ಸಿದ್ದರಾಮಯ್ಯ, ಸಚಿವರ ಪ್ರಯಾಣ ಭತ್ಯೆ 11 ಕೋಟಿ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 30 : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟದ ಇತರ ಸಚಿವರ ಪ್ರಯಾಣ ಭತ್ಯೆ ಮಾಹಿತಿ ಬಹಿರಂಗವಾಗಿದೆ. 2013 ರಿಂದ 2016ರ ತನಕ 11.12 ಕೋಟಿ ಪ್ರಯಾಣ ಭತ್ಯೆಯನ್ನು ಮುಖ್ಯಮಂತ್ರಿಗಳು ಮತ್ತು ಇತರ 29 ಸಚಿವರು ಪಡೆದಿದ್ದಾರೆ.

ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಸಲ್ಲಿಸಿದ್ದ ಅರ್ಜಿಯ ಮೂಲಕ ಈ ವಿವರ ಬಹಿರಂಗಗೊಂಡಿದೆ. ಕೆಲವು ಸಚಿವರ ಪ್ರಯಾಣ ಭತ್ಯೆ ಕುರಿತು ತನಿಖೆ ನಡೆಯಬೇಕು ಎಂದು ಭೀಮಪ್ಪ ಅವರು ಒತ್ತಾಯಿಸಿದ್ದಾರೆ.[ಶಾಸಕರ ಸಂಬಳ, ಭತ್ಯೆ ವಿವರಗಳು]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 40.3 ಲಕ್ಷ ಭತ್ಯೆ ಪಡೆದಿದ್ದಾರೆ. ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಮೂರು ವರ್ಷಗಳಲ್ಲಿ 75.89 ಲಕ್ಷ ಭತ್ಯೆ ಪಡೆಯುವ ಮೂಲಕ ಸಂಪುಟದ ಸಚಿವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಕ್ರೀಡಾ ಸಚಿವ ಅಭಯ್ ಚಂದ್ರ ಜೈನ್ ಅವರು ಕಳೆದ ಮೂರು ವರ್ಷಗಳಲ್ಲಿ 211 ಬಾರಿ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ ಎಂಬ ಮಾಹಿತಿಯೂ ಬಹಿರಂಗವಾಗಿದೆ. ಸಚಿವರ ಪ್ರಯಾಣ ಭತ್ಯೆಯ ವಿವರವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಗಮನಕ್ಕೆ ತಂದು, ತನಿಖೆ ನಡೆಸಬೇಕು ಎಂದು ಭೀಮಪ್ಪ ಗಡಾದ್ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳ ವೆಚ್ಚ 40.3 ಲಕ್ಷ

ಮುಖ್ಯಮಂತ್ರಿಗಳ ವೆಚ್ಚ 40.3 ಲಕ್ಷ

ಮುಖ್ಯಮಂತ್ರಿ ಸಿದ್ದರಾಮಯ್ಯ (ವರುಣಾ ಕ್ಷೇತ್ರದ ಶಾಸಕ) ಅವರು 2013 ರಿಂದ 2016ರ ತನಕ 40.3 ಲಕ್ಷ ಪ್ರಯಾಣ ಭತ್ಯೆಯನ್ನು ಪಡೆದಿದ್ದಾರೆ.

ಸಚಿವರ ಪಟ್ಟಿಯಲ್ಲಿ ಸೊರಕೆ ಮೊದಲ ಸ್ತಾನ

ಸಚಿವರ ಪಟ್ಟಿಯಲ್ಲಿ ಸೊರಕೆ ಮೊದಲ ಸ್ತಾನ

ಪ್ರಯಾಣ ಭತ್ಯೆ ಪಡೆದ ಸಚಿವರ ಪಟ್ಟಿಯಲ್ಲಿ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ (ಕಾಪು ಕ್ಷೇತ್ರದ ಶಾಸಕ ) ಅವರು ಮೊದಲ ಸ್ಥಾನ ಪಡೆದಿದ್ದಾರೆ. ಸಚಿವರು ಮೂರು ವರ್ಷಗಳಲ್ಲಿ 75.89 ಲಕ್ಷ ಭತ್ಯೆ ಪಡೆದಿದ್ದಾರೆ.

ಆರೋಗ್ಯ ಸಚಿವರು ಪಡೆದಿದ್ದು 70 ಲಕ್ಷ

ಆರೋಗ್ಯ ಸಚಿವರು ಪಡೆದಿದ್ದು 70 ಲಕ್ಷ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ (ಮಂಗಳೂರು ಕ್ಷೇತ್ರದ ಶಾಸಕ) ಅವರು ಮೂರು ವರ್ಷಗಳಲ್ಲಿ 70.23 ಲಕ್ಷ ಭತ್ಯೆ ಪಡೆದಿದ್ದಾರೆ.

ಸಾರಿಗೆ ಸಚಿವರು ಪಡೆದಿದ್ದು 8 ಲಕ್ಷ

ಸಾರಿಗೆ ಸಚಿವರು ಪಡೆದಿದ್ದು 8 ಲಕ್ಷ

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (ಬೆಂಗಳೂರಿನ ಬಿಟಿಎಂ ಕ್ಷೇತ್ರದ ಶಾಸಕ) ಅವರು ಮೂರು ವರ್ಷಗಳಲ್ಲಿ 8.71 ಲಕ್ಷ ಪ್ರಯಾಣ ಭತ್ಯೆಯನ್ನು ಪಡೆದಿದ್ದಾರೆ.

ಅರಣ್ಯ ಸಚಿವರು ಪಡೆದಿದ್ದು 67 ಲಕ್ಷ

ಅರಣ್ಯ ಸಚಿವರು ಪಡೆದಿದ್ದು 67 ಲಕ್ಷ

ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ (ಬಂಟ್ವಾಳ ಕ್ಷೇತ್ರದ ಶಾಸಕ) ಅವರು ಮೂರು ವರ್ಷಗಳಲ್ಲಿ 67.99 ಲಕ್ಷ ಭತ್ಯೆ ಪಡೆದಿದ್ದಾರೆ.

ಸಹಕಾರ ಸಚಿವರ ಭತ್ಯೆ 7 ಲಕ್ಷ

ಸಹಕಾರ ಸಚಿವರ ಭತ್ಯೆ 7 ಲಕ್ಷ

ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ (ಗುಂಡ್ಲುಪೇಟೆ ಕ್ಷೇತ್ರದ ಶಾಸಕ ) ಅವರು 7.98 ಲಕ್ಷ ಪ್ರಯಾಣ ಭತ್ಯೆ ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An RTI reply has revealed that between 2013 and 2016, the Chief Minister of Karnataka and 29 ministers had claimed Rs 11.12 crore as travel allowance or expenses.
Please Wait while comments are loading...