ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಪ್ಪು ಜಯಂತಿ: ಕೊಡಗು ಬಂದ್, ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ

|
Google Oneindia Kannada News

ಕೊಡಗು, ನವೆಂಬರ್ 09: ಸರ್ಕಾರ ನಾಳೆ ಆಚರಿಸುತ್ತಿರುವ ಟಿಪ್ಪು ಜಯಂತಿ ವಿರೋಧಿಸಿ ಕೊಡಗಿನಲ್ಲಿ ಬಂದ್ ಕರೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

ಕೊಡಗಿನಲ್ಲಿ ಬಸ್, ಆಟೋ, ಕ್ಯಾಬ್, ಸೇರಿದಂತೆ ಹಲವು ಸಂಘಗಳು ಬಂದ್‌ಗೆ ಪೂರ್ಣ ಬೆಂಬಲ ನೀಡಿವೆ. ಅಲ್ಲದೆ ಬಿಜೆಪಿ ಮತ್ತು ಕೆಲ ಸಂಘಟನೆಗಳು ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ಸಹ ಮಾಡಲಿದ್ದು, ಕಳೆದ ವರ್ಷ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು.

ಟಿಪ್ಪು ಹೆಸರು ಹೇಳಿದರೆ ಮಂಗಳೂರಿನ ಕ್ರೈಸ್ತರ ರಕ್ತ ಕುದಿಯುವುದೇಕೆ?ಟಿಪ್ಪು ಹೆಸರು ಹೇಳಿದರೆ ಮಂಗಳೂರಿನ ಕ್ರೈಸ್ತರ ರಕ್ತ ಕುದಿಯುವುದೇಕೆ?

ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಕಳೆದ ವರ್ಷ ಟಿಪ್ಪು ಜಯಂತಿ ವೇಳೆ ಪ್ರತಿಭಟನೆಯು ಭಾರಿ ಹಿಂಸಾರೂಪಕ್ಕೆ ತಿರುಗಿತ್ತು. ಪರೇಶ್ ಮೆಸ್ತಾ ಸಾವು ಸಹ ಸಂಭವಿಸಿದ್ದನ್ನು ಇಲ್ಲಿ ನೆನೆಯಬಹುದು.

Tipu Jayanthi: Kodagu called for bandh

ಸ್ವಾತಂತ್ರ್ಯ ಯೋಧ ಟಿಪ್ಪು ಸುಲ್ತಾನ್ -ಜಯಂತಿ, ಆಚರಣೆ ಅಗತ್ಯವೇನು?ಸ್ವಾತಂತ್ರ್ಯ ಯೋಧ ಟಿಪ್ಪು ಸುಲ್ತಾನ್ -ಜಯಂತಿ, ಆಚರಣೆ ಅಗತ್ಯವೇನು?

ಇತ್ತ ಶ್ರೀರಂಗಪಟ್ಟಣದಲ್ಲಿ ಇಂದಿನಿಂದಲೇ ನಿಷೇಧಾಜ್ಞೆ ಜಾರಿ ಆಗಿದ್ದು, ನಾಳೆ ಮಧ್ಯಾಹ್ನದ ವರೆಗೂ ನಿಷೇಧಾಜ್ಞೆ ಮುಂದುವರೆಯಲಿದೆ. ಕರಾವಳಿ, ಹಳೆ ಮೈಸೂರಿನ ಜಿಲ್ಲೆಗಳಲ್ಲಿ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

English summary
Tipu jayanti Kodagu called for bandh. police security in coastal districts. Srirangapatana police imposed 144 till tomorrow. BJP protesting against state government all over the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X