ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮುಸ್ಲಿಮರು ಚಿಗುರಿಕೊಂಡಿದ್ದಾರೆ: ಸೂಲಿಬೆಲೆ

ಯಾದಗಿರಿ, ಅಕ್ಟೋಬರ್‌ 09: ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮುಸಲ್ಮಾನರು ಚಿಗುರಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಿ ದಂಗೆಯ ರೂಪದ ವ್ಯವಸ್ಥೆ ಮಾಡಲಿಕ್ಕೆ ಹೊರಟಿರುವುದನ್ನು ನೋಡಿದರೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಇದಕ್ಕಿಂತ ಹೆಚ್ಚು ಭಿನ್ನವಾದ ನಿರೀಕ್ಷೆ ಯಾರಿಗೂ ಇರಲಿಲ್ಲ ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಈ ಕುರಿತು ಭಾನುವಾರ ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗ ದಳ ವತಿಯಿಂದ ಹಮ್ಮಿಕೊಂಡ ಶೌರ್ಯ ಜಾಗರಣಾ ರಥಯಾತ್ರೆಯ ಶೋಭಾಯಾತ್ರೆ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶದ ರಾಜಕೀಯದಲ್ಲಿಆಗದವರೆಲ್ಲಒಗ್ಗಟ್ಟಾಗಿ ಡಾಟ್‌ ಪಾರ್ಟಿ ಅಸ್ತಿತ್ವಕ್ಕೆ ತಂದು ಜಾತಿಯ ಹೆಸರಿನಲ್ಲಿ ದೇಶ ಒಡೆಯುವ ಹುನ್ನಾರ್‌ ನಡೆಸಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಆತಂಕ ವ್ಯಕ್ತಪಡಿಸಿದರು.

There Has Been An Appeasement Of Muslims in The Congress Government Says Chakravarti Sulibele

ದೇಶದ 28 ರಾಜ್ಯಗಳು ಸೇರಿ ಗುಂಪು ಮಾಡಿಕೊಂಡಿದ್ದು, ಅದರಲ್ಲಿಅಕ್ಷರಕ್ಕಿಂತ ಡಾಟಗಳೇ ಜಾಸ್ತಿ. ಇವರಿಂದ ಭಾರತ ಉಳಿಸಬೇಕಾದರೆ ನರೇಂದ್ರ ಮೋದಿಯವರ ಕೈಯಲ್ಲಿ ಮತ್ತೊಮ್ಮೆ ದೇಶ ಕೊಡಬೇಕು ಎಂದು ಹೇಳಿದರು. 2024ರ ಲೋಕಸಭೆ ಚುನಾವಣೆಯಲ್ಲಿಬಿಜೆಪಿ ಗೆಲ್ಲಿಸಿ, ಮೋದಿ ಅವರನ್ನು ಮೂರನೇ ಸಲ ಪ್ರಧಾನಿಯಾಗಿಸುವುದೇ ನಮ್ಮ ಗುರಿ ಎಂದರು.

ಸರ್ವ ಶ್ರೇಷ್ಠ ಭಾರತಕ್ಕಾಗಿ ಮೊತ್ತೊಮ್ಮೆ ಮೋದಿಯವರು ದೇಶದ ಪ್ರಧಾನಿಯಾಗಬೇಕು. ಇದಕ್ಕಾಗಿ ಯುವಕರಲ್ಲಿ ಜನಜಾಗೃತಿ ಮೂಡಿಸುವುದೇ ಈ ರಥ ಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಯಾತ್ರೆ ನಡೆಸಲಾಗುತ್ತಿದೆ. ನೂರು ಜನ ಖಡ್ಗ ಹಿಡಿದು ಬಂದರೂ ಛತ್ರಪತಿ ಶಿವಾಜಿ ಮಹಾರಾಜರು ಒಬ್ಬರೇ ಸಾಕು. 350 ಸಾವಿರ ನಮೋ ಬಳಗದಿಂದ ಬೈಕ್‌ ರಾಲಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ದೇಶ ಹೊರಡಗೆ ಮತ್ತು ಆಂತರಿಕವಾಗಿ ಸುಭದ್ರವಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎನ್ನುವ ಉದ್ದೇಶದಿಂದ ನಮೋ ಬ್ರಿಗೇಡ್‌ನಿಂದ ಜನ ಗಣ ಮನ ಬೆಸೆಯೋಣ ಬೈಕ್‌ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರದ ಇಂದಿನ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ರಾಷ್ಟ್ರಭಕ್ತಿಯ ಬಗ್ಗೆ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ನಾವೆಲ್ಲರೂ ನೆಮ್ಮದಿಯಿಂದ ಇರಲು ಕಾರಣವೇ ನರೇಂದ್ರ ಮೋದಿ ಅಧಿವರು. ಇಡೀ ಭಾರತವೇ ಅಭಿವೃದ್ಧಿಯತ್ತ ಸಾಗಿದೆ. ನರೇಂದ್ರ ಮೋದಿ ಅವರ ಕೊಡುಗೆ ಅಪಾರ. ನಾವ್ಯಾರು ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ನಾವೆಲ್ಲರೂ ಭಾರತಕ್ಕೆ ಸೇರಿದವರು. ನರೇಂದ್ರ ಮೋದಿ ಅವರು ಭಾರತಕ್ಕೆ ಸೇವೆ ಮಾಡುತ್ತಿದ್ದಾರೆ.ಹೀಧಿಗಾಗಿ ನಾವು ಅವರ ಜತೆ ನಿಲ್ಲಬೇಕು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕು ನಿಶ್ಚಯಿಸಿದ್ದು, ನಿಮ್ಮೆಲ್ಲರ ಸಹಕಾರ ಕೇಳುತ್ತಿರುವೆ. ಓಟ್‌ ಕೇಳುತ್ತಿಲ್ಲ. ಓಟ್‌ ಮಾಡುವುದು ನಮ್ಮ ಕರ್ತವ್ಯ.ಆದರೆ, ಪ್ರತಿದಿನ ನಾಲ್ಕು ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು ಎಂದರು.

ಇನ್ನೂ ಹಿರಿಯ ನಾಗರಿಕರು ಮಕ್ಕಳಿಗೆ ಹಿಂದು ಧರ್ಮದ ಕುರಿತು ಜಾಗೃತಿ ಮೂಡಿಸಬೇಕು. ಯುವತಿಯರು ಯಾವುದೇ ತಪ್ಪು ಮಾಡದ ಹಾಗೆ ಹಿಂದು ಧರ್ಮದ ಬಗ್ಗೆ ವಿಸ್ತಾರವಾಗಿ ತಿಳಿಸಬೇಕು. ರಾಷ್ಟ್ರ ವಿರೋಧಿ, ಧರ್ಮ ವಿರೋಧಿ ಶಕ್ತಿಗಳಿಗೆ ತಡೆಗಟ್ಟುವ ಕೆಲಸ ಯುವಕರು ಮಾಡಬೇಕು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+