ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಕುರ್ಚಿ ಫೈಟ್: ಎರಡೂವರೆ ವರ್ಷದ ಬಳಿಕ ಸಿಎಂ ಬದಲಾಗುತ್ತಾರಾ? : ಎಂ ಬಿ ಪಾಟೀಲ್ ಹೇಳಿದಿಷ್ಟು!
ಬೆಂಗಳೂರು, ಅಕ್ಟೋಬರ್ 27: ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವ ಚರ್ಚೆ ಪದೇ ಪದೇ ಸದ್ದು ಮಾಡುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಬಣಗಳ ಕಿತ್ತಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದ್ರು. ಆದರೆ, ಇದೀಗ ಮತ್ತೆ ಎರಡೂವರೆ ವರ್ಷದ ಬಳಿಕ ಸಿಎಂ ಬದಲಾಗುತ್ತಾರೆ ಎಂದು ಶಾಸಕ ರವಿಕುಮಾರ್ ಗಾಣಿಗ ಹೇಳಿಕೆ ಕಾಂಗ್ರೆಸ್ ಪಾಳಪಯದಲ್ಲಿ ಸಂಚಲನ ಸೃಷ್ಟಿಸಿದೆ.
ಹೌದು, ಈ ಕುರಿತು ಸಚಿವ ಎಂ ಬಿ ಪಾಟೀಲ್ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ನಮ್ಮಲ್ಲಿ ಯಾರು ಸಿಎಂ ಆಗಬೇಕು. ಎಲ್ಲವನ್ನ ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತೆ, ಈ ಎಲ್ಲ ಹೇಳಿಕೆಗಳು ಅವರ ವೈಯಕ್ತಿಕ ಹೇಳಿಕೆ. ಏನೇ ಇದ್ದರೂ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರು ಸಚಿವರಾಗಬೇಕು, ಸಿಎಂ ಆಗ್ಬೇಕು ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

ವಿಜಯಪುರ ಜಿಲ್ಲೆ ಹೆಸರು ಬದಲಾವಣೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆ ಉತ್ತರಿಸಿದ ಅವರು, ಈ ಹಿಂದೆ ಬಿಜಾಪುರ ಅಂತ ಹೆಸರು ಇತ್ತು. ಬಳಿಕ ವಿಜಯಪುರ ಅಂತ ಹೆಸರನ್ನ ಬದಲಾವಣೆ ಮಾಡಲಾಗಿದೆ. ಈಗ ಬಸವೇಶ್ವರ ಜಿಲ್ಲೆ ಅಂತ ಆಗಲಿ ಎಂದು ಬೇಡಿಕೆ ಬಂದಿದೆ, ಸಾರ್ವಜನಿಕರಿಂದ ಬೇಡಿಕೆ ಬಂದಿದೆ. ಹೆಸರು ಬದಲಾವಣೆಯಿಂದ ಆತಂಕಗಳು ಇವೆ, ಈ ಬಗ್ಗೆ ಸಿಎಂ ಜೊತೆ ನಾನು ಚರ್ಚೆ ಮಾಡುತ್ತೇನೆ. ರಾಜ್ಯದ ಹೆಸರನ್ನು ಬಸವಣ್ಣನ ನಾಡು ಅಂತಾ ಹೆಸರು ಇಡೋದ್ರಲ್ಲಿ ತಪ್ಪಿಲ್ಲ, ಸ್ವಾಭಾವಿಕವಾಗಿ ನಾವು ಬಸವಣ್ಣನ ನಾಡು ಅಂತ ಮಾತನಾಡ್ತೇವೆ. ಮೆಟ್ರೋಗೂ ಕೂಡ ಬಸವಣ್ಣನ ಹೆಸರು ಇಡಬೇಕು ಎಂಬ ಬೇಡಿಕೆ ಇದೆ. ಎಲ್ಲವನ್ನೂ ಪರಿಶೀಲನೆ ಮಾಡಲಾಗುತ್ತೆದೆ. ಈ ಬಗ್ಗೆ ಸಿಎಂ ಜೊತೆ ನಾನು ಕೂಡ ಮಾತನಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಆಮಿಷ ಒಡ್ಡಲಾಗಿದೆ ಎಂಬ ಆರೋಪದ ವಿಚಾರವಾಗಿ ಮಾತನಾಡಿ, ಶಾಸಕರು ಹೇಳಿದ್ದಾರೆ ಅಂದ ಮೇಲೆ ಸತ್ಯವಾಗಿಯೇ ಇರುತ್ತದೆ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಕೆಪಿಸಿಸಿ ಅಧ್ಯಕ್ಷರಿಗೆ ಇದರ ಬಗ್ಗೆ ಮಾಹಿತಿ ಇದೆ, ಅವರೆ ಹೇಳಿದ್ದಾರೆ ಅಂದ ಮೇಲೆ ಮಾಹಿತಿ ಅವರಿಗೆ ಇರುತ್ತದೆ. ಈ ಬಗ್ಗೆ ಅಧಿವೇಶನದಲ್ಲಿ ಶಾಸಕರು ಮಾತನ್ನಾಡಲಿ ಎಂದು ಹೇಳಿದರು.
ನೈಸ್ ಗೆ ಕೊಟ್ಟ ಕೆಐಡಿಬಿ ಭೂಮಿಯನ್ನ ಡಿ.ಕೆ ಸುರೇಶ್ ಡಿನೋಟಿಪಿಕೇಶನ್ ಮಾಡಿದ್ದಾರೆ ಎಂಬ ಹೆಚ್ ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ತರಿಸಿಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.
ಇನ್ನೂ ಹೆಚ್ ಡಿ ಕುಮಾರಸ್ವಾಮಿ ಅವರ ಆಣೆ, ಪ್ರಮಾಣ ಹೇಳಿಕೆ ವಿಚಾರವಾಗಿ ಮಅತನಾಡಿ, ಯಾವ ಮಟ್ಟಕ್ಕೆ ಹೋಯ್ತು ರಾಜಕಾರಣ. ಮೊದಲು ಅವರು ಹೋಗಿ ಆಣೆ ಮಾಡಿ ಬರಲಿ, ಇದು ಗ್ರಾಮ ಪಂಚಾಯಿತಿಗೆ ರೀತಿ ಆಯ್ತಲ್ಲ ಎಂದು ಹೇಳಿದರು.












Click it and Unblock the Notifications