ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು: ಮತದಾರರಿಗೆ ಪ್ರವಾಸ ಆಮಿಷ: ಎರಡು ಬಸ್ ವಶ

By Nayana
|
Google Oneindia Kannada News

ಚಿಕ್ಕಮಗಳೂರು, ಮೇ 08: ಮತದಾದರನ್ನು ಸೆಳೆಯಲು ವಿವಿಧ ಪಕ್ಷಗಳು ಹರಸಾಹಸ ಪಡುತ್ತಿವೆ. ಅದರಲ್ಲಿಯೂ ವಿವಿಧ ಆಮಿಶಗಳನ್ನು ಒಡ್ಡಿ ಮತಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಈ ಪ್ರವಾಸವೂ ಕೂಡ ಒಂದು.

ಚಿಕ್ಕಮಗಳೂರಿನ ಸಖರಾಯಪಟ್ಟಣದ ಕೇತಮಾರನಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ವ್ಯವಸ್ಥೆ ಮಾಡಿದ್ದ ಎರಡು ಬಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಡ್ಯ: ರೈತಸಂಘದ ಕಾರ್ಯಕರ್ತನ ಮನೆಯಿಂದ ಅಕ್ರಮ ಮದ್ಯ ವಶಮಂಡ್ಯ: ರೈತಸಂಘದ ಕಾರ್ಯಕರ್ತನ ಮನೆಯಿಂದ ಅಕ್ರಮ ಮದ್ಯ ವಶ

ಚುನಾಣಾಧಿಕಾರಿಗಳಿಂದ ಎರೆಡು ಬಸ್ಸ್ ಗಳ ವಶ ಪಡಿಸಿಕೊಂಡಿದ್ದಾರೆ. ಬಿಜೆಪಿಗೆ ಮತ ನೀಡುವಂತೆ ಆಣೆಮಾಡಲು ಕರೆದ್ಯೋಯಲಾಗಿತ್ತು. ಎರೆಡು ಬಸ್ಸ್ ಗಳಲ್ಲಿ ಧರ್ಮ ಸ್ಥಳಕ್ಕೆ ಪ್ರವಾಸಕ್ಕೆ ಹೊರಟಿದ್ದವು. ಸಿ.ಟಿ.ರವಿ ಪರ ಮತ ಹಾಕುವಂತೆ ಧರ್ಮಸ್ಥಳದಲ್ಲಿ ಆಣೆಗೆ ಕಾರ್ಯಕರ್ತರು ಮುಂದಾಗಿದ್ದರು ಎಂದು ತಿಳಿದುಬಂದಿದೆ.

Tour Bhagya to voters: Election officers seized two bus

ಬೆಳ್ಳಿಗಿನ ಜಾವ ಮೂರು ಬಸ್ಸ್ ಗಳಲ್ಲಿ ಮತದಾರರು ಹೊರಟಿದ್ದಾರೆ. ಚುನಾವಣೆ ಗೆಲ್ಲಲು ಕೆಳಮಟ್ಟಕ್ಕೆ ಇಳಿದ ಸಿಟಿ ರವಿ ಬೆಂಬಲಿಗರೆಂದು ಸ್ಥಳೀಯರ ಆರೋಪ ಮಾಡಿದ್ದಾರೆ. ಸಿಟಿ ರವಿ ಬಾವಮೈದಾ ಸುದರ್ಶನ್ ಹಾಗೂ ಬಿಜೆಪಿ ಕಾರ್ಯಕರ್ತರು ಮಾಡಿರು ಶಂಕೆ ವ್ಯಕ್ತವಾಗಿದೆ.

ಈ ಎರೆಡು ಗ್ರಾಮದ ವ್ಯಾಪ್ತಿಯಲ್ಲಿ ವೀರಶೈವ ಹಾಗೂ ಗೊಲ್ಲ ಸಮೂದಾಯದ 650ಕ್ಕೂ ಮತದಾರರಿರುವ ಗ್ರಾಮ ಇದಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಮತದಾರ ಒಲವು ತೋರಿದ್ದರು. ಇದನ್ನು ತಪ್ಪಿಸಲು ಬಿಜೆಪಿ ಹಣ ನೀಡಿ ಧರ್ಮದಲ್ಲಿ ಆಣೆ ಪ್ರಮಾಣಕ್ಕೆ ಅಣಿಯಾಗಿದ್ದರು.

Tour Bhagya to voters: Election officers seized two bus

ಸೋಮವಾರ ರಾತ್ರಿಯೇ ಚುನಾವಣ ಆಯೋಗಕ್ಕೆ ದೂರು ಬಂದಿತ್ತು. ಚುನಾವಣಾಧಿಕಾರಿ ತುಷಾರಮಣಿಯಿಂದ ಕೆಎಸ್‌ಆರ್‌ಟಿಸಿಬಸ್ಸ್ ವಶಪಡಿಸಿಕೊಂಡಿದ್ದಾರೆ.ಸುಮಾರು ಐವತ್ತಕ್ಕೂ ಹೆಚ್ಚು ಮತದಾರರೂ ಪ್ರಯಾಣ ಬೆಳೆಸಿದ್ದರು.

English summary
It was alleged that bjp candidates in Chikmagalur C.T. Ravi had arranged a trip to voters to oblige them at Ketamaranahalli and election commission officers have seized two bus at the village and booked a case against organizers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X