10 Richest MLAs in India: ಭಾರತದ ಟಾಪ್ 10 ಸಿರಿವಂತ ಶಾಸಕರಿವರು, ಅಗ್ರಸ್ಥಾನದಲ್ಲಿ ಡಿಕೆಶಿ, ವಿವರ ಇಲ್ಲಿದೆ
ಕರ್ನಾಟಕ, ಜುಲೈ, 19: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಇಂದು ಭಾರತದ ಅತ್ಯಂತ ಶ್ರೀಮಂತ ಟಾಪ್ 10 ಶಾಸಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಪ್ರಸ್ತುತ ಕರ್ನಾಟಕ ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇದ್ದಾರೆ. ಹಾಗಾದರೆ ಇನ್ನುಳಿದ ಒಂಬತ್ತು ಜನ ಯಾವ ರಾಜ್ಯದವರು ಹಾಗೂ ಅವರ ಆಸ್ತಿ ಎಷ್ಟು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮಾಹಿತಿಯ ಪ್ರಕಾರ, ಭಾರತದಾದ್ಯಂತ ವಿಧಾನಸಭೆಗಳ ಪ್ರತಿ ಸದಸ್ಯರ ಸರಾಸರಿ ಆಸ್ತಿ 13.63 ಕೋಟಿ ರೂಪಾಯಿ ಆಗಿದೆ. ಆದರೆ ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವವರು ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದವರಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

28 ರಾಜ್ಯ ವಿಧಾನಸಭೆಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 4,001 ಹಾಲಿ ಶಾಸಕರನ್ನು ಈ ಗುಂಪು ವಿಶ್ಲೇಷಿಸಿದೆ. ಈ ಪೈಕಿ ಕರ್ನಾಟಕ ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು 1,413 ಕೋಟಿ ರೂ. ಆಸ್ತಿಯೊಂದಿಗೆ ದೇಶದ ಅತ್ಯಂತ ಸಿರಿವಂತ ಶಾಸಕರೆನಿಸಿಕೊಂಡಿದ್ದಾರೆ. ಇನ್ನು ಪಶ್ಚಿಮ ಬಂಗಾಳದ ಬಿಜೆಪಿ ಶಾಸಕರೊಬ್ಬರು ಕೇವಲ 1,700 ರೂಪಾಯಿಗಳ ಆಸ್ತಿಯನ್ನು ಘೋಷಿಸಿದ್ದಾರೆ. ಮತ್ತೊಬ್ಬ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಅವರು 881 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡುವುದರೊಂದಿಗೆ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.
| ಕ್ರ.ಸಂ | ಶಾಸಕರ ಹೆಸರು | ರಾಜ್ಯ | ಕ್ಷೇತ್ರ | ಪಕ್ಷ | ಆಸ್ತಿ |
| 1 | ಡಿ.ಕೆ.ಶಿವಕುಮಾರ್ | ಕರ್ನಾಟಕ | ಕನಕಪುರ | ಕಾಂಗ್ರೆಸ್ | 1413 ಕೋಟಿ ರೂಪಾಯಿ |
| 2 | ಕೆ.ಎಚ್.ಪುಟ್ಟಸ್ವಾಮಿ ಗೌಡ | ಕರ್ನಾಟಕ | ಗೌರಿಬಿದನೂರು | ಐಎನ್‌ಡಿ | 1267 ಕೋಟಿ ರೂ. |
| 3 | ಪ್ರಿಯಕೃಷ್ಣ | ಕರ್ನಾಟಕ | ಗೋವಿಂದರಾಜನಗರ | ಕಾಂಗ್ರೆಸ್ | 1156 ಕೋಟಿ ರೂ. |
| 4 | ಚಂದ್ರಬಾಬು ನಾಯ್ಡು | ಆಂಧ್ರಪ್ರದೇಶ | ಕುಪ್ಪಂ | ಟಿಡಿಪಿ | 668 ಕೋಟಿ ರೂ. |
| 5 | ಜಯಂತಿಭಾಯಿ ಪಟೇಲ್ | ಗುಜರಾತ್ | ಮಾನಸ | ಬಿಜೆಪಿ | 661 ಕೋಟಿ ರೂ. |
| 6 | ಸುರೇಶ್ ಬಿ.ಎಸ್ | ಕರ್ನಾಟಕ | ಹೆಬ್ಬಾಳ | ಕಾಂಗ್ರೆಸ್ | 648 ಕೋಟಿ ರೂ. |
| 7 | ಜಗನ್ ಮೋಹನ್ ರೆಡ್ಡಿ | ಆಂಧ್ರಪ್ರದೇಶ | ಪುಲಿವೆಂಡ್ಲಾ | ವೈಎಸ್‌ಆರ್‌ಸಿಪಿ | 510 ಕೋಟಿ ರೂ. |
| 8 | ಪರಾಗ್ ಶಾ | ಮಹಾರಾಷ್ಟ್ರ | ಘಾಟ್ಕೋಪರ್ ಪೂರ್ವ | ಬಿಜೆಪಿ | 500 ಕೋಟಿ ರೂ. |
| 9 | ಟಿ.ಎಸ್.ಬಾಬಾ | ಛತ್ತೀಸ್‌ಘಢ | ಅಂಬಿಕಾಪುರ | ಐಎನ್‌ಸಿ | 500 ಕೋಟಿ ರೂ. |
| 10 | ಮಂಗಳಪ್ರಭಾತ್ | ಲೋಧಾ ಮಹಾರಾಷ್ಟ್ರ | ಮಲಬಾರ್ ಹಿಲ್ | ಬಿಜೆಪಿ | 441 ಕೋಟಿ ರೂ. |
ದೇಶದ ಟಾಪ್ 10 ಶಾಸಕರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇದರಲ್ಲಿ ಕರ್ನಾಟಕದ ನಾಲ್ವರು ಶಾಸಕರಿದ್ದಾರೆ. ಡಿ.ಕೆ.ಶಿವಕುಮಾರ್, ಕೆ.ಎಚ್.ಪುಟ್ಟಸ್ವಾಮಿ ಗೌಡ, ಪ್ರಿಯಕೃಷ್ಣ, ಸುರೇಶ್ ಬಿ.ಎಸ್ ಇವರು ಕರ್ನಾಟಕದ ಸಿರಿವಂತ ಶಾಸಕರಾಗಿದ್ದಾರೆ. ಇನ್ನುಳಿದ 6 ಜನ ಸಿರಿವಂತ ಶಾಸಕರು ಬೇರೆ ರಾಜ್ಯದವರಾಗಿದ್ದಾರೆ.












Click it and Unblock the Notifications