ಗಣೇಶ ಕೂರಿಸಲು ಡಿಕೆಶಿ ಬಳಿಯೇ ಹಣ ಕೇಳಿದ ಚಿಣ್ಣರ ಗ್ಯಾಂಗ್‌; ಆಮೇಲೆ ಏನಾಯ್ತು ಗೊತ್ತಾ?

ಗಣೇಶ ಚತುರ್ಥಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಎಲ್ಲೆಡೆ ಹಬ್ಬಕ್ಕೆ ತಯಾರಿ ಭರ್ಜರಿಯಾಗಿ ಸಾಗಿದೆ. ಗಣೇಶನನ್ನು ಕೂರಿಸಲು ಈಗಾಗಲೇ ಏರಿಯಾಗಳಲ್ಲಿ ಚಪ್ಪರ ಹಾಕಲಾಗುತ್ತಿದ್ದು, ಇದಕ್ಕಾಗಿ ಹಣ ಸಂಗ್ರಹವೂ ಜೋರಾಗಿ ಸಾಗಿದೆ. ಇದೀಗ ಗಣೇಶ ಕಲೆಕ್ಷನ್‌ ವಿಚಾರವು ಡಿ.ಕೆ.ಶಿವಕುಮಾರ್‌ ಅವರ ಅಂಗಳದರೆಗೂ ತಲುಪಿರುವುದು ಸದ್ಯ ಗಮನ ಸೆಳೆದಿದೆ.

ರಸ್ತೆಗಳಲ್ಲಿ ಗಣೇಶನನ್ನ ಕೂರಿಸುವ ವಿಚಾರವಾಗಿ ಚಂದಾ ವಸೂಲಿ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಣ ಸಂಗ್ರಹದ ವಿಚಾರವಾಗಿ ಯಾರನ್ನೂ ಬಲವಂತ ಮಾಡಬಾರದು ಎಂದು ನಿನ್ನೆಯಷ್ಟೇ ಪೊಲೀಸರು ಹೇಳಿದ್ದಾರೆ. ಆದರೆ, ಇಂದು ಮಕ್ಕಳ ಗ್ಯಾಂಗ್‌ವೊಂದು ಸೀದಾ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಬಳಿಯೇ ಗಣೇಶ ಕೂರಿಸಲು ದುಡ್ಡು ಕೇಳಿರುವ ಪ್ರಸಂಗ ನಡೆದಿದೆ.

The Children Asked DCM DK Shivakumar For Money For Ganesha Festival

ಇಂದು ಕನಕಪುರದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಡಿ.ಕೆ.ಶಿವಕುಮಾರ್‌ ನಡೆಸಿದರು. ಸಾರ್ವಜನಿಕರ ಕುಂದು ಕೊರತೆ ಆಲಿಸುತ್ತಿದ್ದಾಗ ಮಕ್ಕಳ ಗುಂಪೊಂದು ಸಾಲಿನಲ್ಲಿ ನಿಂತಿತ್ತು. ಏನೋ ಸಮಸ್ಯೆ ಇರಬಹುದು ಎಂದು ಹತ್ತಿರಕ್ಕೆ ಕರೆದು ಕೇಳಿದಾಗ, ಸಾರ್‌ ನಮ್‌ ಏರಿಯಾದಲ್ಲಿ ಗಣೇಶ ಕೂರುಸ್ತಿದೀವಿ..ಒಂದು 50 ರೂಪಾಯಿ ಕೊಡಿ ಸಾರ್‌...ʼʼ ಎಂದು ಡಿ.ಕೆ.ಶಿವಕುಮಾರ್‌ ಅವರ ಬಳಿ ಚಂದಾ ಕೇಳಿದರು.

ಮಕ್ಕಳೆಲ್ಲ ಡಿ.ಕೆ.ಸಾರ್‌ ನಮಗೆ ದುಡ್ಡು ಕೊಡ್ತಾರೆ ಅನ್ನೋ ಖುಷಿಯಲ್ಲೇ ಇದ್ದರು. ಆದರೆ, ಮಕ್ಕಳಿಗೆ ಮಾತಿಗೆ ನಕ್ಕ ಡಿ.ಕೆ.ಶಿವಕುಮಾರ್‌, ಆಯ್ತು..ಎಂಪಿ ಬರ್ತಾರೆ, ಅವರೇ ದುಡ್‌ ಕೊಡ್ತಾರೆ ನಡೀರಿ, ನಡೀರಿ..ʼ ಎಂದು ಕಳಿಸಿಬಿಟ್ಟರು. ಇದರಿಂದ ಮಕ್ಕಳೆಲ್ಲ ಬೇಸರದಿಂದ ಅಲ್ಲಿಂದ ಹೊರಟು ಹೋಗಿರುವ ಹಾಸ್ಯಮಯ ಪ್ರಸಂಗ ನಡೆಯಿತು. ಇನ್ನು ಮಕ್ಕಳು ನೇರವಾಗಿ ಡಿಕೆಶಿ ಬಳಿ ಕೇಳಿದ್ದಕ್ಕೆ ಜನಸ್ಪಂದನದಲ್ಲಿದ್ದ ಜನರೆಲ್ಲ ಒಂದು ಕ್ಷಣ ನಗೆಗಡಲಲ್ಲಿ ತೇಲಾಡಿದರು.

The Children Asked DCM DK Shivakumar For Money For Ganesha Festival

ಹಬ್ಬಕ್ಕೂ ಒಂದೆರಡು ವಾರಗಳ ಮುಂಚೆಯೇ ಗಣಪತಿ ಕೂರಿಸೋ ಹುಡುಗರು ಗುಂಪು ಗುಂಪಾಗಿ ರಸ್ತೆಗಳಲ್ಲಿ ನಿಂತು ಹಣ ಸಂಗ್ರಹ ಮಾಡೋದು ಅಂದಿನಿಂದಲೂ ನಡೆದುಕೊಂಡು ಬಂದಿರೋ ಅನ್‌ಅಫೀಶಿಯಲ್‌ ಪದ್ಧತಿ ಎಂದೇ ಹೇಳಬಹುದು. ಆದರೆ, ಈ ಸಲ ಗಣಪತಿ ಹಬ್ಬಕ್ಕೆ ಚಂದಾ ವಸೂಲಿ ಮಾಡುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನುವುದು ನೆನಪಿರಲಿ. ಹಬ್ಬದ ಹೆಸರಲ್ಲಿ ಏನಾದರೂ ಸಾರ್ವಜನಿಕರ ಹತ್ತಿರ ಜೋರು ಮಾಡೋಕೆ ಹೋದ್ರೆ, ಸೀದಾ ಜೈಲಿಗೂ ಕಳೆಸೋಕೆ ಪೊಲೀಸರು ರೆಡಿಯಾಗಿದ್ದಾರೆ.

ಹೌದು ಈ ಬಗ್ಗೆ ಖುದ್ದು ಬೆಂಗಳೂರು ಪೊಲೀಸ್‌ ಕಮೀಷನರ್‌ ಬಿ.ದಯಾನಂದ್‌ ಅವರೇ ಎಚ್ಚರಿಕೆ ನೀಡಿದ್ದಾರೆ. ಗೌರಿ-ಗಣೇಶ ಉತ್ಸವಕ್ಕೆ ಬಲವಂತವಾಗಿ ಚಂದಾ ವಸೂಲಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಗಣೇಶ ಕೂರಿಸ್ತಿದೀವಿ, ದುಡ್‌ ಕೊಡ್ಲೇಬೇಕು ಎಂದು ನೀವು ಸಾರ್ವಜನಿಕರಿಗೆ ಬಲವಂತ ಮಾಡುವಂತಿಲ್ಲ.

ಗಣೇಶನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಯ ಹೆಸರಲ್ಲಿ ಬಲವಂತವಾಗಿ ಹಾಗೂ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಖಡಕ್‌ ಆದೇಶ ಕೂಡ ನೀಡಿದ್ದಾರೆ. ಹಾಗಾಗಿ ಸಾರ್ವಜನಿಕರು ಕೊಟ್ಟರಷ್ಟೇ ದುಡ್ಡು ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು, ದುಡ್‌ ಅಷ್ಟೇ ಕೊಡಿ, ಇಷ್ಟೇ ಕೊಡಿ ಅಂತೆಲ್ಲ ಕೇಳುವಂತಿಲ್ಲ ಎಂದು ವಾರ್ನ್‌ ಮಾಡಲಾಗಿದೆ. ಆದರೆ, ಈ ಸಮಸ್ಯೆ ಖುದ್ದು ಡಿ.ಕೆ.ಶಿವಕುಮಾರ್‌ ಅವರನ್ನು ಬಿಟ್ಟಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+