಕೃತ ಜಾಲತಾಣ https://cetonline.karnataka.gov.in/KEA/ugneet2025 ದಲ್ಲಿ ಪ್ರಕಟಿಸಿದೆ. ಈ ಬಗ್ಗೆ ಅಭ್ಯರ್ಥಿಗಳಿಗೆ ಆಕ್ಷೇಪಣೆಗಳು ಇದ್ದಲ್ಲಿ ಸೆಪ್ಟಂಬರ್ 21ರಂದು ಸಂಜೆ 5 ಗಂಟೆ ಒಳಗೆ ಇ-ಮೇಲ್ ([email protected]) ಮೂಲಕ ಸಲ್ಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯನಿರ್ವಾಹಕ ನಿರ್ದೇಶಕರು ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.

UGNEET 2025 KEA Releases Medical and AYUSH 3rd Round Seat Allotment Results

ಇನ್ನೂ PB.BSc, ನರ್ಸಿಂಗ್,, BPT ಲ್ಯಾಟರಲ್, B.Sc-AHS (Lateral Entry) ಈ ಕೋರ್ಸ್ ಗಳ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅಭ್ಯರ್ಥಿಗಳಿಗೆ ಕೆಇಎ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಟ್ಟಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು.

ಈ ಮೇಲಿನ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟಂಬರ್ 29 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಗೆ ಸೆಪ್ಟಂಬರ್30 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕೆಇಎ ಜಾಲತಾಣಕ್ಕೆ ಭೇಟಿ ನೀಡಬೇಕು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಇತ್ತೀಚೆಗೆ ಕೆಇಎ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ ಗಳ ಸೀಟು ಹಂಚಿಕೆಗೆ ಇಚ್ಛೆ/ಆಯ್ಕೆಗಳನ್ನು ಅದಲು/ಬದಲು ಅಥವಾ ತೆಗೆದುಹಾಕಲು ಶನಿವಾರವರೆಗೆ ಸಮಯ ವಿಸ್ತರಣೆ ಮಾಡಿತ್ತು. ಮೈಸೂರಿನ ಫಾರೂಕ್ ವೈದ್ಯಕೀಯ ಕಾಲೇಜಿಗೆ ಹೊಸದಾಗಿ ಸೀಟ್ ಮ್ಯಾಟ್ರಿಕ್ಸ್ ನೀಡಿರುವ ಕಾರಣ ಆ ಕಾಲೇಜಿಗೆ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ. ಉಳಿದಂತೆ ಆಪ್ಷನ್ಸ್ ಗಳನ್ನು ಮರು ಕ್ರಮಗೊಳಿಸಿಕೊಳ್ಳಬಹುದು. ಮತ್ತೆ ದಿನಾಂಕ ವಿಸ್ತರಣೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ಎಚ್ಚರವಹಿಸಿ ಕಾರ್ಯ ಪ್ರವೃತ್ತರಾಗುವಂತೆ ಪ್ರಾಧಿಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+