ಎನ್‌ಡಿಪಿಎಸ್‌ ಕೋರ್ಟ್‌ಗೆ 3 ಅರ್ಜಿ ಸಲ್ಲಿಸಿದ ನಟಿ ರಾಗಿಣಿ

ಬೆಂಗಳೂರು, ಅಕ್ಟೋಬರ್ 12 : ನ್ಯಾಯಾಂಗ ಬಂಧನಲ್ಲಿರುವ ನಟಿ ರಾಗಿಣಿ ದ್ವಿವೇದಿ ಎನ್‌ಡಿಪಿಎಸ್ ವಿಶೇಷ ಕೋರ್ಟ್‌ಗೆ ಮೂರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆಪ್ಟೆಂಬರ್ 28ರಂದು ವಜಾಗೊಳಿಸಿತ್ತು.

ಸೋಮವಾರ ನಟಿ ರಾಗಿಣಿ ದ್ವಿವೇದಿ ಪರ ವಕೀಲರು ಎನ್‌ಡಿಪಿಎಸ್‌ ಕೋರ್ಟ್‌ಗೆ ಮೂರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಬೆನ್ನು ನೋವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂಬುದು ಮೊದಲ ಮನವಿಯಾಗಿದೆ.

ರಾಗಿಣಿ ದ್ವಿವೇದಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಂದರ್ಭದಲ್ಲಿ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ನ್ಯಾಯಾಲಯ ಸೂಚನೆ ನೀಡಿತ್ತು. ಆದರೆ, ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಮನವಿ ಮಾಡಲಾಗಿದೆ.

Treatment In Private Hospital Ragini Dwivedi Moves NDPS Court

ಕುಟುಂಬದವರು, ವಕೀಲರ ಭೇಟಿಗೆ ಅವಕಾಶ ನೀಡುವಂತೆ ಮತ್ತೊಂದು ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ. ರಾಗಿಣಿ ದ್ವಿವೇದಿ ಸೆಪ್ಟೆಂಬರ್ 14ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಯಿ, ತಮ್ಮನ ಐಪಾಡ್, ಪೆನ್ ಡ್ರೈವ್ ವಾಪಸ್ ನೀಡುವಂತೆ 3ನೇ ಅರ್ಜಿಯಲ್ಲಿ ರಾಗಿಣಿ ದ್ವಿವೇದಿ ಪರ ವಕೀಲರು ಮನವಿ ಮಾಡಿದ್ದಾರೆ. ಸಿಸಿಬಿ ಪೊಲೀಸರು ರಾಗಿಣಿ ನಿವಾಸದ ಮೇಲೆ ದಾಳಿ ಮಾಡಿದಾಗ ಐಪಾಡ್, ಪೆನ್ ಡ್ರೈವ್ ವಶಕ್ಕೆ ಪಡೆದುಕೊಂಡಿದ್ದರು.

ಸೆಪ್ಟೆಂಬರ್ 14ರಂದು ಎನ್‌ಡಿಪಿಎಸ್ ಕೋರ್ಟ್ ನಟಿ ರಾಗಿಣಿ ದ್ವಿವೇದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ಬಳಿಕ ಇಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ 5 ದಿನಗಳ ಕಾಲ ಜೈಲಿನಲ್ಲಿಯೇ ಅವರ ವಿಚಾರಣೆ ನಡೆಸಿತ್ತು.

ಸೆಪ್ಟೆಂಬರ್ 28ರಂದು ರಾಗಿಣಿ ಜಾಮೀನು ಅರ್ಜಿಯನ್ನು ಎನ್‌ಡಿಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಈಗ ಜಾಮೀನು ಪಡೆಯಲು ರಾಗಿಣಿ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಬೇಕಿದೆ.

ಎನ್‌ಡಿಪಿಎಸ್‌ ಕೋರ್ಟ್‌ನಲ್ಲಿ ರಾಗಿಣಿ ಪರ ವಕೀಲರು ಸೆ.14ರಂದು ರಾಗಿಣಿಯನ್ನು ಆಸ್ಪತ್ರೆಗೆ ದಾಖಲು ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಆಗ ಕೋರ್ಟ್ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೂಚನೆ ನೀಡಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಾಗಲು ನ್ಯಾಯಾಲಯ ಅನುಮತಿ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+