ಶ್ರೀರಾಮ ರೆಡ್ಡಿ ವಜಾ, ಸಿಪಿಐಎಂ ಕಾರ್ಯದರ್ಶಿಯಾಗಿ ಬಸವರಾಜ್

ನವದೆಹಲಿ/ಬೆಂಗಳುರು, ಡಿಸೆಂಬರ್ 21: ಕರ್ನಾಟಕದ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ಅವರ ಸ್ಥಾನಕ್ಕೆ ಯು. ಬಸವರಾಜ್ ಅವರನ್ನು ನೇಮಿಸಲಾಗಿದೆ ಎಂದು ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸಿಪಿಐ(ಎಂ) ಪ್ರಕಟಿಸಿದೆ.

'ಗಂಭೀರ ದುರ್ನಡತೆ' ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಮಿತಿ ಸದಸ್ಯ ಹಾಗೂ ಕರ್ನಾಟಕದ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ಅವರನ್ನು ಗುರುವಾರದಂದು ಪಕ್ಷದಿಂದ ವಜಾಗೊಳಿಸಿತ್ತು.

ದೆಹಲಿಯಲ್ಲಿ ಡಿಸೆಂಬರ್ 15 ಹಾಗೂ 16ರಂದು ನಡೆದ ಪಕ್ಷದ ಕೇಂದ್ರ ಸಮಿತಿಯ ಸಬೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

U. Basavaraj replaces GV Srirama Reddy becomes CPI(M) Karnataka secretary

ಜಿ.ವಿ. ಶ್ರೀರಾಮ ರೆಡ್ಡಿ ಅವರನ್ನು ಕೇಂದ್ರ ಸಮಿತಿ ಸದಸ್ಯತ್ವ ಹಾಗೂ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಲು ಸಭೆಯಲ್ಲಿ ಪಕ್ಷದ ಎಲ್ಲಾ ಸದಸ್ಯರು ನಿರ್ಧರಿಸಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಹಾಗೂ ಪಾಲಿಟ್ ಬ್ಯೂರೊ ಸದಸ್ಯರು ಪಾಲ್ಗೊಂಡ ಬೆಂಗಳೂರಿನಲ್ಲಿ ಡಿಸೆಂಬರ್ 18ರಂದು ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಕರ್ನಾಟಕದ ಕಾರ್ಯದರ್ಶಿಯನ್ನಾಗಿ ಯು. ಬಸವರಾಜು ಅವರನ್ನು ಸರ್ವಸಮ್ಮತವಾಗಿ ಆಯ್ಕೆ ಮಾಡಲಾಗಿದೆ

ಎರಡು ಬಾರಿ ಸಿಪಿಐ(ಎಂ) ನಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದ ಶ್ರೀರಾಮ ರೆಡ್ಡಿ ಅವರ ವಿರುದ್ಧ ಪಕ್ಷದಿಂದ ತನಿಖೆ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+