Karnataka Rains : ಏಪ್ರಿಲ್ 4ರವರೆಗೆ ಬೆಂಗಳೂರು ಸೇರಿ ಕರ್ನಾಟಕದಲ್ಲಿ ಮಳೆ, ಹವಾಮಾನ ವರದಿ ಹೀಗಿದೆ

ಬೆಂಗಳೂರು ಮಾರ್ಚ್‌ 30: ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಆರ್ಭಟ ಮತ್ತೆ ತೀವ್ರತೆ ಪಡೆದುಕೊಂಡಿದೆ. ವಾರದ ಹಿಂದಷ್ಟೇ ರಾಜ್ಯದ ಅನೇಕ ಕಡೆ ಅಬ್ಬರಿಸಿದ್ದ ಮಳೆ ಇದೀಗ ಮತ್ತೆ ರಾಜ್ಯಕ್ಕೆ ಲಗ್ಗೆ ಇಟ್ಟಿದೆ. ಮುಂದಿನ ಐದು ವಿವಿಧೆಡೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಳೆ ಮಾರ್ಚ್‌ 31 ಶುಕ್ರವಾರದಿಂದ ಐದು ದಿನ ಏಪ್ರಿಲ್ 04 ರವರೆಗೆ ಗುಡುಗು, ಗಾಳಿ, ಮಿಂಚು ಸಹಿತ ಮಳೆ ಸುರಿಯಲಿದೆ. ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆ ಸಹ ಬರುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಇದೆ.

Thunderstorm-rain will expect next 5 days in south interior karnataka

ಕರ್ನಾಟಕದ ದಕ್ಷಿಣ ಒಳನಾಡು ಭಾಗವು 16 ಜಿಲ್ಲೆಗಳನ್ನು ಒಳಗೊಂಡಿದೆ. ಆ ಪೈಕಿ ಬಳ್ಳಾರಿಯಲ್ಲಿ ಮತ್ತು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಒಣಹವೆ ಮುಂದುವರಿಯಲಿದೆ. ಇಲ್ಲಿ ಯಾವುದೇ ಮಳೆ ಸಂಭವ ಇಲ್ಲ ಎನ್ನಲಾಗಿದೆ.

ಇಷ್ಟು ಜಿಲ್ಲೆ ಹೊರತುಪಡಿಸಿ ಈ ಭಾಗದ ''ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು'' ಜಿಲ್ಲೆಗಳ ಹಲವೆಡೆ ಹಗುರು ಇಲ್ಲವೇ ಸಾಧಾರಣ ಮಳೆ ಆಗುವ ನಿರೀಕ್ಷೆ ಇದೆ. ಈ ವೇಳೆ ಗಾಳಿಯ ವೇಗ ಹೆಚ್ಚಿರಲಿದೆ.

ಉತ್ತರ ಒಳನಾಡು-ಕರಾವಳಿ ಮುನ್ಸೂಚನೆ ಏನು?

ಬೆಳಗ್ಗೆ ಸಂಜೆವರೆಗೂ ಒಣಹವೆ ರೀತಿಯ ವಾತಾವರಣ ಕಂಡು ಬರಲಿದೆ. ಮಧ್ಯಾಹ್ನ ಜೋರು ಬಿಸಿಲು ದಾಖಲಾದರೂ, ಕ್ರಮೇಣ ಅದು ಸಂಜೆಯಾದಂತೆ ಕಡಿಮೆಯಾಗುತ್ತದೆ. ನಂತರ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಮಳೆ ಆರಂಭವಾಗುತ್ತದೆ. ಈ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿನ ಗರಿಷ್ಠ ತಾಪಮಾನದಲ್ಲಿ ತುಸು ಇಳಿಕೆ ಆಗಲಿದೆ. ಹವಾಮಾನ ದಲ್ಲಿನ ಅಕಾಲಿಕ ವೈಪರಿತ್ಯಗಳ ಪರಿಣಾಮ ಪೂರ್ವ ಮುಂಗಾರು ಅವಧಿಗೂ ಮುನ್ನವೇ ಚುರುಕಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆ ಮಳೆ ಬರುವ ಸಂಭವವಿದೆ. ಇದರ ಹೊರತಾಗಿ ಬೆರೆಲ್ಲೂ ಮಳೆ ಸಂಭವವಿಲ್ಲ. ಈ ಎರಡು ಭಾಗಗಳ ಜಿಲ್ಲೆಗಳ ಪ್ರದೇಶಗಳಲ್ಲಿ ಒಣ ಹವೆ, ಬಿರು ಬಿಸಲಿನ ವಾತಾವರಣವೇ ಮುಂದುವರಿಯಲಿದೆ.

Thunderstorm-rain will expect next 5 days in south interior karnataka

ಕಲಬುರಗಿ-ರಾಯಚೂರಿನಲ್ಲಿ ಅತ್ಯಧಿಕ ಉಷ್ಣಾಂಶ

ಗುರುವಾರ ಕರ್ನಾಟಕ ರಾಜ್ಯದ ಗರಿಷ್ಠ ತಾಪಮಾನ ಕಲಬುರಗಿ, ರಾಯಚೂರಲ್ಲಿ 39.7 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ತಾಪಮಾನ ದಾಖಲಾಗಿದೆ. ಉಳಿದಂತೆ ಬಳ್ಳಾರಿಯಲ್ಲಿ 38 ಡಿಗ್ರಿ ಸೆಲ್ಸಿಯಸ್, ಗದಗಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ರಾಜ್ಯದ ಕನಿಷ್ಠ ಉಷ್ಣಾಂಶ ಬಾಗಲಕೋಟೆ, ಧಾರವಾಡ, ಬೆಂಗಳೂರು ನಗರ, ಹಾವೇರಿ ಭಾಗದ ಪ್ರದೇಶಗಳಲ್ಲಿ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.

ಬೆಂಗಳೂರಿನ ಮಳೆ ನಿರೀಕ್ಷೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದಿನ ಐದು ದಿನಗಳವರೆಗೆ (ಏಪ್ರಿಲ್ 2ರವರೆಗೆ) ಸಂಜೆ ನಂತರ ಮಳೆ ಬರುವ ಮುನ್ಸೂಚನೆ ಇದೆ. ಇಲ್ಲಿ ಪ್ರತಿ ನಿತ್ಯವು ಮಳೆಯ ಆಗಮಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಅಂದರೆ ದಿನ ಬಿಟ್ಟು ದಿನ ಮಳೆ ಆಗುವ ಲಕ್ಷಣಗಳು ಇವೆ. ನಗರದ ಹಲವು ಕಡೆಗಳಲ್ಲಿ ತುಂತುರು ಇಲ್ಲವೇ ಗುಡುಗು ಗಾಳಿ ಸಹಿತ ಜೋರು ಮಳೆ ಆಗಮಿಸುವ ಸಾಧ್ಯತೆ ಇದೆ.

ಏಪ್ರಿಲ್ 05 ಬುಧವಾರದವರೆಗೆ ಬೆಂಗಳೂರಿನಲ್ಲಿ ತಾಪಮಾನವು ಗರಿಷ್ಠ 33ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+