Copra Price: ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ದರ 38000 ರೂ; ವಿವಿಧ ಮಾರುಕಟ್ಟೆಗಳ ಬೆಲೆ ಅಪ್ಡೇಟ್ಸ್‌

ಬೆಂಗಳೂರು: ಕೊಬ್ಬರಿ, ತೆಂಗು ಬೆಳೆ ಎಂದಾಕ್ಷಣ ನೆನಪಾಗುವುದು ತುಮಕೂರು ಜಿಲ್ಲೆ. ಈ ಭಾಗದಲ್ಲಿ ಅದರಲ್ಲೂ ತಿಪಟೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಯಲಾಗುತ್ತದೆ. ತೆಂಗು ಕೃಷಿಯಲ್ಲಿ ಮುಂದಿರುವ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಉಂಡೆ ಕೊಬ್ಬರಿ ದರ ಗರಿಷ್ಠ 38,000 ರೂಪಾಯಿಯೇ ಮುಂದುವರಿದಿದೆ. ಸುಮಾರು ಎರಡು ವಾರಗಳಿಂದಲೂ ಇದೆ ದರ ಇದ್ದು, ಜಿಲ್ಲೆ ಇತರ ಮಾರುಕಟ್ಟೆ ಹಾಗೂ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಕೊಬ್ಬರಿ ದರ ಎಷ್ಟಿದೆ ಎಂದು ಇಂದಿನ (ಏಪ್ರಿಲ್ 25ರ) ಅಪ್ಡೇಟ್ ಮಾಹಿತಿ ಇಲ್ಲಿದೆ.

ಕೊಬ್ಬರಿ ದರ ವಿಚಾರಕ್ಕೆ ಬಂದರೆ ಥಟ್ ಅಂತ ನೆನಪಾಗುವುದು ಕಲ್ಪತರು ನಾಡು ತುಮಕೂರು. ಹೆಸರೇ ಹೇಳುವಂತೆ ವಾಣಿಜ್ಯ ಬೆಳೆ ತೆಂಗು ಕೃಷಿಯನ್ನು ಇಲ್ಲಿನ ಜನರು ಅವಲಂಬಿಸಿದ್ದು ಹೆಚ್ಚು. ಎಳನೀರು, ತೆಂಗಿನ ಕಾಯಿ ಸಂಗ್ರಹ, ಉಂಡೆ ಕೊಬ್ಬರಿ ಮಾರಾಟ ಅಧಿಕ. ಇಲ್ಲಿನ ಕೊಬ್ಬರಿಯು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಹೆಚ್ಚಿನ ಎಣ್ಣೆ ಅಂಶ, ದಪ್ಪ ಇರುವ ಕಾರಣ ಈ ಕೊಬ್ಬರಿಗೆ ಬೇಡಿಕೆ ಹೆಚ್ಚು ಎನ್ನಬಹುದು.

Copra prices in Tiptur APMC stay at record Rs 38 000 while rates remain stable across other Karnataka other markets today april 25 Check copra markerwise rate list here

ಇದರ ಡಿಮ್ಯಾಂಡ್ ಹೆಚ್ಚಿರುವ ಕಾರಣ ಉತ್ತರ ಭಾರತದ ವಿವಿಧ ಭಾಗಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತದೆ. ಇದರ ಬಳಕೆ, ಬೇಡಿಕೆ ಏರಿಕೆ ಆಗಿರುವ ಕಾರಣ ಏಪ್ರಿಲ್ 6ರಿಂದ ದರ ಏರಿಕೆ ಆಗುತ್ತಾ ಬಂದಿದೆ. ಇದೀಗ ಕಳೆದ ಹತ್ತು ದಿನಗಳಿಂದ ಕ್ವಿಂಟಾಲ್ ಉಂಡೆ ಕೊಬ್ಬರಿ ಬೆಲೆ 38,000 ರೂಪಾಯಿ ನಿರಂತರವಾಗಿ ಮುಂದುವರಿದಿರುವ ಮೂಲಕ ಇತಿಹಾಸ ನಿರ್ಮಿಸಿದೆ. ದಾಖಲೆ ಮಟ್ಟದ ಬೆಲೆ ಕಂಡು ತುಮಕೂರು ರೈತರು ಖಷಿಯಲ್ಲಿದ್ದಾರೆ. ಉತ್ಪನ್ನ ಹೆಚ್ಚಾಗುವವರಿಗೆ ಇದೇ ಬೆಲೆ ಮುಂದುವರಿಯು ಲಕ್ಷಣವು ಕಾಣುತ್ತಿದೆ.

ಇತರ ಭಾಗಗಳಲ್ಲಿ ದರ ಸಾಮಾನ್ಯ

ಕೇವಲ ತಿಪಟೂರು ಮಾತ್ರವಲ್ಲದೇ ಶಿರಾ, ಹಾಸನ, ಅರಸಿಕೆರೆ, ಕಡೂರು, ಗುಬ್ಬಿ, ದಾವಣಗೆರೆ ಹಾಗೂ ಇನ್ನಿತರ ಭಾಗಗಳಲ್ಲಿ ಕೊಬ್ಬರಿ ಮಾರಾಟವಾಗುತ್ತದೆ. ಅದರೆ ತಿಪಟೂರಿನಲ್ಲಿ ಇದ್ದಷ್ಟು ಬೆಲೆ ಬೇರೆಡೆ ಇಲ್ಲ ಎನ್ನುವುದೇ ಈ ಪ್ರದೇಶದ ವೈಶಿಷ್ಟ್ಯ ಎಂದು ವರ್ತಕರು ಹೇಳುತ್ತಾರೆ. ತಿಪಟೂರು ಸೇರಿ ಬೇರೆ ಮಾರುಕಟ್ಟೆಗಳಲ್ಲಿ ಇಂದಿನ (ಶನಿವಾರ ಏಪ್ರಿಲ್ 25) ಕೊಬ್ಬರಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ತಿಪಟೂರು ಸೇರಿ ವಿವಿಧ ಮಾರುಕಟ್ಟೆಗಳ ಕೊಬ್ಬರಿ ಬೆಲೆ, ಪಟ್ಟಿ

* ತಿಪಟೂರು ಎಪಿಎಂಸಿ ಮಾರುಕಟ್ಟೆ: ಗರಿಷ್ಠ ದರ 38,000 ರೂ ಮತ್ತು ಕನಿಷ್ಠ 32,500 ರೂಪಾಯಿ

* ತುಮಕೂರು ಮಾರುಕಟ್ಟೆ: ಗರಿಷ್ಠ 32,600 ರೂ ಮತ್ತು ಕನಿಷ್ಠ 28,100 ರೂಪಾಯಿ

* ತರಿಕೆರೆ ಮಾರುಕಟ್ಟೆ: ಗರಿಷ್ಠ ದರ 17,500 ರೂ ಮತ್ತು ಕನಿಷ್ಠ 17,500 ರೂಪಾಯಿ

* ಅರಸಿಕೆರೆ ಮಾರುಕಟ್ಟೆ: ಗರಿಷ್ಠ ಬೆಲೆ 13,225 ರೂ ಮತ್ತು ಕನಿಷ್ಠ 10,250 ರೂಪಾಯಿ

* ಗುಬ್ಬಿ ಮಾರುಕಟ್ಟೆ: ಗರಿಷ್ಠ ದರ 15,000 ರೂ ಮತ್ತು ಕನಿಷ್ಠ ಬೆಲೆ 13,000 ರೂಪಾಯಿ

* ಕಡೂರು ಮಾರುಕಟ್ಟೆ: ಗರಿಷ್ಠ 20,000 ರೂ ಹಾಗೂ ಕನಿಷ್ಠ ಬೆಲೆ 16,000 ರೂಪಾಯಿ ಇದೆ.

ಕೊಬ್ಬರಿ ಅಂದರೆ ತಿಪಟೂರು, ಬೆಲೆಯಲ್ಲಿ ದಾಖಲೆ

ಈ ಮಾರುಕಟ್ಟೆಗಳಲ್ಲಿ ತಿಪಟೂರಿನಲ್ಲಿ ಇದ್ದಷ್ಟು ಬೆಲೆ ಬೇರೆ ಕಡೆಗಳಲ್ಲಿ ಇಲ್ಲ. ಅಲ್ಲದೇ ಕೊಬ್ಬರಿಗೆ/ತೆಂಗಿಗೆ ತಿಪಟೂರು ಹೆಸರುವಾಸಿ. ಹೀಗಾಗಿ ಈ ಪ್ರದೇಶ ಸದರಿ ಬೆಳೆ, ಉತ್ಪನ್ನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕೊಬ್ಬರಿ ಎಂದಾಕ್ಷಣ ತಿಪಟೂರು ನೆನಪಿಗೆ ಬರುತ್ತದೆ. ಅಷ್ಟರ ಮಟ್ಟಿಗೆ ಪ್ರಸಿದ್ಧಿಪಡೆದಿರುವ ಇಲ್ಲಿನ ಎಪಿಎಂಸಿಯಲ್ಲಿ 38,000 ರೂಪಾಯಿ ಉಂಡೆ ಕೊಬ್ಬರಿ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ. ಇದು ರೈತರ ಆರ್ಥಿಕ ಸುಧಾರಣೆಗೆ ಕಾರಣವೂ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+