ರಾಘವೇಶ್ವರ ಶ್ರೀ ಪರ ಹೇಳಿಕೆ ನೀಡದಂತೆ ಬೆದರಿಕೆ ಕರೆ

Posted By:
Subscribe to Oneindia Kannada

ಚಿಕ್ಕಮಗಳೂರು, ಅ.25 : ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಪರವಾಗಿ ಹೇಳಿಕೆ ನೀಡದಂತೆ ಮಹಿಳೆಯೊಬ್ಬರು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತ ಭೀಮೇಶ್ವರ ಜೋಶಿ ಅವರಿಗೆ ಬೆದರಿಕೆ ಕರೆ ಮಾಡಿದ್ದಾರೆ. ಈ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶುಕ್ರವಾರ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿರುವ ಭೀಮೇಶ್ವರ ಜೋಶಿ ಅವರ ಕಚೇರಿಗೆ ಈ ಬೆದರಿಕೆ ಕರೆ ಬಂದಿದೆ. ದೇವಾಲಯದ ಸಿಬ್ಬಂದಿ ಸತೀಶ್ ಎನ್ನುವವರು ಕರೆ ಸ್ವೀಕರಿಸಿದ್ದು, ಧರ್ಮಕರ್ತರಿಗೆ ರಾಘವೇಶ್ವರ ಶ್ರೀಗಳ ಪರವಾಗಿ ಹೇಳಿಕೆ ನೀಡದಂತೆ ಸೂಚಿಸಿ ಎಂದು ಮಹಿಳೆ ಸತೀಶ್ ಅವರಿಗೆ ಹೇಳಿದ್ದಾರೆ.

Ramachandrapura Math

ಶನಿವಾರ ಬೆದರಿಕೆ ಕರೆ ಕುರಿತು ದೇವಾಲಯದ ಸಿಬ್ಬಂದಿ ಸತೀಶ್ ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ ಒಂದು ಬಾರಿ ಮಾತ್ರ ಈ ಕರೆ ಬಂದಿತ್ತು. ಮಹಿಳೆ ಮಾತನಾಡಿದರು ಎಂದು ದೂರಿನಲ್ಲಿ ಸತೀಶ್ ಪೊಲೀಸರಿಗೆ ಹೇಳಿದ್ದಾರೆ. ಕಳಸ ಪೊಲೀಸರು ದೂರು ದಾಖಲಸಿಕೊಂಡು ತನಿಖೆ ಆರಂಭಿಸಿದ್ದಾರೆ. [ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ತಡೆ]

ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಘವೇಶ್ವರ ಶ್ರೀಗಳು ಐದು ದಿನ ಸಿಐಡಿ ವಿಚಾರಣೆ ಎದುರಿಸಿದ್ದು, ದೀಪಾವಳಿ ಮುಗಿದ ನಂತರ ವಿಚಾರಣೆಗೆ ಮತ್ತೆ ಹಾಜರಾಗಲಿದ್ದಾರೆ. ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ವೈದ್ಯಕೀಯ ಪರೀಕ್ಷೆ ನಡೆಸಲು ಸಿಐಡಿ ನೀಡಿದ್ದ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. [ಶ್ರೀ ಬೆಂಬಲಕ್ಕೆ ನಿಂತ ರಾಮಕಥಾ ಕಲಾವಿದರು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dont support Ramachandrapura Mutt Raghaveshwara Bharati Swamiji, Bheemeshwara Joshi Dharmakartaru of Annapoorneshwari temple Horanadu, Karnataka received threatening phone call form a woman. Complaint field in Kalasa police station.
Please Wait while comments are loading...