Tomato Price Hike: ಪಾತಾಳಕ್ಕೆ ಕುಸಿದಿದ್ದ 'ಕೆಂಪು ರಾಣಿ' ಟೊಮೆಟೊ ಬೆಲೆ ದಿಢೀರ್ ದಾಖಲೆಯ ಏರಿಕೆ
Tomato Price Hike: ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದು ಬಲೂ ಅಪರೂಪ. ಹಾಗೆಯೇ ಇದೀಗ ರಾಜ್ಯದ ಈ ಭಾಗದಲ್ಲಿ 'ಕೆಂಪು ರಾಣಿ' ಟೊಮೆಟೊ ಬೆಲೆ ದಿಢೀರ್ ಏರಿಕೆ ಆಗಿದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸ ಹೆಚ್ಚಾಗಿದೆ. ಹಾಗಾದ್ರೆ ಕೆ.ಜಿಗೆ ಎಷ್ಟಿದೆ ಎನ್ನುವ ಅಂಕಿಅಂಶಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹೌದು.. ಇಳುವರಿ ಉತ್ತಮವಾಗಿ ಇರುವ ಸಮಯದಲ್ಲೇ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ ಎನ್ನುವ ಕೂಗು ಮೊದಲಿನಿಂದಲೂ ಇದೆ. ಈ ನಡುವೆಯೇ ಇದೀಗ ಟೊಮೆಟೊ ಬೆಲೆ ಏರಿಕೆಯಾಗಿರುವುದು ರೈತರ ಮುಖದಲ್ಲಿ ಮಂದಹಾಸ ಹೆಚ್ಚಾಗಿದೆ. ಹಾಗಾದ್ರೆ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಟೊಮೆಟೊ ಬೆಲೆ ವಿವರ: ಕೆಂಪು ರಾಣಿ ಅಂತಲೇ ಖ್ಯಾತಿ ಪಡೆದಿರುವ ಟೊಮೆಟೊಗೆ ಭಾರಿ ಬೇಡಿಕೆ ಬಂದಿದೆ. ಕೆ.ಜಿ.ಗೆ 100 ರೂಪಾಯಿ ದರ ನಿಗದಿ ಆಗಿದೆ. ಕಳೆದ ಕೆಲದ ದಿನಗಳಿಂದ ಟೊಮೆಟೊ ಬೆಲೆ ಏರಿಕೆ ಆಗುತ್ತಲಿದೆ. ಸದ್ಯ ಚಿಕ್ಕಬಳ್ಳಾಪುರ ನಗರದ ಹಾಪ್ ಕಾಮ್ಸ್‌ಗಳಲ್ಲಿ ಉತ್ತಮ ದರ್ಜೆಯ ಟೊಮೆಟೊ ಕೆ.ಜಿ.ಗೆ 80 ರೂಪಾಯಿ ಇದೆ.
ತಳ್ಳುವ ಗಾಡಿಯಲ್ಲಿ ಬೆಲೆ ಎಷ್ಟಿದೆ?: ಮತ್ತೊಂದೆಡೆ ತಳ್ಳುವ ಗಾಡಿಯಲ್ಲಿ ಕೆ.ಜಿ ಟೊಮೆಟೊ 90 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಗೆ ಹೋಗುವ ಟೊಮೆಟೊ ಪ್ರಮಾಣದಲ್ಲಿ ಇಳಿಕೆಯಾದ ಹಿನ್ನೆಲೆ ಬೆಲೆ ಹೆಚ್ಚಳ ಆಗುತ್ತಿದೆ. ಪ್ರತಿದಿನ ಮಾರುಕಟ್ಟೆಗೆ 800ರಿಂದ 1,000 ಟೊಮೆಟೊ ಬಾಕ್ಸ್ ಬರುತ್ತಿವೆ. ಅದರಲ್ಲೂ ಉತ್ತಮ ಟೊಮೆಟೊ ಅಂತಲೇ ಹೆಸರು ಪಡೆದಿರುವ ಸಾಹು ಎಂಬ ಹೈಬ್ರಿಡ್ ಟೊಮೆಟೊ ಬಾಕ್ಸ್ ಒಂದಕ್ಕೆ 800 ರಿಂದ 1,000 ವರೆಗೂ ಮಾರಾಟ ಆಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಿಕ್ಕಬಳ್ಳಾಪುರದ ಚಿಂತಾಮಣಿ ಎಪಿಎಂಸಿಯಲ್ಲಿ 14 ಕೆ.ಜಿ. ಟೊಮೆಟೊ ಬೆಲೆ 600ರಿಂದ 800 ರೂಪಾಯಿವರೆಗೆ ಮಾರಾಟ ಆಗುತ್ತಿದೆ. ಗೋಲಿ ಗಾತ್ರದ ಚಿಕ್ಕ ಟೊಮೆಟೊ 14 ಕೆ.ಜಿ ಬಾಕ್ಸ್ ಒಂದಕ್ಕೆ 350ರಿಂದ 400 ರೂಪಾಯಿವರೆಗೂ ಮಾರಾಟ ಆಗಿರುವ ಬಗ್ಗೆ ವರದಿಯಾಗಿದೆ.
ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯ ಸದ್ಯದ ಟೊಮೆಟೋ ದರ 14 ಕೆ.ಜಿ ಬಾಕ್ಸ್ ಒಂದಕ್ಕೆ 500 ರಿಂದ 750 ರೂಪಾವರೆಗೂ ಹರಾಜು ಆಗಿದೆ. ಟೊಮೆಟೊ ಬೆಲೆ ಕಳೆದೊಂದು ತಿಂಗಳ ಹಿಂದೆ ಕೆ.ಜಿ.ಗೆ ಅತೀ ಕಡಿಮೆ 15-20 ರೂಪಾಯಿಗೆ ಮಾರಾಟ ಆಗುತ್ತಿತ್ತು. ಆದರೆ, ಇದೀಗ ಭಾರೀ ಏರಿಕೆ ಕಂಡಿರುವುದು ಬೆಳೆಗಾರರಲ್ಲಿ ಸಂತಸ ತರಿಸಿದೆ.
ಪಾತಾಳಕ್ಕೆ ಕುಸಿದಿದ್ದ ಬೆಲೆ: ಕಳೆದ ಕೆಲ ದಿನಗಳವರೆಗೂ ಟೊಮೆಟೊ ದರ ಪಾತಾಳಕ್ಕೆ ಕುಸಿದಿತ್ತು. ಇದರಿಂದ ಬೆಳೆಗಾರರು ಕಂಗಾಲಾಗಿದ್ದು, ಯಾವಾಗ ಏರಿಕೆ ಆಗಲಿದೆ ಎಂದು ಕಾದು ಕುಳಿತಿದ್ದರು. ಅದೆಷ್ಟೋ ರೈತರು ಹಲವು ಜಿಲ್ಲೆಗಳಲ್ಲಿ ಸೂಕ್ತ ಬೆಲೆ ಇಲ್ಲ ಎಂಬ ಕಾರಣಕ್ಕೆ ಟೊಮೆಟೊ ರಸ್ತೆಗೆ ಸುರಿದ ಘಟನೆಗಳು ನಡೆದಿವೆ. ಅಲ್ಲದೆ, ಸರ್ಕಾರದ ವಿರುದ್ಧ ಆಕ್ರೋಶವನ್ನಯ ಸಹ ವ್ಯಕ್ತಪಡಿಸಿದ್ದರು. ಇದೀಗ ದಿಢೀರ್ ಏರಿಕೆ ಕಂಡಿದ್ದು, ಬೆಳೆಗಾರರಿಗೆ ಸಂತಸ ತರಿಸಿದೆ.
ಸಾಮಾನ್ಯವಾಗಿ ಫಸಲು ಬಂದಂತಹ ಸಂದರ್ಭದಲ್ಲೇ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಲಿದ್ದವು. ಆದರೆ, ಇದೀಗ ಟೊಮೆಟೊ ಬೆಲೆ ಏರಿಕೆಯಾದಂತೆ ಇನ್ನುಳಿದ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು. ಇದರಿಂದ ಹಾಕಿದ ಖರ್ಚಾದರೂ ವಾಪಸ್ ಸಿಗಲಿದೆ. ಇಲ್ಲದಿದ್ದರೆ, ತುಂಬಾ ನಷ್ಟ ಅನುಭವಿಸುತ್ತೇವೆ ಎನ್ನುವ ಮಾತು ರೈತರದ್ದಾಗಿದೆ.












Click it and Unblock the Notifications