ಕನ್ನಡ ನಾಡು-ನುಡಿ ಸುದ್ದಿಗೆ ಬಂದ್ರೆ ಸುಮ್ಮನೆ ಬಿಡ್ತಿವಾ?

Subscribe to Oneindia Kannada

ಬೆಂಗಳೂರು, ಫೆಬ್ರವರಿ, 11: ಕನ್ನಡ ನಾಡು, ನುಡಿಗೆ ಎಲ್ಲಿಯೇ ಸಂಕಷ್ಟ ಬಂದರೂ ಯಾರೂ ಸುಮ್ಮನಿರಬಾರದು. ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಸದಾ ಕ್ರಿಯಾಶೀಲವಾಗಿರುವ "ಸಾಮಾನ್ಯ ಕನ್ನಡಿಗ" ಗುಂಪು ಇದೀಗ ಕನ್ನಡಕ್ಕೆ ಅವಮಾನ ಮಾಡಿದವರ ಬೆನ್ನು ಬಿದ್ದಿದೆ. ಅಲ್ಲದೇ ಅವಮಾನ ಮಾಡಿದವರಿಂದ ವಿಡಿಯೋ ಕ್ಷಮೆ ಯನ್ನು ಪಡೆದುಕೊಂಡಿದೆ.

ಮಹಾರಾಷ್ಟ್ರ ಮೂಲದ ಇಬ್ಬರು ಕನ್ನಡ ಭಾಷೆ ಮತ್ತು ಬೆಂಗಳೂರನ್ನು ಅವಹೇಳನ ಮಾಡುವಂತಹ ಪೋಸ್ಟ್ ಗಳನ್ನು ಫೇಸ್ ಬುಕ್ ನಲ್ಲಿ ಹಾಕಿದ್ದರು. ತಾಂಜಾನೀಯಾ ವಿದ್ಯಾರ್ಥಿನಿ ಪ್ರಕರಣವನ್ನು ಇಟ್ಟುಕೊಂಡು ಬೆಂಗಳೂರಿಗನ್ನು ನಿಂದಿಸಿದ್ದರು.[ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಹುದ್ದೆಗೆ 15 ಸ್ಪರ್ಧಿಗಳು]

Two guys 'abuse' Kannada: Samanya Kannadiga group traces them to apology

ಕನ್ನಡಾಭಿಮಾನಿ ಪೇಜ್ ನ್ನು ಟಾಗ್ ಮಾಡಿ ಕೆಟ್ಟ ಪೋಸ್ಟ್ ಹಾಕಲಾಗಿತ್ತು. ಇದನ್ನು ಕಂಡ ಸಾಮಾನ್ಯ ಕನ್ನಡಿಗ ತಂಡದ ಸದಸ್ಯರು ಪೋಸ್ಟ್ ಮಾಡಿದವರಿಗೆ ತಿಳಿವಳಿಕೆ ಹೇಳಿ ಅದನ್ನು ತೆಗೆಸಿದ್ದಾರೆ.

ನಾವು ಏಕಾಏಕಿ ಅವರಿಗೆ ಬೆದರಿಕೆ ಹಾಕಲಿಲ್ಲ. ಕೆಟ್ಟ ಪೋಸ್ಟ್ ನ್ನು ತೆಗೆಯಿರಿ ಎಂದು ವಿನಂತಿ ಮಾಡಿಕೊಂಡರೆ ಕೇಳದೆ ಉಲ್ಟಾ ಮಾತನಾಡಿದರು. ಹಾಗಾಗಿ ನಾವು ಅವರ ಕಚೇರಿಗೆ ತೆರಳಿ ಒತ್ತಡ ಹೇರಬೇಕಾಗಿ ಬಂತು ಎಂದು ಸಾಮಾನ್ಯ ಕನ್ನಡಿಗ ಪೇಜ್ ಸಂಪಾದಕ ಸಿವಿಕ್ ಸೊಸೈಟಿ ಅಧ್ಯಕ್ಷ ಪವನ್ ತಿಳಿಸುತ್ತಾರೆ.[ಇಂಗ್ಲೀಷ್-ಎಲ್ಲರ ಕನ್ನಡ ನಿಘಂಟಿಗೆ ಮುನ್ನುಡಿ]

ಮಹಾರಾಷ್ಟ್ರದ ವ್ಯಕ್ತಿಯೊಬ್ಬ ತಾಂಜಾನೀಯಾ ವಿದ್ಯಾರ್ಥಿನಿ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಬೆಂಗಳೂರಿಗರು ಮತ್ತು ಪೊಲೀಸರ ಮೇಲೆ ಕೆಂಡ ಕಾರಿದ್ದ. ಇದನ್ನು ಸಹಿಸದ ಸಾಮಾನ್ಯ ಕನ್ನಡಿಗ ತಂಡದವರು ಇಬ್ಬರಿಂದಲೂ ವಿಡಿಯೋ ಕ್ಷಮಾಪಣೆ ಪಡೆದುಕೊಂಡಿದ್ದಾರೆ.

ಇಂಥ ಕಾರ್ಯಗಳನ್ನು ಮಾಡುವವರು ಸ್ವಲ್ಪ ಎಚ್ಚರಿಕೆ ವಹಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಮ್ಮ ನೆಲ, ಜಲ, ಭಾಷೆಗೆ ಅವಹೇಳನ ಮಾಡಿದರೆ ಸುಮ್ಮನೆ ಬಿಡಲು ಸಾಧ್ಯವಿಲ್ಲ ಎಂದು ಸಮಾನ್ಯ ಕನ್ನಡಿಗ ತಂಡದ ಸಂದೀಪ್ ಹೇಳುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In an 'initiative' to take Kannada language and Karnataka culture abusers to task, Bengaluru-based civic society group Samanya Kannadga has tendered a video apology from the two abusers.
Please Wait while comments are loading...