ಆ 5 ರಿಂದ ರಾಜ್ಯದಲ್ಲಿ ಮತ್ತೆ ಚುರುಕಾಗಲಿದೆ ಮುಂಗಾರು
ಬೆಂಗಳೂರು, ಆಗಸ್ಟ್ 4: ಜುಲೈ ಮುಗಿದರೂ ಹೇಳಿಕೊಳ್ಳುವಂಥ ಮಳೆ ಇಲ್ಲದೆ ತತ್ತರಿಸಿರುವ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ದಕ್ಷಿಣ ಕನ್ನದ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಭಾಗಗಳಲ್ಲಿ ಮತ್ತು ಚಿಕ್ಕಮಗಳೂರು, ಕೊಡಗು, ಶಿವಮೊಗ್ಗೆ ಸೇರಿದಂತೆ ಮಲೆನಾಡು, ಅರೆಮಲೆನಾಡು ಭಾಗಗಳಲ್ಲಿ ನಾಳೆಯಿಂದ(ಆಗಸ್ಟ್ 5) ಮೂರು ದಿನ ಉತ್ತಮ ಮಳೆಯಾಗಲಿದೆ.
ಜೊತೆಗೆ ಬೆಂಗಳೂರು, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ದಾವಣಗೆರೆ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದಲೇ (ಆಗಸ್ಟ್ 4) ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.













Click it and Unblock the Notifications