• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದಲ್ಲಿ ಗ್ರಾಹಕ ಸೇವೆ... ಟ್ವಿಟ್ಟರ್ ನಲ್ಲಿ ಒಕ್ಕೊರಲ ಆಂದೋಲನ

|

ಗ್ರಾಹಕರ ಸೇವೆಗಾಗಿಯೇ ಇರುವ ಯಾವುದೇ ಕಚೇರಿಗೆ ಫೋನಾಯಿಸಿ, ನಮಗೆ ಕನ್ನಡ ಮಾತ್ರವೇ ಗೊತ್ತಿದ್ದರೆ ಪೇಚಿಗೆ ಬೀಳಲೇಬೇಕಾದ ಪರಿಸ್ಥಿತಿ ಎದುರಿಸೋದು ಖಂಡಿತ. ಬೆಂಗಳೂರಲ್ಲಿ ಕನ್ನಡವಿಲ್ಲದೆಯೂ ಬದುಕಬಹುದು, ಆದರೆ ಇಂಗ್ಲಿಷ್, ಹಿಂದಿ ಕಲಿಯದೆ ಉಳಿಗಾಲವಿಲ್ಲ ಎಂಬಂಥ ಪರಿಸ್ಥಿತಿ ಎದುರಾಗಿದೆ.

ಅದು ಬ್ಯಾಂಕ್ ಇರಲಿ, ಗ್ಯಾಸ್ ಏಜೆನ್ಸಿ ಇರಲಿ, ಟೆಲಿಫೋನ್ ಆಫೀಸ್ ಇರಲಿ, ಬಹುಪಾಲು ಅಂಗಡಿಗಳಿರಲಿ, ಇನ್ಯಾವುದೇ ಖಾಸಗಿ, ಸರ್ಕಾರಿ ಕಚೇರಿಯೇ ಇದ್ದಿರಲಿ ಕನ್ನಡದಲ್ಲೇ ಗ್ರಾಹಕರಿಗೆ ಸೇವೆ ನೀಡುವುದು ಅಪರೂಪವೇ.

ಮೋದಿ ಕನ್ನಡ ಮಾತಾಡಿದ್ರೆ ಕೇಳೋಕೆ ಚೆಂದ ಎಂದ ಯುವತಿಗೆ ಮೋದಿ ಹೇಳಿದ್ದೇನು?

ಹೀಗಿರುವಾಗ ಕನ್ನಡದಲ್ಲಿಯೇ ಗ್ರಾಹಕ ಸೇವೆ ಆರಂಭಿಸಬೇಕು ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿಶುರುಮಾಡಲಾಗಿದ್ದು, ಅದಕ್ಕೆ ಸಾವಿರಾರು ಕನ್ನಡಿಗರ ಬೆಂಬಲ ದೊರೆತಿದೆ. ಇಂದು ವಿಶ್ವದಾದ್ಯಂತ ಗ್ರಾಹಕ ಹಕ್ಕು ದಿನ(ಮಾರ್ಚ್ 15)ವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಕನ್ನಡದಲ್ಲೇ ಗ್ರಾಹಕರ ಸೇವೆಯ ಒತ್ತಾಯ ಮುನ್ನಲೆಗೆ ಬಂದಿದೆ.

#ಕನ್ನಡದಲ್ಲಿ-ಗ್ರಾಹಕ ಸೇವೆ ಎಂಬ ಹ್ಯಾಶ್ ಟ್ಯಾಂಗ್ ನೊಂದಿಗೆ ಟ್ವಿಟ್ಟರ್ ನಲ್ಲಿ ಸಾಕಷ್ಟು ಕನ್ನಡ ಪ್ರೇಮಿಗಳು ಕನ್ನಡ ಭಾಷೆಯಲ್ಲಿ ಗ್ರಾಹಕ ಸೇವೆ ನೀಡುವ ಒತ್ತಾಯ ಮಾಡಿದ್ದಾರೆ.

ಗ್ರಾಹಕನಿಗೆ ಗ್ರಾಹಕನ ಭಾಷೆಯಲ್ಲೇ ಸೇವೆ

ಗ್ರಾಹಕನಿಗೆ ಗ್ರಾಹಕನ ಭಾಷೆಯಲ್ಲೇ ಸೇವೆ ನೀಡುವುದು ಬಹಳ ಮುಖ್ಯವಾದುದು, ಕೊಳ್ಳುಗ ತಾನು ಕೊಳ್ಳುವ ವಸ್ತುವಿನ ಬಗ್ಗೆ ತನ್ನ ಭಾಷೆಯಲ್ಲೇ ಮಾಹಿತಿ ಪಡೆಬೇಕಾದ್ದು ಹೆಚ್ಚು ಸೂಕ್ತವಾದುದ್ದು -ಅರುಣ್ ಜಾವಗಲ್

ಮಾಹಿತಿ ನಮ್ಮ ನುಡಿಯಲ್ಲಿ ಇರಲಿ

ಸಾಮಾನು ಇರಲಿ, ಮಶಿನ್ ಇರಲಿ, ಚೂಟಿಯುಲಿ ಇರಲಿ, ಮದ್ದಿರಲಿ, ತಿನಿಸಿರಲಿ, ಉಣಿಸಿರಲಿ, ಕಾನೂನು ಇರಲಿ, ಹಣಮನೆ ಇರಲಿ, ಸೆರ್ವೀಸ್ ಮ್ಯಾನುಯಲ್ ಇರಲಿ. ಮಾಹಿತಿ ನಮ್ಮ ನುಡಿಯಲ್ಲಿ ಇರಲಿ

ಇದು ನಮ್ಮ‌ಹಕ್ಕು.

ನಮ್ಮ ನುಡಿಯಲ್ಲಿ ಇಲ್ಲದಿದ್ದರೆ‌ ಕೇಳಿ ಪಡೆಯೋಣ- ಕುಮಾರಸ್ವಾಮಿ

ಕಾರ್ ಪಾರ್ಕ್ ಬಳಿ ರಸ್ತೆ ಉದ್ದಕ್ಕೂ ಕನ್ನಡದ ವರ್ಣಮಾಲೆಯದ್ದೇ ಆಕರ್ಷಣೆ

ಹೆಚ್ಚುಗಾರಿಕೆ ದೊರೆಯಲಿ

ಈಗಲಾದರೂ ಕೊಳ್ಳುಗರ ನುಡಿಗೆ ತಕ್ಕ ಬೆಲೆ, ಹೆಚ್ಚುಗಾರಿಕೆ ದೊರೆಯಲಿ. ನೆಪಗಳು ಇವೆಲ್ಲಾ ಬೇಕಿಲ್ಲ, ಎಸಕ ಕಾಣಬೇಕು. ಇದರ ಸಲುವಾಗಿ ಕಟ್ಟಳೆ ಮೂಡಬೇಕು. ನೆರವೇರುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ, ಅದೇ ನಮ್ಮ ಗುರಿಯೆಂದು ಎಲ್ಲಾ ಆಳ್ವಿಕೆಯವರಿಗೆ ತಿಳಿಯಲಿ

ಸಮಸ್ಯೆಗಳಿಗೆ ಗ್ರಾಹಕರಾಗಿ ಪ್ರತಿಭಟಿಸಿ

ಕನ್ನಡದ ಬಗ್ಗೆ ಕನ್ನಡಿಗರ ಬಗ್ಗೆ ಕಾಳಜಿ ಇರುವ ಎಲ್ಲರಲ್ಲೂ ಒಂದು ಮನವಿ. ಕನ್ನಡ ಕೇಂದ್ರಿತ ಗ್ರಾಹಕ ಹೋರಾಟ ಒಂದು ಜನಾಂದೋಲನ. ಅದು ಯಾವುದೋ ಒಂದು ಸಂಘ ಸಂಸ್ಥೆಯೋ, ಒಂದಷ್ಟು ಆಸಕ್ತರೋ ಮಾಡೋ ಕೆಲಸವಲ್ಲ. ಕನ್ನಡಿಗರೆಲ್ಲರೂ ತಮ್ಮ ವ್ಯಾಪ್ತಿಯಲ್ಲಿ ಬರುವಂತ ಕನ್ನಡ ಕೇಂದ್ರಿತ ಸಮಸ್ಯೆಗಳಿಗೆ ಗ್ರಾಹಕರಾಗಿ ಪ್ರತಿಭಟಿಸಿ- ಗಣೇಶ್ ಚೇತನ್

ಹಗಲು ದರೋಡೆ ತಡೆಯಲು ಕಾನೂನು ಬರಬೇಕು!

ಗ್ರಾಹಕರಿಗೆ ಅವರ ನುಡಿಯಲ್ಲಿಯೇ ಸೇವೆಯನ್ನು ಕೊಡದ ಸರ್ಕಾರಿ/ಖಾಸಗಿ ಸೇವೆಗಳು ಪ್ರಪಂಚದಲ್ಲಿ ಎಲ್ಲಿಯಾದರೂ ಇದ್ದರೆ ಅದು ಭಾರತದಲ್ಲಿಯೇ. ಗ್ರಾಹಕರ ಹಕ್ಕುಗಳಿಗೆ ಪೂರಕವಾಗುವಂತಹ ಕಾನೂನು ಬದಲಾವಣೆಗಳನ್ನು ತರದೆ ಈ ಹಗಲು ದರೋಡೆಯನ್ನು ತಡೆಯಲಾಗದು -ಶ್ರುತಿ ಎಚ್ ಎಂ

ರಾಜಕೀಯ ಇಚ್ಛಾಶಕ್ತಿಗೆ ಹಿಡಿದ ಕನ್ನಡಿ

ಒಬ್ಬ ವ್ಯಕ್ತಿಗೆ ತನ್ನ ರಾಜ್ಯದಲ್ಲಿ ತನ್ನದೇ ಭಾಷೆಯಲ್ಲಿ ಸೇವೆ ಕೊಡಬೇಕು ಎಂದು ಒತ್ತಾಯಿಸಿ ಕೇಳಿ ಪಡೆಯುತ್ತಿರುವುದು ಇಂದಿನ ರಾಜಕೀಯ ಇಚ್ಛಾಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ನಮ್ಮ ರಾಜಕೀಯ ನಾಯಕರು ಹಾಗು ಸರಕಾರಕ್ಕೆ ಗ್ರಾಹಕ ಸೇವೆ ಒಂದು ಗಮನಹರಿಸಬೇಕಾದ ಕ್ಷೇತ್ರ ಎನ್ನುವುದೇ ಅರಿವಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Many Kannadigas on twitter started a social media campaign to demand Consumers' service in Kannada Language. The voice raised on World Consumers' rights day March 15
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more