ಸಾಹಿತ್ಯ ಸಮ್ಮೇಳನ : ವಾಹನ ಸಂಚಾರ, ಪಾರ್ಕಿಂಗ್‌ಗೆ ಪರ‌್ಯಾಯ ವ್ಯವಸ್ಥೆ

Posted By:
Subscribe to Oneindia Kannada

ರಾಯಚೂರು, ಡಿಸೆಂಬರ್, 2: ಡಿಸೆಂಬರ್ 2, 3 ಮತ್ತು 4 ರಂದು ನಗರದಲ್ಲಿ ನಡೆಯಲಿರುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ವಾಹನ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡದ ತೇರು ಮೆರವಣಿಗೆ ನಗರದ ಕರ್ನಾಟಕ ಸಂಘದಿಂದ ಆರಂಭವಾಗಿ ನೇತಾಜಿ ವೃತ್ತ, ಪಟೇಲ್ ವೃತ್ತ, ಚಂದ್ರಮೌಳೇಶ್ವರ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಕೃಷಿ ವಿಶ್ವ ವಿದ್ಯಾಲಯದ ಮುಖ್ಯ ವೇದಿಕೆಗೆ ತಲುಪಲಿದೆ.[ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಿದ ತನ್ವೀರ್ ಸೇಠ್]

Traffic curbes and parking arrangements for sahitya sammelana

ಆದ್ದರಿಂದ ಆ ಮಾರ್ಗ ದಲ್ಲಿ ಬೆಳಗ್ಗೆ 8 ಗಂಟೆ ಯಿಂದ ಮಧ್ಯಾ ಹ್ನ 2 ಗಂಟೆಯವರೆಗೆ ಸಂಪೂರ್ಣ ವಾಹನ ಸಂಚಾರ ಮತ್ತು ಆ ಮಾರ್ಗದಲ್ಲಿ ವಾಹನಗಳ ಪಾರ್ಕಿಂಗ್ ಕೂಡ ನಿಷೇಧಿಸಲಾಗಿದೆ.[82ನೇ 'ರಾಯಚೂರು' ಕನ್ನಡ ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ]

ಡಿ.2 ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಿಂಧನೂರು, ಲಿಂಗಸುಗೂರು, ದೇವದುರ್ಗ, ಹೈದ್ರಾಬಾದ್ ಮತ್ತು ಗದ್ವಾಲ್ ಕಡೆಯಿಂದ ಬರುವ ಮತ್ತು ಹೋಗುವ ಬಸ್‌ಗಳಿಗೆ ತಾತ್ಕಾಲಿಕ ವಾಗಿ ಎ.ಪಿ.ಎಂ.ಸಿ ಗಂಜ್‌ನಲ್ಲಿ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ ಯರಗೇರಾ, ಮಂತ್ರಾಲಯಂ, ಆಶಾಪೂರ ಕಡೆಗಳಿಂದ ಬರುವ ಮತ್ತು ಹೋಗುವ ಬಸ್‌ಗಳು ಸಾಮಾನ್ಯ ಬಸ್ ನಿಲ್ದಾಣದಲ್ಲಿ ಬಂದು ಹೋಗುವ ಅವಕಾಶ ಕಲ್ಪಿಸಲಾಗಿದೆ.

ಸಿಂಧನೂರು, ದೇವದುರ್ಗ, ಲಿಂಗಸುಗುರು, ಹೈದ್ರಾಬಾದ್ ಮತ್ತು ಗದ್ವಾಲ್ ಕಡೆಯಿಂದ ಮಂತ್ರಾಲಯಂ ಕಡೆಗೆ ಹೋಗುವ ವಾಹನಗಳು ಕುರ್ಡಿ ಕ್ರಾಸ್ ಮೂಲಕ ಹೋಗಲು ಅವಕಾಶ ಕಲ್ಪಿಸಲಾಗಿದೆ.

ಸಾಹಿತ್ಯ ಸಮ್ಮೇಳನಕ್ಕೆ ಬರುವ ವರಿಗೆ ವಾಹನಗಳ ಪಾರ್ಕಿಂಗ್ ಸ್ಥಳದ ಮಾಹಿತಿ:

ರಾಯಚೂರು ಕಡೆಯಿಂದ ಬರುವ ಸಿಟಿ ಬಸ್‌ಗಳು ಇತರೆ ಎಲ್ಲಾ ವಾಹನಗಳಿಗೆ ಮತ್ತು ವಿಐಪಿ ವಾಹನಗಳಿಗೆ ಕೃಷಿ ವಿಶ್ವ ವಿದ್ಯಾಲಯ ಆಡಳಿತ ಭವನದ ಮುಂದಿನ ಪಾರ್ಕಿಂಗ್ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮಾನ್ವಿ, ಲಿಂಗಸುಗೂರು, ದೇವದುರ್ಗ ಮಾರ್ಗದ ಕಡೆ ಯಿಂದ ಹಾಗೂ ಇತರೆ ಗ್ರಾಮಗಳಿಂದ ಬರುವ ವಾಹನಗಳು ಅಸ್ಕಿಹಾಳ ಗ್ರಾಮದ ಹೊರಗಡೆ ಅಮರಖೇಡ್ ಲೇಔಟ್‌ನಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಉಚಿತ ದರ ಹಾಗೂ ವಿಶೇಷ ಬಸ್‌ಗಳ ಪಾರ್ಕಿಂಗ್ ಕೃಷಿ ಬೀಜ ನಿಗಮ ಘಟಕ ಎದುರುಗಡೆ ಪಾರ್ಕಿಂಗ್ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸರಕಾರಿ ವಾಹನಗಳಿಗೆ ಮುಖ್ಯ ದ್ವಾರದ ಎದುರಿಗೆ ರಸ್ತೆ ಬಲಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
District adminstarion police department makes arrangements for Traffic curbs, parking for sahitya sammelana which is held in Raichur on December 2,3 and 4.
Please Wait while comments are loading...