ಕಲೆಕ್ಷನ್ ಮಾಸ್ಟರ್ ಆಗಿರುವ ಕಾರಣ ಚೀಫ್ ಮಿನಿಸ್ಟರ್ ಎಂಬ ಸಿಎಂ ಕುರ್ಚಿ ಖಾಲಿ ಇದೆ.
ಬೆಂಗಳೂರು,ನವೆಂಬರ್ 22: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬರೋಬ್ಬರಿ ಆರು ತಿಂಗಳು ಪೂರೈಸಿದ್ದು, ರಾಜ್ಯ ಕೈ ಪಡೆಯಲ್ಲಿ ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿ ಸದ್ದು ಮಾಡುತ್ತಿದೆ. ಈಗಾಗಲೇ ಸಿಎಂ ಬದಲಾವಣೆ ಕುರಿತು ಚರ್ಚೆ ಮಾಡದಂತೆ ಹೈಕಮಾಂಡ್ ಬ್ರೇಕ್ ಹಾಕಿದ್ರು ಸಹ ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಹೌದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಡಳಿತ ನಡೆಸುತ್ತಿದ್ದರು ಸಹ ಸಿಎಂ ಸ್ಥಾನದ ಕುರಿತು ಪದೇ ಪದೇ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ನಲ್ಲಿನ ಪರಿಸ್ಥಿತಿಯನ್ನ ಕಂಡ ರಾಜ್ಯ ಬಿಜೆಪಿ ಕಲೆಕ್ಷನ್ ಮಾಸ್ಟರ್ ಆಗಿರುವ ಕಾರಣ ಚೀಫ್ ಮಿನಿಸ್ಟರ್ ಎಂಬ ಸಿಎಂ ಕುರ್ಚಿ ಖಾಲಿ ಇದೆ ಎಂದು ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ನಾನೇ ಮುಂದಿನ ಸಿಎಂ, ನಮ್ಮವರೇ ಮುಂದಿನ ಸಿಎಂ ಎಂದು ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಬ್ಬರು ಹೇಳಿಕೆ ಕೊಡುತ್ತಿದ್ದಾರೆ. ಸಾಂವಿಧಾನಿಕ ಸ್ಥಾನದಲ್ಲಿ ಕೂತ ಮಹನೀಯರು ಆ ಸ್ಥಾನದ ಘನತೆಯನ್ನೂ ಮರೆತು ಕಲೆಕ್ಷನ್ ಮಾಸ್ಟರ್ ಆಗಿರುವ ಕಾರಣ ಚೀಫ್ ಮಿನಿಸ್ಟರ್ ಎಂಬ ಸಿಎಂ ಕುರ್ಚಿ ಖಾಲಿ ಇದೆ ಎಂದು ಬಿಜೆಪಿ ಹೇಳಿದೆ.
ನಾನೇ ಮುಂದಿನ ಸಿಎಂ, ನಮ್ಮವರೇ ಮುಂದಿನ ಸಿಎಂ ಎಂದು @INCKarnataka ಸರ್ಕಾರದಲ್ಲಿ ದಿನಕ್ಕೊಬ್ಬರು ಹೇಳಿಕೆ ಕೊಡುತ್ತಿದ್ದಾರೆ.
— BJP Karnataka (@BJP4Karnataka) November 21, 2023
ಸಾಂವಿಧಾನಿಕ ಸ್ಥಾನದಲ್ಲಿ ಕೂತ ಮಹನೀಯರು ಆ ಸ್ಥಾನದ ಘನತೆಯನ್ನೂ ಮರೆತು ಕಲೆಕ್ಷನ್ ಮಾಸ್ಟರ್ ಆಗಿರುವ ಕಾರಣ ಚೀಫ್ ಮಿನಿಸ್ಟರ್ ಎಂಬ ಸಿಎಂ ಕುರ್ಚಿ ಖಾಲಿ ಇದೆ.#ATMSarkara #CongressFailsKarnataka pic.twitter.com/CtyjOofAbf
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಕುರ್ಚಿಯ ದಂಗಲ್ ದಿನೇ ದಿನೇ ಜಾಸ್ತಿಯಾಗುತ್ತಿದೆ. ಸಿಎಂ ಕುರ್ಚಿಯ ಸಲುವಾಗಿ #CongressVsCongress ಫೈಟ್ ಜೋರಾಗಿದ್ದು, ಸಚಿವರುಗಳು ಹಾದಿ ಬೀದಿಯಲ್ಲಿ ಕಿತ್ತಾಡುತ್ತಿದ್ದು ರಾಜ್ಯದ ಆಡಳಿತ ಮಾತ್ರ ಮೂರಾಬಟ್ಟೆಯಾಗಿದೆ. ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಪಕ್ಷದಲ್ಲಿ ದಿನಕ್ಕೊಬ್ಬ ಸಿಎಂ ಕ್ಯಾಂಡಿಡೇಟ್ ಹುಟ್ಟಿಕೊಳ್ಳುತ್ತಿರುವುದನ್ನು ನೋಡಿದರೆ, ನಿಮ್ಮ ಆಡಳಿತ ಅದ್ಯಾವ ಪರಿ ಹದಗೆಟ್ಟಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ರಾಜ್ಯ ಬಿಜೆಪಿ ಕುಟುಕಿದೆ.












Click it and Unblock the Notifications