IAS: ಐಎಎಸ್ ವರ್ಗಾವಣೆ, ರಾಮನಗರಕ್ಕೆ ಹೊಸ ಡಿಸಿ, ಬಿಎಂಟಿಸಿಗೆ ಹೊಸ ನಿರ್ದೇಶಕಿ
ಬೆಂಗಳೂರು, ಜುಲೈ 07: ಕರ್ನಾಟಕ ಸರ್ಕಾರ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಆಡಳಿತ ಯಂತ್ರದಲ್ಲಿ ಭಾರೀ ಬದಲಾವಣೆ ಮಾಡುತ್ತಿದೆ. ಐಎಎಸ್, ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದು, ಹಲವು ಜಿಲ್ಲೆಗಳ ಜಿಲ್ಲಾಧಿಕಾರಿ, ಎಸ್‌ಪಿ ಬದಲಾವಣೆಯಾಗಿದ್ದಾರೆ.
ಶನಿವಾರ ಸರ್ಕಾರ ಮತ್ತೊಂದು ಸುತ್ತಿನಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಒಟ್ಟು 8 ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿದ್ದು, ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ. ಒಂದೇ ವಾರದಲ್ಲಿ 3ನೇ ಬಾರಿಗೆ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆಯನ್ನು ಮಾಡಿದೆ.

ರಾಮನಗರ ಜಿಲ್ಲಾಧಿಕಾರಿಯಾಗಿದ್ದ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರನ್ನು ವರ್ಗಾವಣೆ ಮಾಡಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಯಶವಂತ್ ವಿ. ಗುರುಕರ್ ನೇಮಕಗೊಂಡಿದ್ದಾರೆ. ಎರಡು ವರ್ಷ ಎರಡು ತಿಂಗಳ ಕಾಲ ಜಿಲ್ಲಾಧಿಕಾರಿಯಾಗಿದ್ದ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರನ್ನು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರಾಗಿ ನೇಮಕ ಮಾಡಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ
* ಯಶವಂತ್ ವಿ. ಗುರುಕರ್ (ಕೆಎನ್: 2010). ಕಾರ್ಯಕಾರಿ ನಿರ್ದೇಶಕರು, ಸೆಂಟರ್ ಫಾರ್ ಸ್ಮಾರ್ಟ್ ಗೌರ್ನನೆನ್ಸ್, ಬೆಂಗಳೂರು. ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದ ತನಕ ರಾಮನಗರ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ರಾಮನಗರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ವರ್ಗಾವಣೆ.
* ಡಾ. ಹರೀಶ್ ಕುಮಾರ್ ಕೆ. (ಕೆಎನ್: 2012). ವಿಶೇಷ ಆಯುಕ್ತರು ಬಿಬಿಎಂಪಿ (ಆಡಳಿತ). ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ವಿಶೇಷ ಆಯುಕ್ತರು (ಘನತ್ಯಾಜ್ಯ ನಿರ್ವಹಣೆ) ಬಿಬಿಎಂಪಿ ಬೆಂಗಳೂರು ನೇಮಕ. ಜೊತೆಗೆ ಸಿಇಒ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ಲಿಮಿಟೆಡ್ ಆಗಿ ಹೆಚ್ಚುವರಿ ಹೊಣೆ.
* ಅರ್ಚನಾ ಎಂ. ಎಸ್. (ಕೆಎನ್: 2012). ಸ್ಥಳ ನಿರೀಕ್ಷೆಯಲ್ಲಿದ್ದರು. ನಿರ್ದೇಶಕಿ (ಸುರಕ್ಷತೆ ಮತ್ತು ಕಣ್ಗಾವಲು) ಬಿಎಂಟಿಸಿ, ಬೆಂಗಳೂರು ಹುದ್ದೆಗೆ ನೇಮಕ.
* ಡಾ. ಅವಿನಾಶ್ ಮೆನನ್ ರಾಜೇಂದ್ರನ್. (ಕೆಎನ್: 2013). ರಾಮನಗರ ಜಿಲ್ಲಾಧಿಕಾರಿ. ತಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಆಯುಕ್ತರು (ಆಡಳಿತ) ಹುದ್ದೆಗೆ ನೇಮಕ. ಡಾ. ಹರೀಶ್ ಕುಮಾರ್ ಕೆ. ವರ್ಗಾವಣೆ.
* ಮೊಹಮ್ಮದ್ ಇಕ್ರಾಮುಲ್ಲಾ ಶರೀಫ್ (ಕೆಎನ್: 2016). ಉಪ ಕಾರ್ಯದರ್ಶಿ, ಹಣಕಾಸು ಇಲಾಖೆ, ಬೆಂಗಳೂರು ವರ್ಗಾವಣೆ. ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಸರ್ಕಾರದ ಉಪ ಕಾರ್ಯದರ್ಶಿ (ಬಜೆಟ್ ಮತ್ತು ಸಂಪನ್ಮೂಲ), ಹಣಕಾಸು ಇಲಾಖೆ, ಬೆಂಗಳೂರು ಹುದ್ದೆಗೆ ನೇಮಕ.
* ವರ್ನಿಗ್ ನೇಗಿ (ಕೆಎನ್: 2019). ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೊಡಗು ವರ್ಗಾವಣೆ. ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಹುದ್ದೆಗೆ ವರ್ಗಾವಣೆ. ಈ ಹುದ್ದೆಯಲ್ಲಿದ್ದ ಮೋನಾ ರಾವುಟ್ ವರ್ಗಾವಣೆ.
* ಮೋನಾ ರಾವುಟ್ (ಕೆಎನ್: 2019). ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕರು. ತಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಚಾಮರಾಜನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆ. ಈ ಹುದ್ದೆಯಲ್ಲಿದ್ದ ಆನಂದ್ ಪ್ರಕಾಶ್ ಮೀನಾ ವರ್ಗಾವಣೆ.
* ಆನಂದ್ ಪ್ರಕಾಶ್ ಮೀನಾ (ಕೆಎನ್: 2019). ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚಾಮರಾಜನಗರ. ತಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ.












Click it and Unblock the Notifications