ಮೇ 4ರ ನಂತರದ ಲಾಕ್ ಡೌನ್: ಮದುವೆ ಸಮಾರಂಭಕ್ಕೆ ಹೊಸ ಮಾರ್ಗಸೂಚಿ
ನವದೆಹಲಿ, ಮೇ 3: ಮೂರನೇ ಹಂತದ ಲಾಕ್ ಡೌನ್ ಅವಧಿಯಲ್ಲಿ (ಮೇ 4-17) ಮದುವೆ ಸಮಾರಂಭ ನಡೆಸಲು ಕೇಂದ್ರ ಸರಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಹಾಗಾಗಿ, ಹತಾಶರಾದವರು, ಸ್ವಲ್ಪ ನಿರಾಳರಾಗುವಂತಾಗಿದೆ.
ಈಗಿರುವ ಮಾರ್ಗಸೂಚಿಗೆ ಸ್ವಲ್ಪ ಬದಲಾವಣೆ ಮಾಡಿರುವ ಕೇಂದ್ರ ಸರಕಾರ, ಮದುವೆ ಸಮಾರಂಭಕ್ಕೆ ಭಾಗವಹಿಸುವವರ ಸಂಖ್ಯೆಯನ್ನು ಈಗಿರುವ ಮಿತಿಗಿಂತ ಹೆಚ್ಚಿಸಿದೆ. ಆದರೆ, ಇದು ಕಂಟೇನ್ಮೆಂಟ್ ವಲಯಕ್ಕೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಸಮಾರಂಭಗಳಲ್ಲಿ ಅಂತರ ಕಾಪಾಡಿಕೊಂಡು ಬರುವುದು ಮತ್ತು ಮಾಸ್ಕ್ ಧರಿಸುವುದನ್ನು ಖಡ್ಡಾಯ ಮಾಡಿರುವ ಕೇಂದ್ರ ಸರಕಾರ, ಐವತ್ತು ಜನರು , ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಹೇಳಿದೆ.

ನೂತನ ಮಾರ್ಗಸೂಚಿಯಲ್ಲಿ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಇಪ್ಪತ್ತು ಜನರಿಗಷ್ಟೇ ಸೀಮಿತಗೊಳಿಸಿದೆ. ಹಿಂದಿನ ಗೈಡ್ಲೈನ್ ನಲ್ಲೂ ಇದು ಅಷ್ಟೇ ಇತ್ತು.
ವಧುವರ ಇಬ್ಬರೂ ಒಂದೇ ಪ್ರದೇಶದಲ್ಲಿ ಇದ್ದರೆ ಮಾತ್ರ, ಮದುವೆ ನಡೆಯಲು ಸಾಧ್ಯ. ಯಾಕೆಂದರೆ, ಯಾವುದೇ ವಲಯವಿರಲಿ, ಅಂತರ ಜಿಲ್ಲಾ/ರಾಜ್ಯ ಪ್ರಯಾಣಕ್ಕೆ ಇರುವ ನಿರ್ಬಂಧ ಇನ್ನೂ ಸಡಿಲವಾಗಿಲ್ಲ.
ಐವತ್ತು ಜನರಿಗೆ ಸೀಮಿತಗೊಳಿಸಿ ಮದುವೆ ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದರೂ, ಜಿಲ್ಲಾಡಳಿತ/ಸಂಬಂಧ ಪಟ್ಟ ಪೊಲೀಸ್ ಠಾಣೆಗೆ, ಮುಂಚಿತವಾಗಿ ಮಾಹಿತಿ ನೀಡಿ ಅನುಮತಿ ಪಡೆಯಬೇಕಾಗಿದೆ.












Click it and Unblock the Notifications