ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in: ತೂಗು ಸೇತುವೆ ಮೇಲೆ ಕಾರು ಚಾಲನೆ; ಆರೋಪಿ ಬಂಧನ

|
Google Oneindia Kannada News

ಉತ್ತರ ಕನ್ನಡ, ನ. 02: ಗುಜರಾತ್‌ನ ಮೊರ್ಬಿ ತೂಗು ಸೇತುವೆ ಕುಸಿದು 130 ಕ್ಕೂ ಹೆಚ್ಚು ಜನರು ದುರಂತ ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಿರಿದಾದ ತೂಗು ಸೇತುವೆಯ ಮೇಲೆ ಕಾರು ಚಲಾಯಿಸಿದ್ದ ವಿಡಿಯೋ ವೈರಲ್ ಆಗಿತ್ತು.

ಕಿರಿದಾದ ಶಿವಪುರದ ತೂಗು ಸೇತುವೆಯ ಮೇಲೆ ಕಾರು ಚಲಾಯಿಸಿದ್ದ ವಿಡಿಯೋ ವೈರಲ್ ಆಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹ ಕೇಳಿಬಂದಿತ್ತು. ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವೀಕ್ಷಿಸಿ: ಕರ್ನಾಟಕದಲ್ಲಿ ಸೇತುವೆಯ ಮೇಲೆ ಕಾರು ಚಲಾಯಿಸಿದ ಪ್ರವಾಸಿಗರುವೀಕ್ಷಿಸಿ: ಕರ್ನಾಟಕದಲ್ಲಿ ಸೇತುವೆಯ ಮೇಲೆ ಕಾರು ಚಲಾಯಿಸಿದ ಪ್ರವಾಸಿಗರು

ಆರೋಪಿಯನ್ನು ಉಳವಿ ಗ್ರಾಮದ ಮುಜಾಹಿದ್ ಆಜಾದ್ ಸೈಯದ್ (26) ಎಂದು ಗುರುತಿಸಲಾಗಿದೆ.

ಶಿವಪುರ ತೂಗು ಸೇತುವೆ ಎಂದು ಕರೆಯಲ್ಪಡುವ ಈ ಸೇತುವೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಸೇತುವೆ ಮೇಲೆ ಕಾರು ಚಲಾಯಿಸಿದ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿತ್ತು.

Tourists Drive Car on Bridge In Uttara Kannada; One Person Arrested

ಬಂಧನದ ಬಗ್ಗೆ ಮಾಹಿತಿ ನೀಡಿರುವ ಉತ್ತರ ಕನ್ನಡ ಎಸ್ಪಿ ಸುಮನ್ ಡಿ ಪೆನ್ನೇಕರ್, "ನಾವು ವಾಹನವನ್ನು ವಶಪಡಿಸಿಕೊಂಡಿದ್ದೇವೆ. ಎಫ್‌ಐಆರ್ ದಾಖಲಿಸಿದ್ದೇವೆ. ಬಂಧಿತ ವ್ಯಕ್ತಿ ಜೋಯಿಡಾ ಪೊಲೀಸ್ ಠಾಣಾ ವ್ಯಾಪ್ತಿಯ ಉಳವಿ ಗ್ರಾಮದವನು. ವಾಹನವು ಮಹಾರಾಷ್ಟ್ರ ನೋಂದಣಿಯನ್ನು ಹೊಂದಿದೆ" ಎಂದು ತಿಳಿಸಿದ್ದಾರೆ.

ಮಾರುತಿ ಸುಜುಕಿ 800 ಕಾರಿನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಪಾದಚಾರಿಗಳಿಗೆ ಮೀಸಲಾದ ಕಿರಿದಾದ ಸೇತುವೆಯ ಮೇಲೆ ಕಾರಿನಲ್ಲಿ ಹೋಗಲು ಯತ್ನಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಸೇತುವೆ ಮೇಲಿದ್ದ ಇಬ್ಬರು ವ್ಯಕ್ತಿಗಳು ಕಾರನ್ನು ಹಿಂತೆಗೆದುಕೊಳ್ಳುವಂತೆ ಚಾಲಕನಿಗೆ ಹೇಳುತ್ತಾರೆ.

ಶಿವಪುರ ತೂಗು ಸೇತುವೆ ಎಂದು ಕರೆಯಲ್ಪಡುವ ಉತ್ತರ ಕನ್ನಡದ ಯಲ್ಲಾಪುರ ಪಟ್ಟಣದ ಜನಪ್ರಿಯ ಪ್ರವಾಸಿ ತಾಣವನ್ನು 2016 ರಲ್ಲಿ ಕಾಳಿ ನದಿಯ ಮೇಲೆ ನಿರ್ಮಿಸಲಾಗಿದೆ. ಈ ಸೇತುವೆ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಈ ಸೇತುವೆಯ ಮೂಲಕ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳಿಗೆ ಮಾತ್ರ ಹೋಗಲು ಅವಕಾಶವಿದೆ.

ಗುಜರಾತ್‌ನ ಮೊರ್ಬಿ ಸೇತುವೆ ಕುಸಿದು ಮಕ್ಕಳು, ಮಹಿಳೆಯರು ಸೇರಿ 130 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಘಟನೆಯ ಬೆನ್ನಲ್ಲೇ ರಾಜ್ಯದ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

English summary
Uttara Kannada: One person arrested over he drive car on shivapura bridge, video went viral after gujarat's morbi bridge tragedy. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X