ಕಾವೇರಿ ನದಿಯಲ್ಲಿ ಮುಳುಗಿ ಅಪ್ಪ-ಮಕ್ಕಳ ಸಾವು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ, ಏಪ್ರಿಲ್ 28 : ಪ್ರವಾಸಕ್ಕೆ ಬಂದಿದ್ದ ಕುಟುಂಬವೊಂದು ಮಳವಳ್ಳಿ ತಾಲೂಕಿನ ಮುತ್ತತ್ತಿ ಸಮೀಪದ ಕಾವೇರಿನದಿಯಲ್ಲಿ ಆಡಲು ಹೋಗಿ ನೀರು ಪಾಲಾದ ಘಟನೆ ನಡೆದಿದೆ. ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತಪಟ್ಟವರನ್ನು ರಾಮನಗರ ಜಿಲ್ಲೆ ಕನಕಪುರ ತಾಲೂಕು ಹನುಮನಹಳ್ಳಿಯ ರಾಘವೇಂದ್ರ (45), ಅವರ ಪುತ್ರ ಬಾಲಾಜಿ (12) ಹಾಗೂ ರಾಘವೇಂದ್ರ ಅವರ ನಾದಿನಿಯ ಮಗಳು ಪ್ರೇರಣಾ (14) ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ರಾಘವೇಂದ್ರ ಅವರ ಪತ್ನಿ ಪೂರ್ಣಿಮಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. [ಕನ್ನಡಿಗರ ಜೀವನಾಡಿ ಕಾವೇರಿ ತಾಯಿಗೆ 50ನೇ ಮಹಾಆರತಿ]

cauvery

ಬುಧವಾರ ಮುತ್ತತ್ತಿಯ ಪ್ರವಾಸಕ್ಕೆಂದು ತಮ್ಮ ಸಂಬಂಧಿಕರ ಜೊತೆ ಬಂದಿದ್ದ ರಾಘವೇಂದ್ರ ಕುಟುಂಬವು ಶ್ರೀ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಕಾವೇರಿ ನದಿಯ ವೀಕ್ಷಣೆಗೆ ಹೋಗಿದೆ. ಈ ಸಂದರ್ಭದಲ್ಲಿ ಬಿಸಿಲ ಜಳ ತಾಳಲಾರದೆ ನೀರಲ್ಲಿ ಮುಳುಗಲೆಂದು ರಾಘವೇಂದ್ರ, ಪುತ್ರ ಬಾಲಾಜಿ, ಪ್ರೇರಣಾ ಸೇರಿದಂತೆ ಇನ್ನೂ ಹಲವರು ಕಾವೇರಿ ನದಿಗೆ ಇಳಿದಿದ್ದಾರೆ. [ಸದ್ಯದಲ್ಲೇ ಮೈಸೂರಿನಲ್ಲಿ ಕಾವೇರಿ ನದಿ ಗ್ಯಾಲರಿ]

ನೀರಿನಲ್ಲಿ ಮುಳುಗುತ್ತಿರುವಾಗ ರಾಘವೇಂದ್ರ, ಬಾಲಾಜಿ, ಪ್ರೇರಣಾ ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಪ್ರೇರಣಾಳ ಶವವು ದೊರೆತಿದ್ದು, ರಾಘವೇಂದ್ರ ಹಾಗೂ ಬಾಲಾಜಿಯ ಶವಗಳು ದೊರಕಿಲ್ಲ. ಕತ್ತಲಾದ್ದರಿಂದ ಗುರುವಾರ ಶವಗಳ ಶೋಧ ಕಾರ್ಯ ನಡೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ramanagara based Ragavendra and two others drowned in the Cauvery river near Muttatti, Mandya on April 27, 216.
Please Wait while comments are loading...