ಆಡಳಿತ ವೆಚ್ಚ ಕಡಿತ; 3 ಇಲಾಖೆಗಳ ವಿಲೀನ ಪ್ರಕ್ರಿಯೆ ಆರಂಭ
ಬೆಂಗಳೂರು, ಆಗಸ್ಟ್ 28: ಆಡಳಿತದ ವೆಚ್ಚವನ್ನು ಕಡಿಮೆ ಮಾಡಲು ಕರ್ನಾಟಕ ಸರ್ಕಾರ ಕೆಲವು ಇಲಾಖೆಗಳನ್ನು ವಿಲೀನಗೊಳಿಸಲು ತೀರ್ಮಾನಿಸಿತ್ತು. ಮೂರು ಇಲಾಖೆಗಳ ವಿಲೀನಕ್ಕೆ ಈಗಾಗಲೇ ಪ್ರಸ್ತಾಪ ಸಿದ್ಧಪಡಿಸಲಾಗಿದೆ.
Recommended Video
ಕರ್ನಾಟಕ ಸರ್ಕಾರ ಯಾವ-ಯಾವ ಇಲಾಖೆಗಳನ್ನು ವಿಲೀನಗೊಳಿಸಬಹುದು ಎಂಬುದನ್ನು ತೀರ್ಮಾನಿಸಲು ಸಂಪುಟ ಉಪಸಮಿತಿ ರಚನೆ ಮಾಡಿತ್ತು. ಕಂದಾಯ ಸಚಿವ ಆರ್. ಅಶೋಕ ಅಧ್ಯಕ್ಷತೆಯ ಸಮಿತಿ ಈ ಕುರಿತು ವರದಿ ಸಿದ್ಧಪಡಿಸಿತ್ತು.
ಈಗ ಮೂರು ಇಲಾಖೆಗಳನ್ನು ವಿಲೀನಗೊಳಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಇದನ್ನು ಮಂಡನೆ ಮಾಡಲಾಗುತ್ತದೆ. ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ ಬಳಿಕ ವಿಲೀನ ಪ್ರಕ್ರಿಯೆ ಆರಂಭವಾಗಲಿದೆ.

ಯಾವ-ಯಾವ ಇಲಾಖೆ?: ಕನ್ನಡ ಮತ್ತು ಸಂಸ್ಕೃತಿ, ಕ್ರೀಡೆ ಮತ್ತು ಯುವಜನ ಸೇವೆ ಮತ್ತು ಪ್ರವಾಸೋದ್ಯಮ ಇಲಾಖೆಗಳನ್ನು ವಿಲೀನಗೊಳಿಸುವ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಪ್ರಸ್ತುತ ಈ ಮೂರು ಇಲಾಖೆಗಳಿಗೆ ಚಿಕ್ಕಮಗಳೂರು ಶಾಶಕ ಸಿ. ಟಿ. ರವಿ ಸಚಿವರಾಗಿದ್ದಾರೆ.
"ಮೂರು ಇಲಾಖೆಗಳ ಕಾರ್ಯಗಳು ಸಾಮಾನ್ಯವಾಗಿವೆ. ವಿಲೀನ ಪ್ರಕ್ರಿಯೆನ್ನು ಆರಂಭಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ ಬಳಿಕ ವಿಲೀನ ಪ್ರಕ್ರಿಯೆ ಅಂತಿಮವಾಗಲಿದೆ" ಎಂದು ಸಚಿವ ಸಿ. ಟಿ. ರವಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ವಿವಿಧ ಇಲಾಖೆಗಳನ್ನು ವಿಲೀನಗೊಳಿಸಿ ಆಡಳಿತಾತ್ಮಕ ಖರ್ಚುಗಳನ್ನು ಕಡಿಮೆಗೊಳಿಸುವ ಪ್ರಸ್ತಾಪ ಕೇಳಿ ಬಂದಿತು. ಈಗ ಅಧಿಕೃತವಾಗಿ ಈ ವಿಲೀನ ಪ್ರಕ್ರಿಯೆ ಜಾರಿಗೆ ಬರಲಿದೆ.












Click it and Unblock the Notifications