ಭಪ್ಪರೇ!! ಪಕ್ಷದೊಳಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ್ರಾ ಸಿದ್ದರಾಮಯ್ಯ?

Posted By:
Subscribe to Oneindia Kannada
   ಕರ್ನಾಟಕ ಚುನಾವಣೆ 2018ಕ್ಕೆ ಸಿದ್ದರಾಮಯ್ಯನವರ ಚಾಣಾಕ್ಷತನದ ನಡೆ | Oneindia Kannada

   ಚುನಾವಣಾ ಈ ಹೊಸ್ತಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡುತ್ತಿರುವ ಒಂದೊಂದು ರಾಜಕೀಯ ನಡೆ ಪಕ್ಷದೊಳಗೆ ಸಂಚಲನ ಮೂಡಿಸುತ್ತಿದ್ದರೆ, ಸಿಎಂ ನೀಡುತ್ತಿರುವ ಹೇಳೆಕೆಗಳು ಹಿರಿಯ ಕಾಂಗ್ರೆಸ್ಸಿಗರ ಅಸಮಾಧಾನಕ್ಕೂ ಕಾರಣವಾಗುತ್ತಿದೆ.

   ಅರ್ಧಂಬರ್ಧ ಮುಗಿದಿರುವ ಕಾಮಗಾರಿಯನ್ನೇ ತರಾತುರಿಯಲ್ಲಿ, ಶನಿವಾರ (ಮಾ 10) ತಮ್ಮ ಸ್ವಂತ ಜಿಲ್ಲೆ ಮೈಸೂರಿನಲ್ಲಿ 'ಭರ್ಜರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ' ಶೋ ನಡೆಸುವ ಮೂಲಕ ಮುಖ್ಯಮಂತ್ರಿಗಳು ಮತ್ತೊಂದು ರೀತಿಯ ಶಕ್ತಿಪ್ರದರ್ಶನ ನಡೆಸಿದರು.

   ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

   ಸರಿಸುಮಾರು ಹದಿನೆಂಟು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆಸಿದ ಸಿದ್ದರಾಮಯ್ಯ, ಮುಂಬರುವ ಚುನಾವಣೆಯಲ್ಲಿ ಕ್ಷೇತ್ರ ಬದಲಿಸಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ತಾವೇ ನಡೆಸಿದ ಸರ್ವೇ ಪ್ರಕಾರ ಸಿಎಂ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

   ತಮ್ಮ ಮಗ ಡಾ. ಯತೀಂದ್ರರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಮಾಸ್ಟರ್ ಪ್ಲಾನ್ ಸಿದ್ದರಾಮಯ್ಯ ಹಾಕಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

   ಚುನಾವಣೆ 2018: ಕಾಂಗ್ರೆಸ್ 123 ಅಭ್ಯರ್ಥಿಗಳ ಪಟ್ಟಿ

   ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಸುಲಭವಲ್ಲ ಎನ್ನುವ ಸರ್ವೇ ವರದಿ ಬಂದಿರುವ ಹಿನ್ನಲೆಯಲ್ಲಿ, ಮಗನಿಗೆ ವರುಣ ಕ್ಷೇತ್ರದಿಂದ ರಾಜಕೀಯ ಎಂಟ್ರಿ ಕೊಡಿಸಲು ನಿರ್ಧರಿಸಿದ್ದ ಸಿದ್ದರಾಮಯ್ಯ, ತಮ್ಮ ನಿಲುವನ್ನು ಈಗ ಬದಲಾಯಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕಾಂಗ್ರೆಸ್ ಪಡಶಾಲೆಯಲ್ಲಿ ಹರಿದಾಡುತ್ತಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಸಿದ್ದರಾಮಯ್ಯ? ಮುಂದೆ ಓದಿ..

   ಪಕ್ಷದ ಜಿ ಟಿ ದೇವೇಗೌಡ ನಡುವಿನ ಗೆಲುವಿನ ಅಂತರ ಕೇವಲ ಶೇ. 5

   ಪಕ್ಷದ ಜಿ ಟಿ ದೇವೇಗೌಡ ನಡುವಿನ ಗೆಲುವಿನ ಅಂತರ ಕೇವಲ ಶೇ. 5

   ತಾನು ನಡೆಸಿದ ಪ್ರತ್ಯೇಕ ಸರ್ವೇಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಮತ್ತು ಸಂಭಾವ್ಯ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಜಿ ಟಿ ದೇವೇಗೌಡ ನಡುವಿನ ಗೆಲುವಿನ ಅಂತರ ಕೇವಲ ಶೇ. 5. ಮತದಾನ ಹತ್ತಿರ ಬರುತ್ತಿದ್ದಂತೇ, ಇದು ಹೇಗೆ ಬೇಕಾದರೂ ತಿರುಗಬಹುದು. ಈ ಕಾರಣಕ್ಕಾಗಿ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ವರದಿ ಬಂದಿರುವ ಹಿನ್ನಲೆಯಲ್ಲಿ ಚಾಮುಂಡೇಶ್ವರಿಯಿಂದ ಸ್ಪರ್ಧಿಸುವ ನಿರ್ಧಾರದಿಂದ ಸಿಎಂ ಹಿಂದಕ್ಕೆ ಸರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

   ಜಿ ಟಿ ದೇವೇಗೌಡ, ವಿ ಶ್ರೀನಿವಾಸ ಪ್ರಸಾದ್ ಮತ್ತು ಎಚ್ ವಿಶ್ವನಾಥ್

   ಜಿ ಟಿ ದೇವೇಗೌಡ, ವಿ ಶ್ರೀನಿವಾಸ ಪ್ರಸಾದ್ ಮತ್ತು ಎಚ್ ವಿಶ್ವನಾಥ್

   ತನ್ನನ್ನು ಸೋಲಿಸಲು ಜಿ ಟಿ ದೇವೇಗೌಡ, ವಿ ಶ್ರೀನಿವಾಸ ಪ್ರಸಾದ್ ಮತ್ತು ಎಚ್ ವಿಶ್ವನಾಥ್ ಠೊಂಕ ಕಟ್ಟಿನಿಂತಿರುವುದರಿಂದ, ಚಾಮುಂಡೇಶ್ವರಿ ಬದಲು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ, ಕಾಂಗ್ರೆಸ್ ಹೈಕಮಾಂಡಿಗೆ ಸಿದ್ದರಾಮಯ್ಯ ಮನವಿ ಸಲ್ಲಿಸುವ ಸಾಧ್ಯತೆಯಿದೆ. ಜಿ ಟಿ ದೇವೇಗೌಡ ಭರ್ಜರಿ ಪೈಪೋಟಿ ನೀಡುವ ಸಾಧ್ಯತೆಯಿದ್ದು, ಸಿದ್ದರಾಮಯ್ಯನವರಿಗೆ ಸೋಲಿನ ಭೀತಿ ಕಾಡುತ್ತಿದೆ ಎನ್ನಲಾಗುತ್ತಿದೆ.

   ಮಗ ಯತೀಂದ್ರರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದ ಸಿದ್ದರಾಮಯ್ಯ

   ಮಗ ಯತೀಂದ್ರರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದ ಸಿದ್ದರಾಮಯ್ಯ

   ವರುಣಾ ಕ್ಷೇತ್ರದಿಂದ ತಮ್ಮ ಮಗ ಯತೀಂದ್ರರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದ ಸಿದ್ದರಾಮಯ್ಯ ಈಗ ಆ ಕ್ಷೇತ್ರದಿಂದ ತಾನೇ ಕಣಕ್ಕಿಳಿಯುವ ಸಾಧ್ಯತೆಯಿದೆ. ಆ ಮೂಲಕ, ಹಿರಿಯ ಕಾಂಗ್ರೆಸ್ಸಿಗರು ತಮ್ಮ ಮಕ್ಕಳಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹೇರುತ್ತಿರುವ ಹಿನ್ನಲೆಯಲ್ಲಿ, ಕುಟುಂಬದಿಂದ ಒಬ್ಬರಿಗೆ ಒಂದೇ ಟಿಕೆಟ್, ಇದಕ್ಕೆ ತಾನೇ ಒಂದು ಉದಾಹರಣೆಯೆಂದು ಸಿದ್ದರಾಮಯ್ಯ ಸಾರುವ ಸಾಧ್ಯತೆ ದಟ್ಟವಾಗಿದೆ.

   ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಮಾಸ್ಟರ್ ಪ್ಲಾನ್

   ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಮಾಸ್ಟರ್ ಪ್ಲಾನ್

   ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಕ್ಷೇತ್ರ ಬದಲಾಯಿಸಲು ನಿರ್ಧರಿಸಿದ್ದರೂ, ತನ್ನ ಮಗನಿಗೂ ಟಿಕೆಟ್ ಬೇಡವೆಂದು ಹೈಕಮಾಂಡ್ ಮುಂದೆ ಹೇಳಿದರೆ, ಇತರ ಕಾಂಗ್ರೆಸ್ ಮುಖಂಡರು ತಮ್ಮ ಕುಟುಂಬದವರಿಗೆ ಟಿಕೆಟ್ ಕೇಳಲು ಹಿಂಜರಿಯಬಹುದು ಎನ್ನುವುದು ಸಿದ್ದರಾಮಯ್ಯನವರ ಅವರ ಲೆಕ್ಕಾಚಾರ. ಆ ಮೂಲಕ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಮಾಸ್ಟರ್ ಪ್ಲಾನ್ ಮುಖ್ಯಮಂತ್ರಿಗಳದ್ದು ಎನ್ನಲಾಗುತ್ತಿದೆ.

   ಮಕ್ಕಳು/ ಸಹೋದರರಿಗೆ ಟಿಕೆಟ್ ನೀಡಬೇಕೆನ್ನುವ ಒತ್ತಡ

   ಮಕ್ಕಳು/ ಸಹೋದರರಿಗೆ ಟಿಕೆಟ್ ನೀಡಬೇಕೆನ್ನುವ ಒತ್ತಡ

   ಹಿರಿಯ ಕಾಂಗ್ರೆಸ್ಸಿಗರೂ ಸೇರಿದಂತೆ, ಪಕ್ಷದ ಹಲವು ಮುಖಂಡರು, ತಮಗೊಂದು ಜೊತೆಗೆ ತಮ್ಮ ಮಕ್ಕಳು/ ಸಹೋದರರಿಗೆ ಟಿಕೆಟ್ ನೀಡಬೇಕೆನ್ನುವ ಒತ್ತಡ ಹೇರುತ್ತಿದ್ದಾರೆ. ಇದು ಚುನಾವಣೆಯ ಸಮಯದಲ್ಲಿ ಭಿನ್ನಮತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಹಾಗಾಗಿ, ಕುಟುಂಬದಿಂದ ಒಬ್ಬರಿಗೇ, ಗೆದ್ದೇ ಗೆಲ್ಲುತ್ತಾರೆ ಎನ್ನುವ ಪಕ್ಕಾ ವಿಶ್ವಾಸವಿದ್ದರೆ ಮಾತ್ರ ಇಬ್ಬರಿಗೆ ಎನ್ನುವ ನಿರ್ಧಾರಕ್ಕೆ ಬರಲು, ಸಿಎಂ ಕ್ಷೇತ್ರ ಬದಲಿಸುವ ನಿರ್ಧಾರ ಹೈಕಮಾಂಡಿಗೆ ಪೂರಕವಾಗುವ ಸಾಧ್ಯತೆಯಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Two birds in single stone, CM Siddaramaiah possible new political move before Karnataka assembly election 2018. As per survey report, chances of winning the Chamundeshwari assembly seat is tough, hence CM decided to stand from Varuna (where he was planning to give that seat to his son).

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ