10% ಹೇಳಿಕೆ ಬಗ್ಗೆ 100% ತಲೆಕೆಡಿಸಿಕೊಂಡಿರುವ ಕಾಂಗ್ರೆಸ್
Recommended Video

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಬಂದಾಗಿನಿಂದ ಆರಂಭವಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ ಮತ್ತು ಟ್ವೀಟ್ ಸಮರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಲೇ ಬರುತ್ತಿದೆ.
ಅಮಿತ್ ಶಾ ಬಂದು ಹೋದ ನಂತರ ಒಂದು ಹಂತಕ್ಕೆ ತಲುಪಿದ್ದ ಟ್ವೀಟ್ ಸಮರ, ಮೊನ್ನೆ ಮೋದಿ ಭಾನುವಾರ (ಫೆ 4) ಬೆಂಗಳೂರಿಗೆ ಬಂದು ಸಿದ್ದರಾಮಯ್ಯನವರದ್ದು "ಟೆನ್ ಪರ್ಸೆಂಟೇಜ್ ಕಮಿಷನ್ ಪಡೆಯುವ ಸರಕಾರ" ಎಂದು ಸಾರ್ವಜನಿಕ ಸಭೆಯಲ್ಲಿ ವಾಗ್ದಾಳಿ ನಡೆಸಿ ಹೋದ ನಂತರ ಇನ್ನೊಂದು ಹಂತಕ್ಕೆ ತಲುಪಿದೆ.
ಪ್ರಧಾನಮಂತ್ರಿ ಟೀಕಾಪ್ರಹಾರಕ್ಕೆ ಕಾಂಗ್ರೆಸ್ಸಿನ ರಾಜ್ಯ ಮುಖಂಡರು ಸಾಲು ಸಾಲು ಟ್ವೀಟ್ ಮಾಡಿ ತಿರುಗೇಟು ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೂ ತಮ್ಮ ಸಚಿವ ಸಂಪುಟದ ಎಂಟು ಕ್ಯಾಬಿನೆಟ್ ಸಚಿವರ ಜೊತೆ ಪತ್ರಿಕಾಗೋಷ್ಠಿಯನ್ನೂ ನಡೆಸಿದ್ದಾಗಿದೆ.
ಮೋದಿಯ 10% ಹೇಳಿಕೆಗೆ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ಮುಖಂಡರು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಂತೆ ಕಾಣುತ್ತಿದ್ದು, ಆ ಹೇಳಿಕೆಯ ಹಿಂದೆಯೇ ಸುತ್ತುತ್ತಿದ್ದಾರೆ. ಇದರ ಜೊತೆಗೆ, ಕಾಂಗ್ರೆಸ್ ಸೋಷಿಯಲ್ ಮಿಡಿಯಾ ಮುಖ್ಯಸ್ಥೆ ರಮ್ಯಾ ಅವರ 'ಪಾಟ್' ಟ್ವೀಟ್ ಬೇರೆ.
ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿಯವರಿಗೆ, ಮುಖ್ಯಮಂತ್ರಿ ಹಲವು ಪ್ರಶ್ನೆಗಳನ್ನು ಟ್ವೀಟ್ ಮೂಲಕ ಕೇಳಿದ್ದಾರೆ. ಆ ಪ್ರಶ್ನೆಗಳು, ಕೆಳಗಿನಂತಿವೆ..

ಕೆಲವೊಂದು ವಿಚಾರದ ಬಗ್ಗೆ ಮಾತುಕತೆಗೆ ಆಹ್ವಾನ
ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ನಾನು ಅವರ ಜೊತೆ ಕೆಲವೊಂದು ವಿಚಾರದ ಬಗ್ಗೆ ಮಾತುಕತೆಗೆ ಆಹ್ವಾನಿಸುತ್ತಿದ್ದೇನೆ.
1. ಲೋಕಪಾಲ್ ನೇಮಕ
2. ನ್ಯಾ. ಲೋಯಾ ಸಂಶಯಾಸ್ಪದ ಸಾವಿನ ತನಿಖೆ
3. ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಆದಾಯದಲ್ಲಿ ಭಾರೀ ಏರಿಕೆಯ ತನಿಖೆ
4. ಭ್ರಷ್ಟಾಚಾರ ಆರೋಪ ಇರದ, ಕಳಂಕರಹಿತ ವ್ಯಕ್ತಿಯನ್ನು ನಿಮ್ಮ ಪಕ್ಷದ ಅಭ್ಯರ್ಥಿ ಎಂದು ಘೋಷಿಸುವಿರಾ?

ಹೆಚ್ಚು ಅಪರಾಧ ನಡೆಯುತ್ತಿರುವ ದೇಶದ ಹತ್ತು ರಾಜ್ಯಗಳ ಪಟ್ಟಿಯಲ್ಲಿ ಬಿಜೆಪಿ ಆಳ್ವಿಕೆಯ ರಾಜ್ಯಗಳು
NCRB ವರದಿ ಪ್ರಕಾರ ಅತ್ಯಂತ ಹೆಚ್ಚು ಅಪರಾಧ ನಡೆಯುತ್ತಿರುವ ದೇಶದ ಹತ್ತು ರಾಜ್ಯಗಳ ಪಟ್ಟಿಯಲ್ಲಿ ಬಿಜೆಪಿ ಆಳ್ವಿಕೆಯ ಉತ್ತರಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ಹರ್ಯಾಣ ರಾಜ್ಯಗಳು ಸೇರಿವೆ. ಆ ಪಟ್ಟಿಯಲ್ಲಿ ಕರ್ನಾಟಕ ಇಲ್ಲ. ಇದು ನಿಮಗೆ ತಿಳಿದಿರಲಿಲ್ಲವೇ #NarendraModi ಅವರೇ? 2002ರಲ್ಲಿ ಗುಜರಾತ್ ಕೋಮುಗಲಭೆಗೆ 2000ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡರಲ್ಲಾ, ಆಗ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದದ್ದು ನೀವೇ ಅಲ್ಲವೇ #NarendraModi ಅವರೇ? ಅಪರಾಧದ ಬಗ್ಗೆ ಕನ್ನಡಿಗರಿಗೆ ಪಾಠ ಬೇಡ. ನಾವು ಹಾಗಿಲ್ಲ.

ನಾಲ್ಕು ವರ್ಷಗಳಿಂದ ಲೋಕಪಾಲರನ್ನೇ ನೇಮಿಸಿಲ್ಲ ಯಾಕೆ?
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ #NarendraModi ಅವರು ಒಂಬತ್ತು ವರ್ಷಗಳ ಕಾಲ ಲೋಕಾಯುಕ್ತರನ್ನೇ ನೇಮಿಸಿರಲಿಲ್ಲ, ಈಗ ನಾಲ್ಕು ವರ್ಷಗಳಿಂದ ಲೋಕಪಾಲರನ್ನೇ ನೇಮಿಸಿಲ್ಲ ಯಾಕೆ? ಭ್ರಷ್ಟರನ್ನು ರಕ್ಷಿಸುವುದಕ್ಕೋ?
ಚೆಕ್‍ನಲ್ಲಿಯೇ ಲಂಚ ಪಡೆದು ಜೈಲಿಗೆ ಹೋಗಿ ಬಂದವರು ಯಡಿಯೂರಪ್ಪನವರು. ಅವರ ಜೊತೆಗಿರುವ ಕಟ್ಟಾ ಸುಬ್ರಮಣ್ಯನಾಯ್ಡು, ಜನಾರ್ಧನ ರೆಡ್ಡಿ,ಕೃಷ್ಣಯ್ಯ ಶೆಟ್ಟಿ ಎಲ್ಲರೂ ಪರ್ಸೆಂಟೇಜ್ ವ್ಯವಹಾರದಲ್ಲಿ ತಜ್ಞರು. ಅವರನ್ನೇ #NarendraModi ಕೇಳಬಹುದಿತ್ತು.

ಬಿಎಸ್ವೈ ಪರ್ಸೆಂಟೇಜ್ ವ್ಯವಹಾರದ ಸ್ಪಷ್ಟಚಿತ್ರ ನೀಡುತ್ತಿದ್ದರು
ಸನ್ಮಾನ್ಯ ಪ್ರಧಾನಿ ನರೇಂದ್ರಮೋದಿಯವರು 10% ಸರ್ಕಾರ ಎಂಬ ಆರೋಪ ಮಾಡಿದ್ದಾರೆ.ಅವರು ಪಕ್ಕದಲ್ಲಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನುಕೇಳಿದ್ದರೆ ಪರ್ಸೆಂಟೇಜ್ ವ್ಯವಹಾರದ ಸ್ಪಷ್ಟಚಿತ್ರ ನೀಡುತ್ತಿದ್ದರು. ಅವರಿಗೆ 10%ಅಲ್ಲ 100ಕ್ಕೆ 100ರಷ್ಟುಕಮೀಷನ್ ಹೊಡೆಯುವುದೂ ಗೊತ್ತು. ದೇಶದ ಒಟ್ಟು ತೆರಿಗೆಯಲ್ಲಿ ರಾಜ್ಯದಿಂದ ಸಂಗ್ರಹವಾಗುತ್ತಿರುವ ತೆರಿಗೆ ಪಾಲು 9.47%, ಕೇಂದ್ರದಿಂದ ಅನುದಾನದ ರೂಪದಲ್ಲಿ ಬಂದಿರುವ ಹಣ 4.65% ಮಾತ್ರ. ಕನ್ನಡಿಗರು ಕೊಟ್ಟದ್ದು ಹೆಚ್ಚು ಪಡೆದದ್ದು ಕಡಿಮೆ. ನಮ್ಮ ಔದಾರ್ಯ ನಮ್ಮ ಹೆಮ್ಮೆ.

ಆಡಿದ ಮಾತುಗಳು ಅವರ ಹುದ್ದೆಗೆ ಘನತೆ ತರುವಂತೆ ಇರಲಿಲ್ಲ
ಪ್ರಧಾನ ಮಂತ್ರಿ #NarendraModi ಭಾಷಣ ಪ್ರಧಾನಿ ಹುದ್ದೆಯಲ್ಲಿರುವವರು ಮಾಡುವ ಭಾಷಣದಂತೆ ಇರಲಿಲ್ಲ. ಅವರು ಆಡಿದ ಮಾತುಗಳು ಅವರ ಹುದ್ದೆಗೆ ಘನತೆ ತರುವಂತೆ ಇರಲಿಲ್ಲ. ಅವರು ಕರ್ನಾಟಕಕ್ಕೆ ಅಗೌರವ ಉಂಟುಮಾಡಿದ್ದಾರೆ.












Click it and Unblock the Notifications