ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಜಿಗೆ 80 ರೂಪಾಯಿ ದಾಟಿದ ಟೊಮೆಟೊ: ರೈತರ ಮೊಗದಲ್ಲಿ ಮಂದಹಾಸ

|
Google Oneindia Kannada News

ಬೆಂಗಳೂರು ಮೇ 17: ಪ್ರತಿ ಕಿಲೋಗ್ರಾಂಗೆ 80 ರೂಪಾಯಿ ದಾಟಿದ ಕಾರಣ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಸಾಮಾನ್ಯ ಜನರು ಟೊಮೆಟೊ ಖರೀದಿಗೆ ಕಡಿವಾಣ ಹಾಕುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಟೊಮೇಟೊ ಬೆಲೆ ತೀವ್ರ ಕುಸಿತ ಕಂಡಿರುವುದನ್ನು ವಿರೋಧಿಸಿ ರೈತರು ರಸ್ತೆಯಲ್ಲಿ ತರಕಾರಿ ಎಸೆದು ಪ್ರತಿಭಟನೆ ನಡೆಸಿದ್ದರು. ಆದರೆ, ಟೊಮೇಟೊ ಇಳುವರಿ ಪಡೆದ ರೈತರು ಸಂಭ್ರಮಿಸುತ್ತಿದ್ದು, ಮಧ್ಯಮ ಹಾಗೂ ಬಡ ವರ್ಗದವರು ಹಿಡಿಶಾಪ ಹಾಕುತ್ತಿದ್ದಾರೆ.

ತೋಟಗಾರಿಕಾ ಉತ್ಪಾದಕರ ಸಹಕಾರಿ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ ಆಫ್ ಲಿಮಿಟೆಡ್ (ಎಚ್‌ಒಪಿಕಾಮ್ಸ್) ದರಪಟ್ಟಿ ಮಂಗಳವಾರ ಟೊಮೆಟೊ ಬೆಲೆ 75 ರೂಪಾಯಿ ಎಂದು ತೋರಿಸಿದ್ದರೂ, ಬೆಂಗಳೂರಿನ ಅನೇಕ ತರಕಾರಿ ಅಂಗಡಿಗಳು ಮತ್ತು ಮಾಲ್‌ಗಳಲ್ಲಿ ಟೊಮೇಟೋ ಬೆಲೆ ಕೆಜಿಗೆ 100 ರೂಪಾಯಿ ದಾಟಿದೆ.

ವಿಶ್ವ ಅಧಿಕ ರಕ್ತದೊತ್ತಡ ದಿನ 2022: ನಿಮ್ಮ ಆಹಾರದಲ್ಲಿರಲಿ 5 ಹಣ್ಣುಗಳು ವಿಶ್ವ ಅಧಿಕ ರಕ್ತದೊತ್ತಡ ದಿನ 2022: ನಿಮ್ಮ ಆಹಾರದಲ್ಲಿರಲಿ 5 ಹಣ್ಣುಗಳು

ರಾಜ್ಯದಲ್ಲಿ ಚಂಡಮಾರುತದಿಂದ ಅಕ್ಕಪಕ್ಕದ ರಾಜ್ಯಗಳಲ್ಲಿ ಟೊಮೆಟೊ ಬೆಳೆಗೆ ಭಾರಿ ಹಾನಿಯಾಗಿದ್ದು, ಬೆಲೆ ಗಗನಕ್ಕೇರಿದೆ. ಚಂಡಮಾರುತದ ಜತೆಗೆ ಬಿರುಗಾಳಿ ಸಹಿತ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಇದರಿಂದ ಟೊಮೇಟೋ ಬೆಲೆ ಭಾರೀ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 16,328 ಹೆಕ್ಟೇರ್‌ನಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ.

Tomatoes crossing 80 Rs per kg: Farmers Happy

ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ ಉತ್ತಮ ಇಳುವರಿ ಇದೆ. ತಜ್ಞರ ಪ್ರಕಾರ ರಾಜ್ಯದಲ್ಲಿ ಪ್ರತಿ ವರ್ಷ 9.50 ಲಕ್ಷ ಮೆಟ್ರಿಕ್ ಟನ್ ಟೊಮೆಟೊ ಉತ್ಪಾದನೆಯಾಗುತ್ತದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ರಾಜ್ಯದ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆಯಲಾಗುತ್ತದೆ. ಕೋಲಾರ ಮಾರುಕಟ್ಟೆಯಲ್ಲಿ ಕಳೆದ ವರ್ಷ 15 ಕಿಲೋ ಟೊಮೇಟೊ 15 ರೂ.ಗೆ ಮಾರಾಟವಾಗುತ್ತಿದ್ದು, ಈಗ 80, 100 ರೂ.ಗೆ ಏರಿಕೆಯಾಗಿದೆ. ಶಿವಮೊಗ್ಗ, ಕಾರವಾರ, ಹುಬ್ಬಳ್ಳಿ, ಧಾರವಾಡದಲ್ಲಿ ಸಗಟು ದರ 50ರಿಂದ 70 ರೂ. ಇದೆ ಎಂದು ಅವರು ಹೇಳಿದರು.

Tomatoes crossing 80 Rs per kg: Farmers Happy

ಸದ್ಯ ನಾಸಿಕ್‌ನಿಂದ ಬೆಂಗಳೂರು ಮಾರುಕಟ್ಟೆಗೆ ಮೂರ್ನಾಲ್ಕು ಟ್ರಕ್‌ಗಳಷ್ಟು ಟೊಮೆಟೊ ಬರುತ್ತಿದೆ. ಸಾಂಬಾರ್ ಮತ್ತು ಇತರ ಭಕ್ಷ್ಯಗಳಿಗೆ ಟೊಮೆಟೋ ಬಳಸುವ ಜನರು ಹುಣಸೆಹಣ್ಣಿಗೆ ಬದಲಾಯಿಸಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಸೊಪ್ಪಿನ ಮೇಲೂ ಪರಿಣಾಮ ಬೀರಿದ್ದು, ಮಾರುಕಟ್ಟೆಯಲ್ಲಿ ಬೆಲೆ ದುಪ್ಪಟ್ಟಾಗಿದೆ.

English summary
The common man in Karnataka, especially in Bengaluru is forced to cut down on tomato purchases as the prices have crossed Rs 80 per kilogram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X