ಉಪ ಸಮರದಲ್ಲಿ ಬಿಜೆಪಿ ಸೋಲಿಗೆ ಇಲ್ಲಿದೆ ನಾನಾ ಕಾರಣಗಳು

ಇದೇ ಫಲಿತಾಂಶ 2018ರ ಚುನಾವಣೆಯಲ್ಲಿ ಮರುಕಳಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಉಪ ಚುನಾವಣೆ ಫಲಿತಾಂಶದ ನಂತರ ಹೇಳಿದ್ದಾರೆ. ಈ ಎರಡು ಕ್ಷೇತ್ರಗಳಲ್ಲಿ ಕಮಲವು ಅರಳದೆ ಕೆಸರಿನಲ್ಲಿ ಹೂತು ಹೋಗಿದ್ದೇಕೆ?

ಬೆಂಗಳೂರು, ಏಪ್ರಿಲ್ 13: ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳು ಗೆಲ್ಲುವುದು ವಾಡಿಕೆಯಾಗಿದೆ. ಈ ಫಲಿತಾಂಶದಿಂದ ಎದುಗುಂದುವುದಿಲ್ಲ.ಇದೇ ಫಲಿತಾಂಶ 2018ರ ಚುನಾವಣೆಯಲ್ಲಿ ಮರುಕಳಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಉಪ ಚುನಾವಣೆ ಫಲಿತಾಂಶದ ನಂತರ ಹೇಳಿದ್ದಾರೆ. ಈ ಎರಡು ಕ್ಷೇತ್ರಗಳಲ್ಲಿ ಕಮಲವು ಅರಳದೆ ಕೆಸರಿನಲ್ಲಿ ಹೂತು ಹೋಗಿದ್ದೇಕೆ? ಇಲ್ಲಿದೆ ಉತ್ತರ

ಆರು ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದ್ದೆವು. ಬೇರೆ ಬೇರೆ ಕಾರಣಗಳಿಂದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿರಬಹುದು. ಆದರೆ, 2018ರ ಚುನಾವಣೆಯೇ ಬೇರೆ ಎಂದಿದ್ದಾರೆ. ವೈಯಕ್ತಿಕವಾಗಿ ಪ್ರಸಾದ್ ಸೋಲು ನನಗೆ ತುಂಬ ನೋವು ತಂದಿದೆ. ಅವರಂತಹ ಹಿರಿಯರು ವಿಧಾನಸಭೆಯಲ್ಲಿ ಇರಬೇಕಿತ್ತು. ನಾವು ಈ ಫಲಿತಾಂಶವನ್ನು ನಿರೀಕ್ಷೆ ಮಾಡಿರಲಿಲ್ಲ ಎಂದರು.

ಒಟ್ಟಾರೆ, ಈ ಫಲಿತಾಂಶದಿಂದ ಎಲ್ಲವೂ ಮೋದಿ ಅಲೆಯಿಂದ ರಾಜ್ಯದಲ್ಲಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ. ಎಸ್ಸೆಂ ಕೃಷ್ಣ ಅವರ ನಂತರ ಬಿಜೆಪಿಗೆ ಹೆಚ್ಚು ಮಂದಿ ಸೇರುತ್ತಾರೆ ಎಂಬ ನಿರೀಕ್ಷೆ ಟುಸ್ ಆಗಲಿದೆ. [ಕಾಂಗ್ರೆಸ್ ಗೆಲುವಿಗೆ ಸೋಪಾನವಾದ 9 ಸಂಗತಿಗಳು]

ಯಡಿಯೂರಪ್ಪ ಅವರ ಅತಿ ಆತ್ಮವಿಶ್ವಾಸ

ಯಡಿಯೂರಪ್ಪ ಅವರ ಅತಿ ಆತ್ಮವಿಶ್ವಾಸ

* ಶ್ರೀನಿವಾಸ್ ಪ್ರಸಾದ್ ಅವರ ಅನಾರೋಗ್ಯ, ಪ್ರಚಾರಕ್ಕೆ ಬಾರದಿರುವುದು

* ಯಡಿಯೂರಪ್ಪ ಬಿಟ್ಟರೆ ಘಟಾನುಘಟಿ ನಾಯಕರು ಪ್ರಚಾರಕ್ಕೆ ಅಷ್ಟಾಗಿ ಬಾರದಿರುವುದು. ಈಶ್ವರಪ್ಪ ಪ್ರಚಾರಕ್ಕೆ ಬಂದ ಹಾಗೆ ಇಲ್ಲ.

* ಎಸ್ಸೆಂ ಕೃಷ್ಣರಂಥ ನಾಯಕರು ಯಾವುದೇ ಪ್ರಭಾವ ಬೀರದಿರುವುದು
* ಗೀತಾ ಮಹದೇವ ಪ್ರಸಾದ್ ಮೇಲೆ ಅನುಕಂಪ

* ಶ್ರೀನಿವಾಸ್ ಪ್ರಸಾದ್ ಕೆಲ್ಸ ಮಾಡಲ್ಲ. ಅದಕ್ಕೆ ಸಂಪುಟದಿಂದ ಕೈಬಿಟ್ಟಿದ್ದು ಎಂದ ಸಿದ್ದರಾಮಯ್ಯ ಮಾತು. ಚುನಾವಣೆಯಿಂದ ಜೆಡಿಎಸ್ ದೂರ ನಿಲ್ಲುವ ಆ ಪಕ್ಷದ ಕೆಲವು ಮತಗಳು ಕಾಂಗ್ರೆಸ್ ಗೆ ಹರಿದುಬಂದಿದ್ದು.

ಪ್ರತಾಪ್ ಸಿಂಹ ಅವರ ಗೂಟದ ಕಾರು ಹೇಳಿಕೆ

ಪ್ರತಾಪ್ ಸಿಂಹ ಅವರ ಗೂಟದ ಕಾರು ಹೇಳಿಕೆ

* ಪ್ರತಾಪ್ ಸಿಂಹ ಅವರ ಗೂಟದ ಕಾರು ಹೇಳಿಕೆ

* ಯಡಿಯೂರಪ್ಪ ಮಾತು ತಪ್ಪಿದರೆಂದು ಗೀತಾ ಮಹದೇವ ಪ್ರಸಾದ್ ಹೇಳಿಕೆ

* ಕಾಂಗ್ರೆಸ್ ಲೇವಡಿ ಮಾಡಿದ ಈಶ್ವರಪ್ಪ ಹೇಳಿಕೆ

* ಎಸ್ಸೆಂ ಕೃಷ್ಣ ಅವರ ಕಾಂಗ್ರೆಸ್ ವಿರೋಧಿ ಹೇಳಿಕೆ
* ಕೃಷ್ಣ ಬಗ್ಗೆ ಸಿಎಂ ಇಬ್ರಾಹಿಂ ಹೇಳಿದ್ದು.

* ಸಿಎಂ ತಲಾಕ್ ರಾಜಕಾರಣಿ ಎಂದು ಈಶ್ವರಪ್ಪ ಹೇಳಿದ್ದು.

* ಮೃತ ರೈತನ ಮನೆಗೆ ಯಡಿಯೂರಪ್ಪ ಹಣಕೊಟ್ಟಾಗ ಈಶ್ವರಪ್ಪ ಕೊಟ್ಟ, ಬಿಜೆಪಿಗೆ ಇರುಸು ಮುರುಸು ಮಾಡುವಂಥ ಹೇಳಿಕೆ.

ಮುಂದಿನ ಸಿಎಂ ಅಭ್ಯರ್ಥಿ ?

ಮುಂದಿನ ಸಿಎಂ ಅಭ್ಯರ್ಥಿ ?

* ಬಿಎಸ್ ಯಡಿಯೂರಪ್ಪರನ್ನು ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಿಸದಿರುವುದು ಈಗಲೇ ಪರಿಣಾಮ ಬೀರಿದೆ.
* ಶೋಭಾ ಕರಂದ್ಲಾಜೆ ಹಾಗೂ ಬಿಎಸ್ ವೈ ವಿರುದ್ಧ ಭಿನ್ನಮತ, ಕೆ ಎಸ್ ಈಶ್ವರಪ್ಪ ಜತೆ ಕಲಹ.
* ಯಡಿಯೂರಪ್ಪ ವಿರೋಧಿಗಳು ಹೈಕಮಾಂಡ್ ಬಾಗಿಲು ತಟ್ಟಿದ್ದು, ಏಕಾಂಗಿಯಾಗಿ ಉಪ ಸಮರ ಸೆಣೆಸಲು ಯಡಿಯೂರಪ್ಪರನ್ನು ಬಿಟ್ಟಿದ್ದು ಮುಳುವಾಯಿತು.

ಜಾತಿ ಲೆಕ್ಕಾಚಾರ ಟುಸ್

ಜಾತಿ ಲೆಕ್ಕಾಚಾರ ಟುಸ್

ಅಹಿಂದ, ಮುಸ್ಲಿಂ, ದಲಿತರು, ಲಿಂಗಾಯತರು ಯಡಿಯೂರಪ್ಪ ಅವರ ಬೆಂಬಲಕ್ಕೆ ಇಲ್ಲ ಎಂಬುದು ಸಾಬೀತಾಗಿದೆ.

ಒಟ್ಟಾರೆ, ಇದು ಯಡಿಯೂರಪ್ಪ ಅವರ ತಂತ್ರಗಾರಿಕೆಯ ವೈಫಲ್ಯ ಅಥವಾ ನಿರ್ಲಕ್ಷ್ಯ ಕಾರಣ. ಸಿದ್ದರಾಮಯ್ಯ ಅವರು ಬಿಜೆಪಿ ಮಾಡಿದ ತಂತ್ರಕ್ಕೆ ಸರಿಯಾದ ಪ್ರತಿತಂತ್ರ ಹೆಣೆಯಲು ಕಾರಣವಾಗಿದ್ದು, ಬಾಲಿಶ ಹೇಳಿಕೆ ಹಾಗೂ ನಡವಳಿಕೆಗಳು. ಮತದಾರರು ಬಿಜೆಪಿ ಜತೆ ಭಾವನಾತ್ಮಕವಾಗಿ ಬೆರೆಯಲು ಅಗದಂತೆ ತಡೆ ಹಿಡಿಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+