ತಿಂಗಳ ಸುದ್ದಿ ಚಿತ್ರ: ಒನ್ಇಂಡಿಯಾದ ಟ್ರೆಂಡಿಂಗ್ ಸ್ಟೋರಿಗಳು
ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಓದಲ್ಪಟ್ಟ, ಚರ್ಚಿಸಲ್ಪಟ್ಟ ಸುದ್ದಿಗಳ ಸಂಗ್ರಹ ಇಲ್ಲಿದೆ.
ಕರ್ನಾಟಕದ ಜಿಲ್ಲಾಸುದ್ದಿ, ಕ್ರೀಡೆ, ಉದ್ಯೋಗ, ಜ್ಯೋತಿಷ್ಯ, ರಾಜಕೀಯ, ಹಾಸ್ಯ ಸೇರಿದಂತೆ ದೇಶ -ವಿದೇಶದ ಸುದ್ದಿಗಳು ಇದರಲ್ಲಿ ಸೇರಿವೆ. ಎಂದಿನಂತೆ ನಮ್ಮನ್ನು ತಿದ್ದಿ ತೀಡುತ್ತಿರುವ ಓದುಗ ಮಹಾ ಪ್ರಭುಗಳಿಗೆ ನಮ್ಮ ತಂಡ ಆಭಾರಿಯಾಗಿದೆ.
2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ವೆಬ್ ತಾಣ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ).
ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ.

ವಿಡಿಯೋದಲ್ಲಿರುವುದು ನಾನಲ್ಲ ಎಂದ ‘ಖತರ್ನಾಕ್’ ನಟಿ
ಹುಣಸಮಾರನಹಳ್ಳಿ ಮುದ್ದೇವನವರ ವೀರಸಿಂಹಾಸನ ಸಂಸ್ಥಾನ ಜಂಗಮ ಮಠದಲ್ಲಿ ಪೀಠಾಧ್ಯಕ್ಷರಾಗಲು ಮುಂದಾಗಿದ್ದ ಕಿರಿಯ ಸ್ವಾಮೀಜ ದಯಾನಂದ್ ಅಲಿಯಾಸ್ ಗುರು ನಂಜೇಶ್ವರರಿಗೂ ನನಗೂ ಯಾವುದೇ ಸಂಬಂಧವಿಲ್ಲ ವಿಡಿಯೋದಲ್ಲಿರುವುದು ನಾನಲ್ಲ ಎಂದು ನಟಿ ಹೇಳಿದ್ದಾರೆ. ನಂತರ ನಟಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.

ಮದುವೆ ರೇಖೆ ತಿಳಿಸುವ ವೈವಾಹಿಕ ಜೀವನ
ಪುರುಷರಿಗಾದರೆ ಎಡಗೈನಲ್ಲಿರುವ ಮದುವೆ ರೇಖೆಯನ್ನು ಹಾಗೂ ಮಹಿಳೆಯರಿಗಾದರೆ ಬಲಗೈನಲ್ಲಿರುವ ಮದುವೆ ರೇಖೆಯನ್ನು ನೋಡಬೇಕು. ಇಷ್ಟು ತಿಳಿದುಕೊಂಡರಲ್ಲ, ಇನ್ನು ಯಾವ ರೀತಿಯ ರೇಖೆ ಏನು ಭವಿಷ್ಯ ಹೇಳುತ್ತದೆ ಎಂಬುದನ್ನು ಓದಿಕೊಳ್ಳಿ.

ಬಿಟಿವಿಯಿಂದ ಚಂದನ್ ಶರ್ಮ ಟಿವಿ9ಗೆ
ಬೆಂಗಳೂರಿನ ಅಕಾಲಿಕ ಮಳೆಯಂತೆ ಕನ್ನಡ ಟಿವಿ ಮಾಧ್ಯಮದಲ್ಲಿ ಅಕಾಲಿಕ ವಲಸೆ, ನೇಮಕಾತಿ, ಸಂಬಳ ವಿತರಣೆ ಆರಂಭವಾಗಿದೆ ಎಂಬ ಸುದ್ದಿ ನಮ್ಮ ಬಾತ್ಮೀದಾರರ ಕಿವಿಗೆ ಬಿದ್ದಿದೆ. ಕನ್ನಡ ಮಾಧ್ಯಮ ಜಗತ್ತಿನ ಇತ್ತೀಚಿನ ಆಗು ಹೋಗುಗಳತ್ತ ಒಂದು ವಾರೆ ನೋಟ ಇಲ್ಲಿದೆ.

ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇಗುಲ ಪ್ರವೇಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಇತರ ಸಂಪುಟ ಸಹೋದ್ಯೋಗಿಗಳು ಮಾಂಸಾಹಾರ ಸೇವಿಸಿದ ಬಳಿಕ ಧರ್ಮಸ್ಥಳ ದೇವಸ್ಥಾನ ಪ್ರವೇಶಿಸಿದ ಘಟನೆ ಪರ ವಿರೋಧ ಚರ್ಚೆಗಳು, ವಿವರಣೆಗಳು ಇಲ್ಲಿವೆ.

ಬೆಂಗಳೂರು ನಗರದಲ್ಲಿ ಸುರಿದ ಮಳೆ

ಕಾರ್ಣಿಕ ನುಡಿದ ನಾಗಪ್ಪಜ್ಜ ಉರ್ಮಿ

ಮಹಿಳೆಯರ ತಲೆಕೂದಲು ನೋಡಿ, ಭವಿಷ್ಯ

ಸಮೀರಾಚಾರ್ಯ ಕರ್ಮಗಳನ್ನು ಹೇಗೆ ಮಾಡ್ತಾರೆ?

ಹನ್ನೆರಡು ರಾಶಿಗಳವರ ಅದೃಷ್ಟದ ಬಣ್ಣ

'ಗೇಲ್ 'ಗುಪ್ತಾಂಗ' ಕಂಡು ಆಘಾತದಿಂದ ಕಣ್ಣೀರಿಟ್ಟೆ'
ವೆಸ್ಟ್ ಇಂಡೀಸ್ ನ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರ 'ಗುಪ್ತಾಂಗ' ಪ್ರದರ್ಶನ ಈಗ ಕೋರ್ಟಿ ಮೆಟ್ಟಿಲೇರಿದ್ದು, ಈ ವಿವಾದ ಕುರಿತಂತೆ ಮಹಿಳಾ ಮಸಾಜರ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಮಸಾಜ್ ಮಾಡಲ್ ಹೋದಾಗ ನಡೆದ ಸಂಭಾಷಣೆ, ಆಘಾತವನ್ನು ವಿವರಿಸಿದ್ದಾರೆ. ಆದರೆ, ನಂತರ ಈ ಪ್ರಕರಣದಲ್ಲಿ ಗೇಲ್ ಗೆ ಗೆಲುವಾಗಿದೆ.











Click it and Unblock the Notifications