ವಿಜಯಪುರ: ಮುಸುಕುಧಾರಿಗಳಿಂದ ಮಹಿಳೆ ಮೇಲೆ ಗುಂಡಿನ ದಾಳಿ
ವಿಜಯಪುರ: ಮುಸುಕುಧಾರಿಗಳಿಬ್ಬರು ಬೈಕನಲ್ಲಿ ಬಂದು ಏಕಾಏಕಿ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ಜಿಲ್ಲೆಯ ಇಂಡಿ ತಾಲೂಕಿನ ಮಣಂಕಲಗಿ ಗ್ರಾಮದ ಅಡವಿ ವಸ್ತಿ ಹತ್ತಿರ ಶನಿವಾರ ತಡರಾತ್ರಿ ಶೀಲವಂತಬಾಯಿ ಸತ್ಯಪ್ಪ ಕೋಳಿ(58) ಎನ್ನುವರ ಮೇಲೆ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದಾರೆ.

ಗಾಯಾಳು ಮಹಿಳೆಯನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೀಲವಂತಬಾಯಿ ಅವರ ಎಡಗಾಲಿನ ತೊಡೆಗೆ ಎರಡು ಗುಂಡುಗಳು ತಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫೈರಿಂಗ್ ಯಾವ ಕಾರಣಕ್ಕಾಗಿ ಆಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.












Click it and Unblock the Notifications