ನರ್ಮ್ ಯೋಜನೆಯಡಿ ಉಡುಪಿಗೆ 30 ಬಸ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಡುಪಿ, ಮಾರ್ಚ್ 15 : ಜವಾಹರ್‌ಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆಯಡಿ ಉಡುಪಿಗೆ 30 ಬಸ್ಸುಗಳು ಸಿಗಲಿವೆ. ಏಪ್ರಿಲ್‌ನಲ್ಲಿ ಬಸ್ಸುಗಳು ಆಗಮಿಸಲಿದ್ದು, ನಗರ ಸಾರಿಗೆ ಸಂಚಾರ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಸಿದ ಬಳಿಕ ಮಾತನಾಡದ ಜಿಲ್ಲಾಧಿಕಾರಿ ಡಾ.ವಿಶಾಲ್ ಅವರು, 'ನರ್ಮ್ ಯೋಜನೆಯಡಿ ಉಡುಪಿಗೆ 30 ಬಸ್ಸುಗಳು ದೊರೆಯಲಿವೆ. ಹೆಚ್ಚಿನ ಜನ ಸಾಂದ್ರತೆ ಇರುವ ಪ್ರದೇಶಗಳಲ್ಲಿ ಮೊದಲು ನಗರ ಸಾರಿಗೆ ಬಸ್ ಸಂಚಾರ ಆರಂಭಿಸಲಾಗುತ್ತದೆ' ಎಂದರು. [ರಾಜ್ಯದ ನಗರಗಳಲ್ಲಿ ಮೇ ಅಂತ್ಯದ ವೇಳೆಗೆ ನಗರ ಸಾರಿಗೆ]

jnnurm project

'ಹಳೆಯ ಬಿಇಒ ಕಚೇರಿ ಬಳಿ ನರ್ಮ್ ಬಸ್ ನಿಲ್ದಾಣ ಆರಂಭಿಸುವ ಕಾಮಗಾರಿಗೆ ಟೆಂಡರ್ ಅಂತಿಮ ಹಂತದಲ್ಲಿದೆ. ಉಡುಪಿ ಬಳಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಪ್ರಾರಂಭಿಸಲಾಗುವುದು ಹಾಗೂ ನಿಟ್ಟೂರು ಬಳಿ ಡಿಪೋ ಇರಲಿದೆ' ಎಂದು ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು.[16 ಪ್ರಮುಖ ನಗರಗಳಲ್ಲಿ ನಗರ ಸಾರಿಗೆ ಬಸ್ ಸೌಲಭ್ಯ]

ಹೆದ್ದಾರಿ ಕಾಮಗಾರಿ ವೇಗ ಹೆಚ್ಚಳ : 'ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ವರ್ಷದ ಮಧ್ಯಭಾಗದಲ್ಲಿ ಪ್ರಮುಖ ಕಾಮಗಾರಿಗಳು ಪೂರ್ಣಗೊಳ್ಳಲಿದೆ' ಎಂದು ಡಾ.ವಿಶಾಲ್ ಹೇಳಿದರು.

ಆಟೋ ನಿಲ್ದಾಣದ ವಿರುದ್ಧ ಕ್ರಮ : 'ಜಿಲ್ಲೆಯಲ್ಲಿ ಅನಧಿಕೃತ ಆಟೋ ನಿಲ್ದಾಣಗಳನ್ನು ಆರಂಭಿಸುತ್ತಿರುವ ಕುರಿತು ದೂರುಗಳು ಬಂದಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
30 buses have been sanctioned to Udupi district under Jawaharlal Nehru National Urban Renewal Mission (JNNURM) project and the buses will start operating in the month of April 2016.
Please Wait while comments are loading...