Muda Scam: ಮುಡಾದಲ್ಲಿ ಬರೋಬ್ಬರಿ 5,000 ಕೋಟಿ ಅವ್ಯವಹಾರ: ಎ ಮಂಜು ಹೊಸ ಬಾಂಬ್‌

ಮಡಿಕೇರಿ, ಅಕ್ಟೋಬರ್‌ 19: ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ ಸಾಕಷ್ಟು ಸದ್ದು ಮಾಡುತ್ತಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬರೋಬ್ಬರಿ 5,000 ಕೋಟಿ ರೂ. ಅವ್ಯವಹಾರ ಆಗಿದೆ‌ ಎಂದು ಅರಕಲಗೂಡು ಶಾಸಕ ಎ ಮಂಜು ಹೊಸ ಬಂಬ್ ಸಿಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಸರಿಯಾಗಿ ತನಿಖೆಯಾಗಿ ಎಲ್ಲವೂ ಹೊರಬರಬೇಕು ಆಗ ಮಾತ್ರ ನ್ಯಾಯ ಸಿಗಲು ಸಾಧ್ಯ. ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡಬೇಕು ಎಂದು ಶಾಸಕ ಎ ಮಂಜು ಆಗ್ರಹಿಸಿದ್ದಾರೆ.

There has been a total of 5 000 crores of irregularities in Muda MLA A Manju

ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು. ಬಳಿಕ ಎಫ್ಐಆರ್ ಆಯ್ತು, ಎಫ್ಐಆರ್ ಆದ ಮೇಲೆ ರಾಜೀನಾಮೆ ಕೊಡಬೇಕು ಅಲ್ವಾ? ಎಂದು ಪ್ರಶ್ನಿಸಿದ ಅವರು, ನಾವು 14 ಸೈಟುಗಳನ್ನು ವಾಪಸ್ ಕೊಡಿ ಎಂದಿರಲಿಲ್ಲ. ಕಳ್ಳನ ಮನಸ್ಸು ಉಳ್ಳುಉಳ್ಳುಗೆ ಅಂದಹಾಗೆ. ಇವರು ಸೈಟು ವಾಪಸ್ ಕೊಟ್ಟಿದ್ದಾರೆ. ಅಂದರೆ ತಪ್ಪು ಮಾಡಿರುವುದು ಸಾಬೀತಾದಂತೆ ಅಲ್ಲವೇ? ಎಂದು ಎ ಮಂಜು ಅವರು ಪ್ರಶ್ನಿಸಿದ್ದಾರೆ.

ನಾನು ಲಾಯರ್ ನಂದೂ ಒಂದು ಕಾನೂನಿದೆ ಎನ್ನುತ್ತಿದ್ದವರು ಸಿದ್ದರಾಮಯ್ಯನವರು. ಈ ಹಿಂದೆ ರಾಮಕೃಷ್ಣ ಹೆಗಡೆ, ದೇವೇಗೌಡ್ರು ಅವರ ಮೇಲೆಲ್ಲಾ ಆರೋಪ ಬಂದಿದ್ದವು. ಆಗ ಅವರೆಲ್ಲಾ ರಾಜೀನಾಮೆ ಕೊಟ್ಟಿದ್ದರು. ಸಿದ್ದರಾಮಯ್ಯನವರು ರಾಜೀನಾಮೆ ಕೊಡಲಿ, ತಪ್ಪಿಲ್ಲ ಎಂದು ಸಾಬೀತಾದರೆ ಮತ್ತೆ ಮುಖ್ಯಮಂತ್ರಿಯಾಗಲಿ. ಇನ್ನೂ ಮರೀಗೌಡ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಕೂಡ ಅಪರಾಧವಾಗಿದೆ ಅಂತ ಸಾಬೀತಾದಂತೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಮುಡಾ ಹಗರಣದ ಕುರಿತು ಹೆಚ್‌ ಡಿ ಕುಮಾರಸ್ವಾಮಿ ಅವರು ಮಾತನಾಡಿ, ಮೈಸೂರು ಮುಡಾಗೆ ಸೇರಿದ ಕಡತಗಳು ಭೈರತಿ ಸುರೇಶ್ ಮನೆಯಲ್ಲಿವೆ. ಸರ್ಕಾರ ನನ್ನ ಕೈಯ್ಯಲ್ಲಿ ಇದೆಯಾ, ಮೈಸೂರು ನಗರವನ್ನು 30-40 ವರ್ಷಗಳಿಂದ ಗುತ್ತಿಗೆ ತೆಗೆದುಕೊಂಡಿರುವವರು ಸಿದ್ದರಾಮಯ್ಯ ಹಾಗೂ ಪಟಾಲಂ. ಭೈರತಿ ಸುರೇಶ್ ಹೆಲಿಕ್ಯಾಪ್ಟರ್‌ನಲ್ಲಿ ತರಾತುರಿಯಲ್ಲಿ ಸಿಎಟಿಬಿಗೆ ಯಾಕೆ ಹೋಗಿದ್ದರು? ಸಿಎಟಿಬಿನಲ್ಲಿ ಅವತ್ತು ಅವರಿಗೆ ಡಾಕ್ಯೂಮೆಂಟ್ ಸಿಗಲಿಲ್ಲವೇ? ಹೆಲಿಕ್ಯಾಪ್ಟರ್‌ನಲ್ಲಿ ದಾಖಲೆ ತುಂಬೋಕೆ ಹೋಗಿದ್ದರು. ಹಣದ ಗಂಟು ತೆಗೆದುಕೊಂಡು ಹೋಗುವುದಕ್ಕೆ ಹೋಗಿದ್ದರು ಎಂದು ಟೀಕಿಸಿದರು.

ಮುಡಾದಲ್ಲಿ ಮಂತ್ಲಿ ಫಿಕ್ಸ್‌ ಮಾಡಿಕೊಂಡು ಲೂಟಿ ಹೊಡೆದ ಹಣವನ್ನು ತೆಗೆದುಕೊಂಡು ಬರುವುದಕ್ಕೆ ಹೆಲಿಕ್ಯಾಪ್ಟರ್‌ನಲ್ಲಿ ಹೋಗಿದ್ದರಾ? ಇವರೇನು ತಮಾಷೆ ಮಾಡುತ್ತಾರಾ, ಮುಡಾದಲ್ಲಿರುವ ಫೈಲ್‌ಗಳನ್ನು ನನ್ನ ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ನಾನೇನು ಸರ್ಕಾರಕ್ಕಿಂತ ದೊಡ್ಡವನಾ, 30-40 ವರ್ಷದ ರಾಜಕೀಯದಲ್ಲಿ ವಿರೋಧ ಪಕ್ಷದ ನಾಯಕರು, ಡಿಸಿಎಂ, ಎರಡು ಬಾರಿ ಸಿಎಂ ಆಗಿದ್ದಾರೆ. ಇಷ್ಟೆಲ್ಲಾ ಇದ್ದು ನಾನು ಫೈಲ್‌ಗಳನ್ನು ತೆಗೆದುಕೊಂಡು ಹೋಗೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+