‘ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಂಡಿರಿ, ನಂತರ ಮೂಲೆಗುಂಪು ಮಾಡಿದಿರಿ...’
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿಚಾರ ಮತ್ತೆ ಮತ್ತೆ ಮುನ್ನೆಲೆಗೆ ಬಂದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತಿನ ಯುದ್ಧಕ್ಕೆ ವೇದಿಕೆ ಒದಗಿಸುತ್ತಿದೆ. ಅದರಲ್ಲೂ, ಕಾಂಗ್ರೆಸ್ ಒಳಗೆ ಆಂತರಿಕ ಕಚ್ಚಾಟ ಜೋರಾಗಿದೆ ಎಂದು ಕಮಲ ಪಾಳಯ ಆರೋಪವನ್ನ ಮಾಡುವಾಗ, ಕರ್ನಾಟಕ ಕಾಂಗ್ರೆಸ್ ಘಟಕ ಕೂಡ ಹೊಸ ಆರೋಪದ ಬಾಂಬ್ ಸಿಡಿಸಿದೆ!
ಅಂದಹಾಗೆ 2023ರ ಚುನಾವಣೆಯಲ್ಲಿ ಬಿಜೆಪಿ ಒಳಗಿನ ಸಮಸ್ಯೆಗಳನ್ನೇ ಹೈಲೈಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅದರ ಬಗ್ಗೆ ಚರ್ಚೆ ಮಾಡುತ್ತಲೇ ಕಾಂಗ್ರೆಸ್ ಗಮನವನ್ನು ಸೆಳೆದಿತ್ತು. ಹಾಗೇ ಕಾಂಗ್ರೆಸ್ ವಿಚಾರವನ್ನು ಹೈಲೈಟ್ ಮಾಡುತ್ತಾ ಬಿಜೆಪಿ ಗಮನ ಸೆಳೆದು, ಸೋಷಿಯಲ್ ಮೀಡಿಯಾ ಬಳಕೆದಾರರನ್ನು ಬ್ಯುಸಿಯಾಗಿ ಇಟ್ಟಿತ್ತು. ಆದರೆ ಹೀಗೆ ಕೆಲವು ತಿಂಗಳ ಹಿಂದೆ ಶುರುವಾದ ಕಾಂಗ್ರೆಸ್ & ಬಿಜೆಪಿ ಸೋಷಿಯಲ್ ಮೀಡಿಯಾ ವಾರ್ ಇನ್ನೂ ಕೊನೆಯಾಗಿಲ್ಲ. ಹೀಗಿದ್ದಾಗ ಕಾಂಗ್ರೆಸ್, ಮಾಜಿ ಸಿಎಂ ಯಡಿಯೂರಪ್ಪ ಅವರ ಹೆಸರನ್ನು ಮತ್ತೆ ಪ್ರಸ್ತಾಪ ಮಾಡಿ ಬಿಜೆಪಿ ವಿರುದ್ಧ ಗುಡುಗಿದೆ.

'ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನವನ್ನು...'
ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಅವರ ಹೆಸರನ್ನು ಮತ್ತೆ ಪ್ರಸ್ತಾಪ ಮಾಡಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'Dear @BJP4Karnataka, ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಂಡಿರಿ, ನಂತರ ಮೂಲೆಗುಂಪು ಮಾಡಿದಿರಿ. ಯಡಿಯೂರಪ್ಪನವರಿಗೆ ಟಿಕೆಟ್ ಕೂಡ ನೀಡದೆ ವಂಚಿಸಿದಿರಿ. ಈಗ BSY ಅವರು ಶಾಸಕರಲ್ಲ, ವಿಪಕ್ಷ ನಾಯಕನಾಗುವ ಅವಕಾಶವಿಲ್ಲ, ಸದನದ ಕಲಾಪಕ್ಕೆ ಬಾಗವಹಿಸುವಂತೆಯೂ ಇಲ್ಲ. ಅವರ ಎಲ್ಲಾ ಅವಕಾಶವನ್ನು, ನಾಯಕತ್ವವನ್ನು ಕಿತ್ತುಕೊಂಡು ಸರ್ಕಾರದ ವಿರುದ್ಧ ಮಾತನಾಡಲು ಮಾತ್ರ ಬಳಸಿಕೊಳ್ಳುತ್ತಿರುವುದು ಹಲ್ಲಿಲ್ಲದ ಹಾವು ಬುಸುಗುಡುವಂತೆಯೇ ಸರಿ!!' ಎಂದು ಆರೋಪ ಮಾಡಿದೆ. ಈ ಟ್ವೀಟ್ ಇದೀಗ ಬಿಜೆಪಿ & ಕಾಂಗ್ರೆಸ್ ನಾಯಕರ ನಡುವೆ ಕಿಚ್ಚು ಹೊತ್ತಿಸಿದೆ.
Dear @BJP4Karnataka ,
— Karnataka Congress (@INCKarnataka) November 2, 2023
ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಂಡಿರಿ, ನಂತರ ಮೂಲೆಗುಂಪು ಮಾಡಿದಿರಿ.
ಯಡಿಯೂರಪ್ಪನವರಿಗೆ ಟಿಕೆಟ್ ಕೂಡ ನೀಡದೆ ವಂಚಿಸಿದಿರಿ.
ಈಗ BSY ಅವರು ಶಾಸಕರಲ್ಲ, ವಿಪಕ್ಷ ನಾಯಕನಾಗುವ ಅವಕಾಶವಿಲ್ಲ, ಸದನದ ಕಲಾಪಕ್ಕೆ ಬಾಗವಹಿಸುವಂತೆಯೂ ಇಲ್ಲ.
ಅವರ ಎಲ್ಲಾ ಅವಕಾಶವನ್ನು, ನಾಯಕತ್ವವನ್ನು ಕಿತ್ತುಕೊಂಡು…
'BSY ಕಣ್ಣೀರಿಗೆ ಬೆಲೆ ಕೊಡದ ಬಿಜೆಪಿಗೆ..'
ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಸರ್ಕಾರದ ವಿರುದ್ಧ ಯಡಿಯೂರಪ್ಪನವರ ಕೈಯ್ಯಲ್ಲಿ ಪತ್ರಿಕಾಗೋಷ್ಠಿ ಮಾಡಿಸಿದ @BJP4Karnataka ಗೆ ಒಬ್ಬ ವಿರೋಧ ಪಕ್ಷದ ನಾಯಕನ ಗತಿ ಇಲ್ಲದೆ ಹೋಗಿದ್ದು ಶೋಚನೀಯ. ಅಂದು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಬೇಡವಾಗಿದ್ದ BSY ಈಗ ಪತ್ರಿಕಾಗೋಷ್ಠಿ ನಡೆಸಲು ಬೇಕಾದರೆ? BSY ಕಣ್ಣೀರಿಗೆ ಬೆಲೆ ಕೊಡದ ಬಿಜೆಪಿಗೆ ಈಗ ಅವರ ಆಶ್ರಯ ಬೇಕಾಯ್ತೆ? ಈ ಆಶ್ರಯ ಕೇವಲ ಪತ್ರಿಕಾಗೋಷ್ಠಿಗೆ ಮಾತ್ರ ಸೀಮಿತವೇ? ಹೈಕಮಾಂಡ್ ನಾಯಕರು BSYರನ್ನು ಅವಮಾನಿಸಿದಾಗ ತುಟಿ ಬಿಚ್ಚದ ಬಿಜೆಪಿ ಈಗ ಸರ್ಕಾರದ ವಿರುದ್ಧ ಮಾತನಾಡಿಸಲು ಮಾತ್ರ ಅಗತ್ಯ ಬಿದ್ದರೆ?' ಎಂದು ಪ್ರಶ್ನೆ ಮಾಡಿದೆ ಕರ್ನಾಟಕ ಕಾಂಗ್ರೆಸ್ ಘಟಕ.
ಸರ್ಕಾರದ ವಿರುದ್ಧ ಯಡಿಯೂರಪ್ಪನವರ ಕೈಯ್ಯಲ್ಲಿ ಪತ್ರಿಕಾಗೋಷ್ಠಿ ಮಾಡಿಸಿದ @BJP4Karnataka ಗೆ ಒಬ್ಬ ವಿರೋಧ ಪಕ್ಷದ ನಾಯಕನ ಗತಿ ಇಲ್ಲದೆ ಹೋಗಿದ್ದು ಶೋಚನೀಯ.
— Karnataka Congress (@INCKarnataka) November 2, 2023
ಅಂದು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಬೇಡವಾಗಿದ್ದ BSY ಈಗ ಪತ್ರಿಕಾಗೋಷ್ಠಿ ನಡೆಸಲು ಬೇಕಾದರೆ?
BSY ಕಣ್ಣೀರಿಗೆ ಬೆಲೆ ಕೊಡದ ಬಿಜೆಪಿಗೆ ಈಗ ಅವರ ಆಶ್ರಯ ಬೇಕಾಯ್ತೆ? ಈ…












Click it and Unblock the Notifications