ಮಂಡ್ಯದಲ್ಲಿ ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರು ಸಾವು
ಮಂಡ್ಯ, ಡಿಸೆಂಬರ್, 21: ನೂತನ ಪೊಲೀಸ್ ವಸತಿ ಗೃಹದಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಭಾನುವಾರ ನಡೆದಿದೆ.
ಮೈಸೂರು ಜಿಲ್ಲೆಯ ರಾಜೀವನಗರ ನಿವಾಸಿಗಳಾದ ಶಬ್ಬೀರ್ ಬೇಗ್(40), ಜಬ್ಬಾರ್ ಬೇಗ್(38) ಮೃತಪಟ್ಟ ದುರ್ದೈವಿಗಳು. ಘಟನೆ ಕುರಿತು ಮೃತರ ಭಾವ ವಾಸಿಂ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.[ಕರ್ನಾಟಕ: ಸಬ್ಸಿಡಿ ದರದಲ್ಲಿ 6 ಕೋಟಿ ಎಲ್ಇಡಿ ಬಲ್ಬ್]

ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ತಾಲೂಕು ಕಚೇರಿ ಬಳಿ ಸರ್ಕಾರಿ ನೌಕರ ಸಂಘದ ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ನಿವೇಶನದಲ್ಲಿ 1.5 ಕೋಟಿ ರೂ ವೆಚ್ಚದಲ್ಲಿ ಪೊಲೀಸ್ ಗೃಹ ನಿರ್ಮಾಣ ಮಂಡಳಿ ಪೊಲೀಸ್ ವಸತಿ ಗೃಹವನ್ನು ನಿರ್ಮಿಸುತ್ತಿದ್ದರು. ಈ ಕಟ್ಟಡ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಕಟ್ಟಡದ ಕಾಂಕ್ರಿಟ್ ಕ್ಯೂರಿಂಗ್ ಗಾಗಿ ಒಳ ಆವರಣದಲ್ಲ್ಲಿ ನೀರನ್ನು ನಿಲ್ಲಿಸಲಾಗಿತ್ತು.[ಸರ್ಕಾರಿ ಕಚೇರಿಗಳಲ್ಲಿ ಇನ್ನು ಸೋಲಾರ್ ವಿದ್ಯುತ್ ಉತ್ಪಾದನೆ]
ಕಟ್ಟಡದ ಪ್ಲಂಬಿಂಗ್ ಕಾಮಗಾರಿಯನ್ನು ಮುಖ್ಯ ಗುತ್ತಿಗೆದಾರರಿಂದ ಉಪಗುತ್ತಿಗೆ ಪಡೆದುಕೊಂಡು ಶಬ್ಬೀರ್ ಬೇಗ್ ಮತ್ತು ಜಬ್ಬಾರ್‍ಬೇಗ್ ಕೆಲಸ ಮಾಡುತ್ತಿದ್ದರು. ಕಟ್ಟಡ ಕಾಮಗಾರಿ ಕೆಲಸಕ್ಕೆ ವಿದ್ಯುತ್ ಸಂಪರ್ಕವನ್ನು ಇಲಾಖೆಯ ಅನುಮತಿ ಮೇರೆಗೆ ಪಡೆಯಲಾಗಿತ್ತು.
ಕಟ್ಟಡ ಕ್ಯೂರಿಂಗ್ ಮಾಡುವವರು ಕಟ್ಟಡಕ್ಕೆ ನೀರು ಹರಿಯಬಿಟ್ಟಿದ್ದರು. ಇದರ ಪರಿಣಾಮ ಕಟ್ಟಡದ ಒಳಗೆ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಶಬ್ಬೀರ್ ಬೇಗ್ ಮತ್ತು ಜಬ್ಬಾರ್‍ಬೇಗ್ ಅವರಿಗೆ ವಿದ್ಯುತ್ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.[ಎಲ್ಇಡಿ, ಸಿಎಫ್ಎಲ್, ಸಾಮಾನ್ಯ ಬಲ್ಬ್ ನಡುವಿನ ವ್ಯತ್ಯಾಸ]
ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಯೋಗೇಶ್, ಪಿಎಸ್ಐ ವಿನಯ್ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಶವಗಳನ್ನು ಹೊರತೆಗೆದು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.












Click it and Unblock the Notifications