ಸರ್ಕಾರಿ ಮೆಡಿಕಲ್‌ ಸೀಟು ಶುಲ್ಕ ಮೂರು ಪಟ್ಟು ಹೆಚ್ಚಳ

ಬೆಂಗಳೂರು, ಜು.10: ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕ ಹೆಚ್ಚಳದ ಬೆನ್ನಲ್ಲೇ ಸದ್ದಿಲ್ಲದೆ ಸರ್ಕಾರಿ ವೈದ್ಯಕೀಯ ಸೀಟಿನ ಶುಲ್ಕವನ್ನೂ ಮೂರು ಪಟ್ಟು ಏರಿಸಲಾಗಿದೆ.

ಇದರಿಂದಾಗಿ ಸರ್ಕಾರಿ ಕೋಟಾದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೀಟು ಸಿಕ್ಕರೂ ಪ್ರವೇಶ ಪಡೆಯುವುದು ಸುಲಭದ ಮಾತಲ್ಲ, ಈ ಹಿಂದೆ ಸರ್ಕಾರಿ ವೈದ್ಯ ಸೀಟು ಸಿಕ್ಕರೆ ಕೇವಲ 80 ಸಾವಿರ ರೂ. ಶುಲ್ಕ ಭರಿಸಿಮ ಪದವಿ ಪೂರ್ಣಗೊಳಿಸಬಹುದಾಗಿತ್ತು. ಆದರೆ, ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ ಈ ವರ್ಷದಿಂದ ಸರ್ಕಾರಿ ಸೀಟುಗಳ ಶಲ್ಕವನ್ನು 16,700ರಿಂದ 50 ಸಾವಿರ ರೂ.ಗಳಿಗೆ ಏರಿಸಿದೆ.

ಹಾಗಾಗಿ ಪದವಿ ಮುಗಿಯುವವರೆಗೆ 2 ಲಕ್ಷ ರೂ. ಶುಲ್ಕ ಭರಿಸಬೇಕಿದೆ. ಶುಲ್ಕದ ವಸತಿ ನಿಲಯ ಇತರೆ ಖರ್ಚುಗಳನ್ನು ಸೇರಿಸಿದರೆ ಐದಾರು ಲಕ್ಷ ರೂ ಬೇಕಾಗುತ್ತದೆ, ಖಾಸಗಿ ಕಾಲೇಜುಗಳಿಗೆ ಕಡಿಮೆ ಶುಲ್ಕ ವಿಧಿಸಿ ಎಂದು ಹೇಳುವ ಸರ್ಕಾರವೇ ಈ ರೀತಿ ಮಾಡಿದರೆ ವಿದ್ಯಾರ್ಥಿಗಳು ಎಲ್ಲಿ ಹೋಗಬೇಕು ಎಂಬುದರ ಕುರಿತು ಚರ್ಚೆ ನಡೆದಿದೆ.

Three times increase in medical fees of govt quota

ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ 48 ವೈದ್ಯ ಮತ್ತು 38 ದಂತವೈದ್ಯ ಕಾಲೇಜುಗಳಿವೆ, ವೈದ್ಯಕೀಯದಲ್ಲಿ ಒಟ್ಟು 5920 ಸೀಟುಗಳಲ್ಲಿ 3390 ಸರ್ಕಾರಿ ಸೀಟುಗಳಾಗಿವೆ. ವೈದ್ಯಕೀಯದಲ್ಲಿ ಒಟ್ಟು 2754 ಸೀಟುಗಳಲ್ಲಿ 928 ಸರ್ಕಾರಿ ಸೀಟುಗಳಾಗಿವೆ.

ಖಾಸಗಿ ಕಾಲೇಜಿನಲ್ಲಿ ಸರ್ಕಾರ ಸೀಟಿನ ಶುಲ್ಕ 97,350 ರೂ.ಗಳಾಗಿವೆ. ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ವೈದ್ಯ ಸೀಟು ಸಿಕ್ಕರೂ ನಾಲ್ಕೂವರೆ ವರ್ಷಗಳಲ್ಲಿ 4 ಲಕ್ಷಕ್ಕೂ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+