ರಾಯಚೂರು: ಕಾಲುವಿಗೆ ಬಿದ್ದು ಬೆಳಗಾವಿಯ ಇಬ್ಬರು ಕುರಿಗಾಹಿಗಳು ಸಾವು
ರಾಯಚೂರು, ಜುಲೈ 10 : ದೇವದುರ್ಗದ ಜಾಗಟಗಲ್ ಬಳಿ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಬಿದ್ದು ಇಬ್ಬರು ಕುರಿಗಾಯಿಗಳು ಸಾವನ್ನಪ್ಪಿದ್ದಾರೆ.
ಬೆಳಗಾವಿಯ ಜೋಳಕುರಡಿ ಮೂಲದ 48 ವರ್ಷದ ಆಲಪ್ಪ ಹಾಗೂ 20 ವರ್ಷದ ಬಸವ ಸಾವನ್ನಪ್ಪಿರುವ ದುರ್ದೈವಿಗಳು. ನೀರು ಕುಡಿಯಲು ಕಾಲುವೆಗೆ ಇಳಿದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಒಬ್ಬನನ್ನು ಕಾಪಾಡಲು ಹೋಗಿ ಕೊನೆಗೆ ಇಬ್ಬರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗ್ರಾಮಸ್ಥರು ಶವಗಳನ್ನ ಹೊರತೆಗೆದಿದ್ದಾರೆ. ಈ ಬಗ್ಗೆ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications