ಕಾಂಗ್ರೆಸ್‌ ನಲ್ಲಿ ಅಸಮಾಧಾನದ ಕಿಚ್ಚು; ಸಮನ್ವಯ ಸಮಿತಿ ರಚನೆ ಕುರಿತು ಸತೀಶ್‌ ಜಾರಕಿಹೊಳಿ ಹೇಳಿದ್ದೇನು?

ಬೆಂಗಳೂರು, ಜುಲೈ 31: ರಾಜ್ಯ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದಿದೆಯಷ್ಟೇ, ರಾಜ್ಯ ಕಾಂಗ್ರೆಸ್ ಪಡೆಯಲ್ಲಿ ಕುದಿಯುತ್ತಿರುವ ಅಸಮಾಧಾನ ಕಿಚ್ಚು, ಇದೀಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಇತ್ತ ಸಚಿವರು ಮತ್ತು ಶಾಸಕರ ಮುನಿಸಿಗೆ ಬ್ರೇಕ್‌ ಹಾಕಲು ಹೈಕಮಾಂಡ್ ಮುಂದಾಗಿದ್ದು, ಸಮನ್ವಯ ಸಮಿತಿ ರಚನೆ ಗೆ ಚಿಂತನೆ ನಡೆಸಿದೆ.

ಸಮನ್ವಯ ಸಮಿತಿ ರಚನೆಯ ಕುರಿತು ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿದ್ದು, ಸಮನ್ವಯ ಸಮಿತಿ ಬಗ್ಗೆ ಚರ್ಚೆ ಆಗಿಲ್ಲ. ದೆಹಲಿಯಲ್ಲಿ ಏನು ಚರ್ಚೆ ಆಗುತ್ತೋ ಇಲ್ವೋ ಗೊತ್ತಿಲ್ಲ, ಸಮನ್ವಯ ಸಮಿತಿ ರಚನೆ ಅಗತ್ಯ ಇಲ್ಲ. ನಮ್ಮ ಡ್ಯೂಟಿ ಇದೆ, ಕಾರ್ಯಕರ್ತರಿಗೆ ಹೆಚ್ಚು ಸಮಯ ಕೊಡಬೇಕು ಎಂದು ಹೇಳಿದರು.

lok-sabha-elections-satish-jarkiholi

ಇನ್ನೂ ಹೈಕಮಾಂಡ್‌ ಸಚಿವರ ಕಾರ್ಯವೈಖರಿ ರಿಪೋರ್ಟ್ ಕೇಳುವ ವಿಚಾರವಾಗಿ ಮಾತನಾಡಿ, ಎರಡು ತಿಂಗಳಲ್ಲಿ ರಿಪೋರ್ಟ್ ಕೊಡಲಿಕ್ಕೆ ಆಗಲ್ಲ. ಸಚಿವರಿಗೆ ಕನಿಷ್ಠ ಆರು ತಿಂಗಳು ಸಮಯ ಬೇಕು ಎಂದು ಹೇಳಿದರು.

ಇನ್ನೂ ಕೆಲವು ಸಚಿವರಿಗೆ ಲೋಕಸಭಾ ಚುನಾವಣಾ ಟಿಕೆಟ್ ನೀಡುವ ವಿಚಾರವಾಗಿ ಮಾತನಾಡಿ, ಆ ಬಗ್ಗೆ ಚರ್ಚೆ ಆಗಿಲ್ಲ, ಗೊತ್ತಿಲ್ಲ. ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಬಹುದು. ನಾನು ಈಗ ಮಂತ್ರಿಯಾಗಿ ಕೆಲಸ ಮಾಡ್ತಾ ಇದ್ದೀನಿ. ಪಕ್ಷ ಅಂತಿಮವಾಗಿ ತೀರ್ಮಾನ ಮಾಡಲಿದೆ, ಲಾಸ್ಟ್ ಟೈಮ್ ನಾನು ಸ್ಪರ್ಧೆ ಮಾಡಿದ್ದೆ. ಸದ್ಯಕ್ಕೆ ನನಗೆ ಸೂಚನೆ ಯಾವುದೂ ಬಂದಿಲ್ಲ. ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಬಹುದು, ಹೆಸರು ಕೇಳಬಹುದು. ಇನ್ನೂ ಪಕ್ಷದ ತೀರ್ಮಾನಕ್ಕೆ ನಾನು ಬದ್ಧ, ಎಲ್ಲರೂ ಬದ್ಧ ಆಗಿರಬೇಕಾಗುತ್ತದೆ ಎಂದು ಹೇಳಿದರು.

ವರ್ಗಾವಣೆ ವಿಚಾರವಾಗಿ ಮಾತನಾಡಿ, ನಮ್ಮ ಇಲಾಖೆ, ಬೇರೆಯವರ ಇಲಾಖೆಯಲ್ಲಿ ಕೆಲವರು ಕೋರ್ಟ್ ಗೆ ಹೋಗಿದ್ದಾರೆ. ಎರಡು, ಮೂರು, ಐದು ವರ್ಷ ಅವಧಿ ಇರುತ್ತದೆ. ಆಗಿದ್ದಾಗ ಏನೂ ಮಾಡಲು ಆಗಲ್ಲ. ಮುಖ್ಯಮಂತ್ರಿಗಳು ಸಹ ಏಕಾಏಕಿ ವರ್ಗಾವಣೆ ಮಾಡಕ್ಕಾಗಲ್ಲ, ಕೆಲವು ಅಧಿಕಾರಿಗಳು ಸ್ಟೇ ತೆಗೆದುಕೊಂಡು ಬಂದಿದ್ದಾರೆ. ಎಲ್ಲಾ ನಲವತ್ತು ಇಲಾಖೆಗಳಲ್ಲೂ ಇದೇ ಆಗಿದೆ ಎಂದು ಹೇಳಿದ ಅವರು,

ಮಾಜಿ ಮುಖ್ಯಮಂತ್ರಿಗಳಾದ ಹೆಚ್‌ ಡಿ ಕುಮಾರಸ್ವಾಮಿ ಹಾಗೂ ಬಿ ಎಸ್‌ ಯಡಿಯೂರಪ್ಪ ಅವರ ವಿದೇಶಿ ಪ್ರವಾಸದ ಕುರಿತು ಮಾತನಾಡಿ, ಅವರು ಪ್ರವಾಸ ಹೋಗುವುದಕ್ಕೂ, ನಮ್ಮ ಸರ್ಕಾರ ಬೀಳಿಸುವುದಕ್ಕೂ ಏನು ಸಂಬಂಧ, ಇಲ್ಲೇ ಹೋಟೆಲ್‌ ಗಳಲ್ಲಿ ಕೂತು ಮಾತನಾಡಬಹುದಲ್ಲ ಎಂದು ಹೇಳಿದರು.

ಪೂರ್ತಿ ಅನುದಾನ ಕೊಡಲು ಆಗದೇ ಇದರೂ ಸ್ವಲ್ಪವಾದ್ರೂ ಕೊಡಬೇಕು. ಹದಗೆಟ್ಟ ರಸ್ತೆಗಳನ್ನ ಸರಿ ಮಾಡಬೇಕು, ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+