ನೆಲ ಜಲ ಗಡಿ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಆಗಲ್ಲ: ಬಿ.ಎಸ್.ಯಡಿಯೂರಪ್ಪ
ಬೆಂಗಳೂರು,ಡಿಸೆಂಬರ್ 9: ನೆಲ, ಜಲ, ಗಡಿ ಹಾಗೂ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅಮಿತ್ ಶಾ ಅವರಿಗೆ ಮಹಾರಾಷ್ಟ್ರ ಸಂಸದರು ದೂರು ನೀಡಿರುವ ವಿಚಾರವಾಗಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಹ್ಮದಾಬಾದ್ ಗೆ ಹೋಗುತ್ತಿದ್ದೇನೆ. ಗಡಿ ವಿವಾದದ ವಿಚಾರ ಬಗ್ಗೆ ವರಿಷ್ಟರ ಜತೆ ಮಾತಾಡ್ತೇನೆ, ಯಾರು ಯಾರಿಗೇ ದೂರು ಕೊಟ್ರೂ ನಮಗೆ ಸಂಬಂಧ ಇಲ್ಲ. ನಮ್ಮ ರಾಜ್ಯದ ಹಿತವನ್ನು ಕಾಪಾಡುವುದು ಮುಖ್ಯ, ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡ್ತೇವೆ ಎಂದರು.
ಗುಜರಾತ್ ಮುಖ್ಯಮಂತ್ರಿ ಆಯ್ಕೆ ಸಂಬಂಧ ಸಮಿತಿ ರಚನೆ ಮಾಡಿದ್ದಾರೆ. ನೀವೂ ಬರಬೇಕು ಅಂತ ನನಗೆ ಕರೆ ಬಂತು, ಹೀಗಾಗಿ ಅಹಮದಾಬಾದ್ ಗೆ ಹೊರಟಿದ್ದೇನೆ. ನನ್ನನ್ನು, ರಾಜನಾಥ್ ಸಿಂಗ್, ಅರ್ಜುನ್ ಮುಂಡಾ ಅವರನ್ನು ಸೇರಿಸಿ ಸಮಿತಿ ಮಾಡಿದ್ದಾರೆ ಎಂದರು.

ತುಮಕೂರು ಜನ ಸಂಕಲ್ಪ ಯಾತ್ರೆಗೆ ಗೈರಾಗಿರುವ ವಿಚಾರವಾಗಿ ಮಾತನಾಡಿ, ಜನ ಸಂಕಲ್ಪ ಯಾತ್ರೆಗೆ ಗೈರಾಗುವ ಪ್ರಶ್ನೆಯೇ ಇಲ್ಲ. ಅನಿವಾರ್ಯವಾಗಿ ಇವತ್ತು ಅಹ್ಮದಾಬಾದ್ ಗೆ ಹೊರಟಿದ್ದೇನೆ ಅಲ್ಲಿಂದ ವಾಪಸ್ ಬಂದ ಮೇಲೆ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸ್ತೇನೆ, ನೂರಕ್ಕೆ ನೂರು 140 ಕ್ಕೂ ಹೆಚ್ಚು ಸ್ಥಾನಗಳನ್ನು ಇಲ್ಲಿ ಗೆಲ್ತೇವೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರ್ತೇವೆ ಎಂದು ಹೇಳಿದರು.

ಇನ್ನೂ ಮೀಸಲಾತಿ ಬೇಡಿಕೆ ವಿಚಾರವಾಗಿ ಮಾತನಾಡಿ, ಮೀಸಲಾತಿಗೆ ಹಲವರು ಬೇಡಿಕೆ ಮಾಡ್ತಿದಾರೆ. ಮೀಸಲಾತಿ ಕೊಡಲು ಏನು ಸಾಧ್ಯವಿದೆಯೋ ಅದನ್ನೆಲ್ಲ ಮಾಡ್ತಿದ್ದೇವೆ ಮುಂದೆ ನೋಡೋಣ, ಇವೆಲ್ಲ ಸಹಜವಾದ ಸಂಗತಿಗಳು ಎಂದರು.












Click it and Unblock the Notifications