'ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರು'
ಬೆಂಗಳೂರು, ಜೂನ್ 04: ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರಿಗೆ ರಾಜಾಶ್ರಯ ಕೊಡುತ್ತಿದ್ದಾರೆ. ಅಘೋಷಿತ ತುರ್ತು ಪರಿಸ್ಥಿತಿಯ ಇತಿಹಾಸದಿಂದ ಕಾಂಗ್ರೆಸ್ ಪಕ್ಷ ಪಾಠ ಕಲಿತಿಲ್ಲ ಎಂದು ಅವರು ತಿಳಿಸಿದರು. ಅಘೋಷಿತ ತುರ್ತು ಪರಿಸ್ಥಿತಿಯ ಮೂಲಕ ರಾಷ್ಟ್ರವಾದಿಗಳನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಸಿ ಟಿ ರವಿ ಅವರು ಎಚ್ಚರಿಸಿದರು. ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ವಿಧಾನ ಸೌಧದಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಕೂಗಿದ್ದರು. ಆದನ್ನು ವಿಷಯಾಂತರಗೊಳಿಸುವ ಪ್ರಯತ್ನ ಮಾಡಿ ನಾಸೀರ್ ಸಾಬ್ ಜಿಂದಾಬಾದ್ ಎಂದು ಹೇಳಿದ್ದು, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಲಿಲ್ಲ ಎಂದು ಸಮರ್ಥನೆ ಮಾಡಿಕೊಂಡರು ಎಂದು ನೆನಪಿಸಿದರು.
ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇಂದಿರಾ ಗಾಂಧಿಯವರು 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಕರ್ನಾಟಕದಲ್ಲಿ ಘೋಷಿತವಲ್ಲದ ತುರ್ತು ಪರಿಸ್ಥಿತಿ ಈಗ ಇದೆ ಎಂದು ವಿಧಾನಪರಿಷತ್ತಿನ ಸದಸ್ಯ ಸಿ.ಟಿ.ರವಿ ಅವರು ಟೀಕಿಸಿದ್ದಾರೆ. ಪೊಲೀಸ್ ರಾಜ್ಯ ಮಾಡಲು ಹೊರಟಿದ್ದೀರಾ ನೀವು? ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಸರಕಾರದ ಮರ್ಜಿಗೆ ತಕ್ಕಂತೆ ಬಳಸುವ ಪರಿಸ್ಥಿತಿ ತುರ್ತು ಪರಿಸ್ಥಿತಿ ಕಾಲದಲ್ಲೂ ಇತ್ತು. ಈಗಲೂ ಅದೇ ಕೆಲಸ ಮಾಡುತ್ತಿದ್ದೀರಿ. ರಾಜಕೀಯಪ್ರೇರಿತ ವರ್ತನೆ ಎದ್ದು ಕಾಣುತ್ತದೆ ಎಂದು ಆಕ್ಷೇಪಿಸಿದರು.

ವಿಧಾನಪರಿಷತ್ತಿನಲ್ಲಿ ನಡೆದ ಘಟನೆ, ಸಭಾಪತಿಗಳು ರೂಲಿಂಗ್ ಕೊಟ್ಟ ಬಳಿಕ ನನ್ನ ಮೇಲೆ ಕೇಸ್ ದಾಖಲಿಸಿ ನನ್ನನ್ನು ಬಂಧಿಸಿದ್ದರು. ನಾನು ಕೊಟ್ಟ ದೂರು ದಾಖಲಾಗಿಯೇ ಇಲ್ಲ. ಸಭಾಪತಿಗಳು, ವಿಧಾನಸೌಧದ ಕಾರಿಡಾರ್‍ನಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದರೂ ಇವತ್ತಿನವರೆಗೆ ಅಪರಾಧಿಗಳನ್ನು ಬಂಧಿಸಿಲ್ಲ. ದಲಿತ ಸಮಾಜಕ್ಕೆ ಸೇರಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯವರನ್ನು 4ರಿಂರ 5 ಗಂಟೆ ಕಾಲ ದಿಗ್ಬಂಧನದಲ್ಲಿ ಇಡಲಾಗಿತ್ತು. ಆದರೆ, ದಿಗ್ಬಂಧನದಲ್ಲಿ ಇಟ್ಟವರನ್ನು ಇನ್ನೂ ಬಂಧಿಸಿಲ್ಲ ಎಂದು ಆಕ್ಷೇಪಿಸಿದರು. ರವಿಕುಮಾರ್ ಅವರು ವಿಷಾದ ವ್ಯಕ್ತಪಡಿಸಿದ ನಂತರ ಐದೈದು ಗಂಟೆ ವಿಚಾರಣೆಗೆಂದು ಠಾಣೆಯಲ್ಲಿ ಕೂರಿಸಿದ್ದರು ಎಂದು ಟೀಕಿಸಿದರು.
ರಿಪಬ್ಲಿಕ್ ಆಫ್ ದಕ್ಷಿಣ ಕನ್ನಡಕ್ಕೆ ಸಭಾಧ್ಯಕ್ಷರು ಓವರ್ ರೈಡ್ ಮಾಡುತ್ತಾರೆ. ಸರಣಿ ಹತ್ಯೆ ನಿಂತಿಲ್ಲ. ಕ್ರಮ ಮಾತ್ರ ಏಕಪಕ್ಷೀಯ. ಯಾಕೆಂದರೆ, ಕೆಪಿಸಿಸಿ ಅಧ್ಯಕ್ಷರೇ ಕುಕ್ಕರ್ ಬಾಂಬ್ ಒಯ್ದವನನ್ನು ನಮ್ಮ ಬ್ರದರ್ಸ್ ಎಂದು ಸರ್ಟಿಫಿಕೇಟ್ ಕೊಟ್ಟರು. ಜನರ ನಡುವೆ ಇದ್ದು ಜನಪರ ಹೋರಾಟ ಮಾಡುವ ಅರುಣ್‍ಕುಮಾರ್ ಪುತ್ತಿಲರ ಮೇಲೆ ಗಡೀಪಾರು ನೋಟಿಸ್ ಕ್ರಮ ಆಗುತ್ತಿದೆ. ಹೀಗೆ ಟಾರ್ಗೆಟ್ ಮಾಡುವ ಕೆಲಸ ನಡೆಯುತ್ತಿದೆ ಎಂದು ಕಿಡಿಕಾರಿದರು.
ಗೃಹ ಸಚಿವರನ್ನು ಓವರ್ ರೈಡ್ ಮಾಡುವವರು ಜಾಸ್ತಿ ಆಗಿದ್ದಾರೆ. ಗೃಹ ಸಚಿವರಿಗೆ ಬಹಳಷ್ಟು ಸಾರಿ ಮಾಹಿತಿಯೇ ಇರುವುದಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮಾಡಿಕೊಂಡಿದ್ದಾರೇನೋ ಅನಿಸುತ್ತದೆ. ಅತ್ಯಾಚಾರ ನಡೆದಿದೆ ಎಂದರೆ ಇದೆಲ್ಲ ದೊಡ್ಡ ನಗರಗಳಲ್ಲಿ ಸಾಮಾನ್ಯ ಎಂದು ತೇಲಿಸಿ ಹಾಕುವ, ಅತ್ಯಾಚಾರವೂ, ದರೋಡೆಯೂ, ಕೊಲೆ, ಸುಲಿಗೆಯೂ ಗಂಭೀರ ಅಲ್ಲ ಎಂಬಂತೆ ತೇಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರತಿ ಜಿಲ್ಲೆಯಲ್ಲಿ ಗೃಹ ಸಚಿವರ ಚಾರ್ಜ್ ಅನ್ನು ಕೆಲವರು ಟೇಕ್ ಓವರ್ ಮಾಡಿದ್ದಾರೆ. ಕಲಬುರ್ಗಿಗೆ ಬಂದರೆ ಪ್ರಿಯಾಂಕ್ ಖರ್ಗೆ ಟೇಕ್ ಓವರ್, ಅವರ ಸೂಚನೆಯಂತೆ ಎಲ್ಲ ನಡೆಯಬೇಕಿದೆ. ಮರಳು ಮಾಫಿಯ ಬಗ್ಗೆ ಎಲ್ಲ ಮಾಧ್ಯಮಗಳೂ ಸುದ್ದಿ ಮಾಡಿದರೂ ಅದರ ನಿಯಂತ್ರಣ ಆಗಿಲ್ಲ. ಮರಳು ಮಾಫಿಯಕ್ಕೆ ರಾಜಾಶ್ರಯ ಇದೆ ಎಂದು ದೂರಿದರು. ಸತೀಶ್ ಜಾರಕಿಹೊಳಿ ಅವರು ರಿಪಬ್ಲಿಕ್ ಆಫ್ ಧಾರವಾಡದ ಹಿಟ್ಲರ್ ಅಂದುಕೊಂಡಿದ್ದಾರೆ. ರಿಪಬ್ಲಿಕ್ ಆಫ್ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಅವರನ್ನೇ ಬದಿಗೊತ್ತುವ ಕೆಲಸ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಆಗಾಗ ನಡೆಯುತ್ತಿರುತ್ತದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ರಿಪಬ್ಲಿಕ್‍ನ ಸೂಪರ್ ಗೃಹ ಸಚಿವ ಎಂದು ತೋರಿಸಲು ಮುಂದಾಗಿದ್ದಾರೆ ಎಂದರು.
ಜನರಿಗೆ ಸ್ಪಂದಿಸಬೇಕಾದ ಸಚಿವರು ಭ್ರಷ್ಟಾಚಾರವನ್ನೇ ಸಾಧನೆ ಎಂದು ಅಂದುಕೊಂಡಿದ್ದಾರೆ. ಇಲಾಖೆಯ ಪ್ರಗತಿಗಿಂತ ಮತ್ತು ಜನಸ್ನೇಹಿ ಆಡಳಿತಕ್ಕಿಂತ ಭ್ರಷ್ಟಾಚಾರವೇ ಸಾಧನೆಯಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್ಸಿನವರು ಮಾತಿಗೆ ಮುಂಚೆ ಪಂಚಗ್ಯಾರಂಟಿ ಬಗ್ಗೆ ಹೇಳುತ್ತಾರೆ. ಬೆಲೆ ಏರಿಕೆಯನ್ನು ಮರೆಮಾಚಿ ಪಂಚ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ. ಒಂದು ರೀತಿ ರಾಜ್ಯದಲ್ಲಿ ಜನವಿರೋಧಿ ಸರ್ಕಾರ ಇದೆ ಎಂದರೆ ತಪ್ಪಾಗಲಾರದು ಎಂದು ಸಿ.ಟಿ.ರವಿ ಅವರು ತಿಳಿಸಿದರು.
-
ನಾಸೀರ್ ಅಹ್ಮದ್ ವಜಾ; ಪಕ್ಷದಲ್ಲಿ ಶಿಸ್ತಿಲ್ಲದಿದ್ದರೆ ಕ್ರಮ ಎಂದ ಡಿಕೆ ಶಿವಕುಮಾರ್ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್












Click it and Unblock the Notifications