ವಿಡಿಯೋದಲ್ಲಿರುವುದು ನಾನಲ್ಲ ಎಂದ ‘ಖತರ್ನಾಕ್’ ನಟಿ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 27: ಹುಣಸಮಾರನಹಳ್ಳಿ ಮುದ್ದೇವನವರ ವೀರಸಿಂಹಾಸನ ಸಂಸ್ಥಾನ ಜಂಗಮ ಮಠದಲ್ಲಿ ಪೀಠಾಧ್ಯಕ್ಷರಾಗಲು ಮುಂದಾಗಿದ್ದ ಕಿರಿಯ ಸ್ವಾಮೀಜ ದಯಾನಂದ್ ಅಲಿಯಾಸ್ ಗುರು ನಂಜೇಶ್ವರರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಆ ವಿಡಿಯೋದಲ್ಲಿರುವುದು ನಾನಲ್ಲ ಎಂದು ನಟಿ ಕಾವ್ಯಾ ಆಚಾರ್ಯ ಹೇಳಿದ್ದಾರೆ.

ಮದ್ದೇವಣಾಪುರ ಮಠದಲ್ಲಿ ರಾಸಲೀಲೆ, ಸ್ವಾಮೀಜಿ ನಾಪತ್ತೆ

ದಯಾನಂದ ಸ್ವಾಮಿ ಹಾಗೂ ನಟಿಯೊಬ್ಬರು ರಾಸಲೀಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ನಡುವೆ ವಿಡಿಯೋದಲ್ಲಿರುವ ನಟಿ ಯಾರು ಎಂಬ ಪ್ರಶ್ನೆ ಮೂಡಿತ್ತು. ವಿಡಿಯೋದಲ್ಲಿರುವುದು 'ಖತರ್ನಾಕ್' ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಕಾವ್ಯಾ ಆಚಾರ್ಯ ಎಂಬ ಸುದ್ದಿ ಹಬ್ಬಿತ್ತು.

Actress denies charges her involvement in a sleazy act with Dayananda Swami

ಆದರೆ, ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿ, ಸ್ಪಷ್ಟನೆ ನೀಡಿರುವ ಕಾವ್ಯಾ, ನನಗೆ ಯಾವ ಸ್ವಾಮೀಜಿಯ ಪರಿಚಯವಿಲ್ಲ. ಯಾರೋ ಬೇಕಂತಾನೇ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಈ ರೀತಿ ಮಾಡುವವರು ಇರುತ್ತಾರೆ. ವಿಡಿಯೋದಲ್ಲಿರುವುದು ನಾನಲ್ಲ ಎಂದಿದ್ದಾರೆ.

ಮದ್ದೇವಣಾಪುರ ಮಠದ ಸ್ವಾಮಿಯ ಕಾಮಪುರಾಣಕ್ಕೆ ಹೊಸ ಟ್ವಿಸ್ಟ್

ಸಿನಿಮಾಗಳಿಂದ ದೂರವಾದ ಬಳಿಕ ಕಾವ್ಯಾ, ದಯಾನಂದ್ ಅವರೊಂದಿಗೆ ಗೆಳೆತನ ಬೆಳೆಸಿದ್ದರೆನ್ನಲಾಗಿದೆ. ಆದರೆ, ಕಾವ್ಯಾರನ್ನು ಮುಂದಿಟ್ಟುಕೊಂಡು ಕೆಲವರು ಹಣಕ್ಕಾಗಿ ಸ್ವಾಮೀಜಿಯಾಗಲು ಹೊರಟಿದ್ದ ದಯಾನಂದ್ ನನ್ನು ಖೆಡ್ಡಾಕ್ಕೆ ಬೀಳಿಸಿರುವ ಸಾಧ್ಯತೆ ಕೂಡ ಇದೆ ಎಂದು ಸುದ್ದಿ ಹಬ್ಬಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actress named Kavya Acharya of Khatarnak Kannad film has denied charges her involvement in a sleazy act with Dayananda Swami alias Gurunajeshwara son of Muddevanavara Veera Simhasana Samsthan Mutt's seer Pattada Parvatharaja Shivacharya swamiji.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ