‘ಮಿಸ್ಟರ್ ಒ.ಟಿ. ರವಿಯವರೇ ಈಗ ಹೇಳಿ ಯಾರು ತಾಲಿಬಾನ್ ಪರ?’
ಸಿ.ಟಿ. ರವಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಪದೇ ಪದೇ ಮಾತಿನ ಕಾಳಗ ನಡೆಯುತ್ತಿದ್ದು, ಈ ಮೂಲಕ ಸಿ.ಟಿ. ರವಿ ಸೇರಿ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಹೀಗಿದ್ದಾಗ ಸಿ.ಟಿ. ರವಿ ಈ ಹಿಂದೆ ತಾವೇ ನೀಡಿದ್ದ ಹೇಳಿಕೆ ಇದೀಗ ಅವರಿಗೇ ದೊಡ್ಡ ತೊಡಕಾಗಿದ್ದು, ಸಿ.ಟಿ. ರವಿ ಹೇಳಿಕೆ ಮುಂದೆ ಇಟ್ಟುಕೊಂಡು ತಾಲಿಬಾನ್ ಅಸ್ತ್ರ ಪ್ರಯೋಗ ಮಾಡಿದೆ ಕೈಪಡೆ. ಇದೇ ಸಮಯದಲ್ಲಿ, 'ಮಿಸ್ಟರ್ ಒ.ಟಿ. ರವಿಯವರೇ ಈಗ ಹೇಳಿ ಯಾರು ತಾಲಿಬಾನ್ ಪರ?' ಅಂತಾ ಪ್ರಶ್ನೆ ಕೇಳ್ತಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ!
ಹೌದು, ತಾಲಿಬಾನ್ ಆಡಳಿತದ ವಿಚಾರವಾಗಿ ದೊಡ್ಡ ಚರ್ಚೆಗಳು ಪದೇ ಪದೇ ನಡೆಯುತ್ತಲೇ ಇದೆ. ಅದರಲ್ಲೂ ಕಾಂಗ್ರೆಸ್ ಆಡಳಿತವನ್ನು ಬಿಜೆಪಿ ನಾಯಕರು ಯಾವಾಗಲೂ ತಾಲಿಬಾನ್‌ಗೆ ಹೋಲಿಕೆ ಮಾಡಿ ಕೌಂಟರ್ ಕೊಡುತ್ತಿದ್ದರು. ಆದರೆ ಇದೀಗ ತಾಲಿಬಾನ್ ನಾಯಕರು ಭಾರತಕ್ಕೆ ಬಂದು, ಭಾರತೀಯ ವಿದೇಶಾಂಗ ಸಚಿವರ ಜೊತೆಗೆ ಓಡಾಡುತ್ತಾ ಭಾಷಣ ಮಾಡುತ್ತಿರುವ ವಿಡಿಯೋ ಇಟ್ಟುಕೊಂಡು ಭಾರಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

'ಮಿಸ್ಟರ್ ಒ.ಟಿ. ರವಿಯವರೇ...'
ಅಂದಹಾಗೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ತಾಲಿಬಾನಿಗಳು ಅಂತಾ ಪದೇ ಪದೇ ಹೇಳುತ್ತಾ ಇದ್ದರು ಸಿ.ಟಿ. ರವಿ ಅವರು. ಆದರೆ ಇದೀಗ ಸ್ವತಃ ತಾಲಿಬಾನ್ ನಾಯಕರಿಗೆ ಭಾರತದಲ್ಲಿ ಭವ್ಯ ಸ್ವಾಗತವೇ ಸಿಕ್ಕಿದ್ದು, ಸಾಲು ಸಾಲು ಕಾರ್ಯಕ್ರಮದಲ್ಲಿ ಕೂಡ ಭಾವಹಿಸಿದ್ದಾರೆ. ಇಷ್ಟೆಲ್ಲದರ ನಡುವೆ 'ಮಿಸ್ಟರ್ ಒ.ಟಿ. ರವಿಯವರೇ ಈಗ ಹೇಳಿ ಯಾರು ತಾಲಿಬಾನ್ ಪರ?' ಅಂತಾ ಪ್ರಶ್ನೆ ಕೇಳ್ತಿದ್ದಾರೆ ನೆಟ್ಟಿಗರು. ರವಿ ಅವರ ಹಳೆಯ ವಿಡಿಯೋ ಜೊತೆಗೆ ಇದನ್ನು ಕಂಪೇರ್ ಮಾಡುತ್ತಿದ್ದಾರೆ. ಈ ಮೂಲಕ ಸಿಟಿ ರವಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸವಾಲು ಎದುರಾಗಿದೆ.
ಒಟ್ನಲ್ಲಿ ಮತ್ತೆ ಸೋಷಿಯಲ್ ಮೀಡಿಯಾ ವಾರ್ ಜೋರಾಗಿದ್ದು, ಅದರಲ್ಲೂ ಕರ್ನಾಟಕದ ರಾಜಕೀಯದಲ್ಲಿ ಇದೀಗ ತಾಲಿಬಾನ್ ವಿಚಾರ ಕೂಡ ಪ್ರಸ್ತಾಪ ಆಗುತ್ತಿದೆ. ಹಾಗೇ ತಾಲಿಬಾನ್ ನಾಯಕರಿಗೆ ಅದ್ಧೂರಿಯಾಗಿ ಸ್ವಾಗತ ಸಿಕ್ಕ ಬಗ್ಗೆ ಅಸ್ತ್ರ ಮಾಡಿಕೊಂಡು ಕಾಂಗ್ರೆಸ್ ನಾಯಕರು ಇದೀಗ ಬಿಜೆಪಿ ನಾಯಕರಿಗೆ ಪ್ರಶ್ನೆ ಕೇಳುತ್ತಿದ್ದಾರೆ. ಮತ್ತೊಂದು ಕಡೆ ಈ ಹಿಂದೆ ಬಿಜೆಪಿ ನಾಯಕರು ತಾಲಿಬಾನ್ ವಿರುದ್ಧ ನೀಡಿದ್ದ ಹೇಳಿಕೆಯ ವಿಡಿಯೋ ಕೂಡ ವೈರಲ್ ಮಾಡಿ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ ಕರ್ನಾಟಕದ ಕಾಂಗ್ರೆಸ್ ನಾಯಕರು.












Click it and Unblock the Notifications